ದಿಗ್ಗಜರ ಅನುಪಸ್ಥಿತಿಯಲ್ಲೂ ದಿಟ್ಟತನ ತೋರಿದ ಟೀಂ ಇಂಡಿಯಾ!


Team Udayavani, Dec 30, 2020, 5:38 AM IST

ದಿಗ್ಗಜರ ಅನುಪಸ್ಥಿತಿಯಲ್ಲೂ ದಿಟ್ಟತನ ತೋರಿದ ಟೀಂ ಇಂಡಿಯಾ!

ನಾನು ಬದಲಾದ ದ ಪ್ರತಿನಿಧಿ ಮಾತ್ರ ಎಂದು ವಿರಾಟ್‌ ಕೊಹ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ಹೇಳಿದ್ದರು. ಆ ಮಾತನ್ನು ಆಗ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅದರ ಆಳಕ್ಕೂ ಹೋಗಿರಲಿಲ್ಲ. ಆದ್ದರಿಂದಲೇ ಅದರ ಅರ್ಥ ಆಗಿರಲಿಲ್ಲ. ಆ ಮಾತಿನ ಮರ್ಮ ಮಂಗಳವಾರ ಸರಿಯಾಗಿ ಅರ್ಥವಾಗಿದೆ. ಅದರಲ್ಲೂ ಆಸ್ಟ್ರೇಲಿಯ ಕ್ರಿಕೆಟ್‌ ತಂಡಕ್ಕೆ, ಅಲ್ಲಿನ ದುರಹಂಕಾರಿ ಮಾಜಿ ಕ್ರಿಕೆಟಿಗರಿಗೆ, ಮಾಧ್ಯಮಗಳಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ವರ್ತಮಾನ ಕ್ರಿಕೆಟ್‌ನ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಇಲ್ಲ, ಇನ್ನೊಬ್ಬ ವಿಶ್ವವಿಖ್ಯಾತ ಆಟಗಾರ ರೋಹಿತ್‌ ಶರ್ಮ ಇಲ್ಲ, ಅದ್ಭುತ ವೇಗಿಗಳಾದ ಮೊಹಮ್ಮದ್‌ ಶಮಿ, ಇಶಾಂತ್‌ ಶರ್ಮ ಕೂಡಾ ಇಲ್ಲ.

ಇಷ್ಟೆಲ್ಲ ಇಲ್ಲಗಳ ನಡುವೆ ಅಜಿಂಕ್ಯ ರಹಾನೆ ನೇತೃತ್ವದ ಭಾರತೀಯ ಕ್ರಿಕೆಟ್‌ ತಂಡ, ಎದುರಾಳಿ ಆಸ್ಟ್ರೇಲಿಯ ತಂಡ ವನ್ನು ಅದರ ತವರು ನೆಲದಲ್ಲೇ ಸೋಲಿಸಿದೆ. ಅದರಲ್ಲೂ ಮೆಲ್ಬರ್ನ್ ನಲ್ಲಿ ನಡೆದ ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ. ಇದರಲ್ಲಿ ಅದೃಷ್ಟದಾಟದ ಪಾತ್ರವೇನೂ ಇಲ್ಲ. ಇಡೀ ತಂಡ ಅತ್ಯಂತ ಯೋಜನಾ ಬದ್ಧವಾಗಿ, ಆಕ್ರಮಣಕಾರಿಯಾಗಿ, ಧೈರ್ಯವಾಗಿ ಆಡಿದ್ದರಿಂದ ಇಂತಹ ಜಯ ಸಾಧ್ಯವಾಯಿತು.

ಈ ಗೆಲುವು ಭಾರತಕ್ಕೆ ಒಲಿಯುವ ಮುಂಚೆ ಎಂಥ ಸ್ಥಿತಿಯಿತ್ತು ಗೊತ್ತೇ? ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಭಾರತ ಕೇವಲ 36 ರನ್‌ಗಳಿಗೆ ಆಲೌಟಾಗಿತ್ತು. ಭಾರತದಂತಹ ಕ್ರಿಕೆಟ್‌ ಜಗತ್ತಿನ ಅತ್ಯಂತ ಬಲಿಷ್ಠ ತಂಡಕ್ಕೆ ಇದು ಘೋರ ಅವಮಾನ. ಆಗ ಎದುರಾದ ಸೋಲಿನ ಅನಂತರ ಆಗಿನ ನಾಯಕ ಕೊಹ್ಲಿ, ದಯವಿಟ್ಟು ಹುತ್ತವನ್ನು ಪರ್ವತ ಮಾಡಬೇಡಿ. ನಾವು ಸೋತಿದ್ದೇವೆ ಅಂದರೆ ಎಲ್ಲವೂ ಮುಗಿದುಹೋಯಿತು ಎಂದರ್ಥವಲ್ಲ ಎಂದಿದ್ದರು. ಅದನ್ನು ಹೌದೆಂದು ಅಜಿಂಕ್ಯ ರಹಾನೆ ಪಡೆ ಸಾಬೀತುಪಡಿಸಿದೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದರಿಂದ ಕೊಹ್ಲಿ ಮೊದಲ
ಟೆಸ್ಟ್‌ ಮುಗಿದ ಅನಂತರ ಭಾರತಕ್ಕೆ ಮರಳಿದರು. ಆಗ ರಹಾನೆಗೆ ಸಾರಥ್ಯ ಒಲಿಯಿತು. ಸಾಮಾನ್ಯವಾಗಿ ನಾಯಕತ್ವವನ್ನು ಎಲ್ಲರೂ ಸಂಭ್ರಮಿಸುತ್ತಾರೆ. ರಹಾನೆ ಮಾತ್ರ ಅಂಥ ಸ್ಥಿತಿಯಲ್ಲಿರಲಿಲ್ಲ. ಹಲವು ದಿಗ್ಗಜರ ಅನುಪಸ್ಥಿತಿಯಲ್ಲಿ ಅವರು ಮುಳ್ಳಿನ ಕಿರೀಟ ಹೊತ್ತುಕೊಂಡಿದ್ದರು. ಅಂತಹ ಸ್ಥಿತಿಯನ್ನು ಅವರು ಎಷ್ಟು ಶಾಂತವಾಗಿ ನಿಭಾಯಿಸಿದರೆಂದರೆ ಖಾಯಂ ನಾಯಕ ಕೊಹ್ಲಿ ಸೇರಿದಂತೆ ಕ್ರಿಕೆಟ್‌ ಜಗತ್ತೇ ಅವರನ್ನು ಹೊಗಳಿತು. ಹಾವಭಾವದಲ್ಲಿ ತಣ್ಣಗಿದ್ದ ಅವರು, ತನ್ನ ನಿರ್ಧಾರ ಗಳಲ್ಲಿ, ಆಟದಲ್ಲಿ ಆಕ್ರಮಣಕಾರಿಯಾಗಿದ್ದರು. ಸ್ವತಃ ಬ್ಯಾಟಿಂಗ್‌ ಮಾಡುವಾಗ ಉಳಿದವರಿಗೆ ಮಾದರಿಯಾದರು. ಶತಕ ಬಾರಿಸಿ ತಂಡದ ಗೆಲುವಿಗೆ ಆಧಾರವಾದರು. ಪಂದ್ಯಶ್ರೇಷ್ಠ ಗೌರವ ಅವರಿಗೆ ಒಲಿದುಬಂತು.

ಟೆಸ್ಟ್‌ ಸರಣಿ 1-1ರಿಂದ ಸಮಬಲವಾಯಿತು. ಇನ್ನೂ ಎರಡು ಟೆಸ್ಟ್‌ ಬಾಕಿಯಿದೆ. ರಹಾನೆಯ ನಾಯಕತ್ವದ ಶೈಲಿ ನೋಡಿದರೆ ಇಲ್ಲೂ ಭಾರತ ಗೆದ್ದರೆ ಅಚ್ಚರಿಯಿಲ್ಲ. ಆದರೆ ಗಮನಿಸಲೇಬೇಕಾದ ಕೆಲವು ಸಂಗತಿಗಳಿವೆ. ಚೇತೇಶ್ವರ ಪೂಜಾರ, ಮಾಯಾಂಕ್‌ ಅಗರ್ವಾಲ್‌ ತಮ್ಮ ವೈಫ‌ಲ್ಯದಿಂದ ಹೊರಬರಬೇಕು, ಭಾರತೀಯ ಆಟಗಾರರು ತಮ್ಮ ದೈಹಿಕ ಕ್ಷಮತೆಯನ್ನು ಮೊದಲ ಆದ್ಯತೆಯಾಗಿಟ್ಟುಕೊಳ್ಳಬೇಕು. ಇಲ್ಲದೇ ಹೋದರೆ ಈಗ ಆಗಿರುವಂತೆ ಗಾಯಾಳುಗಳ ಸಂಖ್ಯೆ ಏರುತ್ತದೆ.

ಟಾಪ್ ನ್ಯೂಸ್

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

1-kadkona

Mudigere; ಕಾಫಿ ಎಸ್ಟೇಟ್ ನಲ್ಲಿ ಕಾಡುಕೋಣ ದಾಳಿ: ಅಸ್ಸಾಂ ಮೂಲದ ಕಾರ್ಮಿಕ ಮಹಿಳೆ ಮೃ*ತ್ಯು

1-H-R

Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

Arrested: ಪೈಂಟ್‌ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ

v-narayanan

ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

supreme-Court

Editorial: ಗಿಫ್ಟ್ ಡೀಡ್‌: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು

14

Editorial: ಕಾಮಗಾರಿಯ ವಿಳಂಬ ಸಲ್ಲದು

8

Editorial: ಕುಂದಾಪುರದ ಹೆದ್ದಾರಿ ಸಮಸ್ಯೆ ಸರಿಪಡಿಸಿ

6

Editorial: ಸಂಚಾರ, ಪಾರ್ಕಿಂಗ್‌; ಸಮನ್ವಯದ ಕ್ರಮ ಆಗಬೇಕು

1

Editorial: ಕಾಳ್ಗಿಚ್ಚು ಸಂಭವಿಸುವ ಮುನ್ನವೇ ಇರಲಿ ಎಚ್ಚರಿಕೆ

MUST WATCH

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಹೊಸ ಸೇರ್ಪಡೆ

7

Belman: ಅಗ್ನಿ ದುರಂತದ ಅಪಾಯ; ಟ್ರಾನ್ಸ್‌ಫಾರ್ಮರ್‌ ಸುತ್ತ ಸ್ವಚ್ಛತೆ

6

‌Network Problem: ಹಲೋ…ಹಲೋ…ಹಲೋ ಟೆಸ್ಟಿಂಗ್‌!

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

Visa Extended: ಬಾಂಗ್ಲಾ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವೀಸಾ ಅವಧಿ ವಿಸ್ತರಿಸಿದ ಭಾರತ

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.