ಮೂರು ಶಾಲೆ ದತ್ತು ಪಡೆದ ಸಿದ್ದು
ಶಾಲೆಗಳಿಗೆ ಮಾದರಿ ರೂಪ,1.91 ಕೋಟಿ ಅನುದಾನ ವಿನಿಯೋಗಿಸಲು ಸಿದ್ಧತೆ
Team Udayavani, Dec 30, 2020, 3:42 PM IST
ಬಾಗಲಕೋಟೆ: ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕ್ಷೇತ್ರ ವ್ಯಾಪ್ತಿಯ ಮೂರುಸರ್ಕಾರಿ ಪ್ರೌಢಶಾಲೆಗಳನ್ನು ಅಭಿವೃದ್ಧಿಗೆ ದತ್ತು ಪಡೆದಿದ್ದು, ಬರೋಬ್ಬರಿ1.91 ಕೋಟಿ ಅನುದಾನ ವಿನಿಯೋಗಿಸಲು ಮುಂದಾಗಿದ್ದಾರೆ.
ಬಾದಾಮಿ ಕ್ಷೇತ್ರ ವ್ಯಾಪ್ತಿಯ ಗುಳೇದಗುಡ್ಡದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗಕ್ಕೆ 91.58 ಲಕ್ಷ, ಮುಷ್ಠಿಗೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಪ್ರೌಢಶಾಲೆಗೆ 13.76 ಲಕ್ಷ ಹಾಗೂ ಕೆರೂರಿನ ಸರ್ಕಾರಿ ಪ್ರೌಢಶಾಲೆಗೆ 91.58 ಲಕ್ಷ ಅನುದಾನ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಿದ್ದಾರೆ.
ಕೆರೂರಿಗೆ ಹೊಸ ಪ್ರೌಢಶಾಲೆ: ಕೆರೂರ ಪಟ್ಟಣ ಕೇಂದ್ರವಾದರೂ ಇಲ್ಲಿ ಸರ್ಕಾರಿ ಪ್ರೌಢಶಾಲೆ ಇರಲಿಲ್ಲ. ಕೆರೂರ ಸಹಿತ ಸುತ್ತಲಿನ ಗ್ರಾಮಗಳ ಮಕ್ಕಳು ಖಾಸಗಿ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಆಯ್ಕೆಯಾದ ಮೊದಲ ವರ್ಷವೇ ಕೆರೂರಿನ ಜನ ಹೊಸದಾಗಿ ಪ್ರೌಢಶಾಲೆ ಮಂಜೂರು ಮಾಡಿಸುವ ಒತ್ತಾಯ ಮಾಡಿದ್ದರು.ಜನರ ಬೇಡಿಕೆಯಂತೆ ಒಂದೇ ವರ್ಷದಲ್ಲಿ ಕೆರೂರಿಗೆ ಹೊಸ ಪ್ರೌಢಶಾಲೆ ಮಂಜೂರು ಮಾಡಿಸಿದ್ದು, ಅದರ ಸಮಗ್ರ ಅಭಿವೃದ್ಧಿಗೆ ಇದೀಗ ಆ ಶಾಲೆಯನ್ನು ದತ್ತು ಪಡೆದಿದ್ದಾರೆ. ಸದ್ಯ ಈ ಶಾಲೆ, ಕಾಲೇಜು ವಿಭಾಗದಲ್ಲಿ ನಡೆಯುತ್ತಿದ್ದು ಸ್ವಂತ ಕಟ್ಟಡವಿಲ್ಲ.
ಹೀಗಾಗಿ ಶಾಲಾ ದತ್ತು ಪ್ರಕ್ರಿಯೆಯಲ್ಲಿ 86.08 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 10 ಹೊಸ ಶಾಲಾಕೊಠಡಿ ನಿರ್ಮಾಣ, ಬಾಲಕ-ಬಾಲಕಿಯರಿಗೆಪ್ರತ್ಯೇಕ ಶೌಚಾಲಯ ಹಾಗೂ ವಿದ್ಯಾರ್ಥಿಗಳಿಗೆ ಆಟದ ಮೈದಾನ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಮಷ್ಠಿಗೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೂಡ ದತ್ತು ಪಡೆದಿದ್ದು,ಇಲ್ಲಿನ ಬಿಸಿ ಊಟ ತಯಾರಿಸುವ ಅಡುಗೆ ಕೋಣೆ, ಮಳೆ ಬಂದರೆ ಸಾಕು ಸೋರುತ್ತದೆ. ಇದರ ದುರಸ್ತಿಗಾಗಿ ಇಲಾಖೆಯಿಂದ ಅನುದಾನ ಕೇಳಲಾಗಿತ್ತಾದರೂ ಅದು ವಿಳಂಬವಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರೇ ಈ ಶಾಲೆಯನ್ನು ದತ್ತು ಪಡೆದು ಅಡುಗೆ ಕೋಣೆ, ಮಕ್ಕಳಿಗೆ ಶೌಚಾಲಯ ಕೊರತೆ ನೀಗಿಸಲು ಮುಂದಾಗಿದ್ದಾರೆ.
ಗುಳೇದಗುಡ್ಡ ಶಾಲೆಗೆ ಹೊಸ ಮೆರಗು: ಗುಳೇದಗುಡ್ಡ ಪಟ್ಟಣದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಟ್ಟಡ ಹಳೆಯದಾಗಿದ್ದು, ಪ್ರೌಢ ಶಾಲೆವಿಭಾಗಕ್ಕೆ ಪ್ರತ್ಯೇಕ ಕೊಠಡಿಗಳ ಕೊರತೆ ಇತ್ತು. ಹೀಗಾಗಿ ಇಲ್ಲಿಯೂ 10ಹೊಸ ಶಾಲಾ ಕೊಠಡಿ ನಿರ್ಮಾಣ, ಎರಡು ಪ್ರತ್ಯೇಕ ಶೌಚಾಲಯ ಹಾಗೂವಿದ್ಯಾರ್ಥಿಗಳಿಗೆ ಕ್ರೀಡಾ ಚಟುವಟಿಕೆಗೆ ಅನುಕೂಲ ಕಲ್ಪಿಸಲು ಆಟದ ಮೈದಾನ ನಿರ್ಮಿಸಲು ಒಟ್ಟು 91.58 ಲಕ್ಷ ರೂ. ಅನುದಾನವನ್ನು ಶಾಸಕರ ನಿಧಿಯಿಂದ ನೀಡಿದ್ದಾರೆ.
ಶಾಸಕರ ಶಾಲಾ ದತ್ತು ಕಾರ್ಯಕ್ರಮ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಕೇವಲ ಶಾಲಾ ಕೊಠಡಿ, ಶೌಚಾಲಯ ನಿರ್ಮಾಣದಂತಹಕಾರ್ಯ ಕೈಗೊಳ್ಳದೆ ಸಮುದಾಯದ ಸಹಭಾಗಿತ್ವದೊಂದಿಗೆ ಇಡೀಶಾಲೆಗಳನ್ನು ಮಾದರಿಯನ್ನಾಗಿ ರೂಪಿಸಬೇಕು ಎಂಬುದು ಸಿದ್ದರಾಮಯ್ಯ ಅವರ ನಿಲುವು. ಆದರೆ, ಇದಕ್ಕೆ ಶಾಸಕರ ನಿಧಿಯ ಜತೆಗೆ ವಿಶೇಷ ಅನುದಾನ ನೀಡಬೇಕು ಎಂಬುದು ಅವರ ಒತ್ತಾಯ.
ಮುಷ್ಠಿಗೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ : ಗ್ರಾಮೀಣ ಭಾಗದ ಮಕ್ಕಳಿಗೂ ಎಲ್‌ಕೆಜಿ ಶಿಕ್ಷಣ ದೊರೆಯಬೇಕೆಂಬಸದುದ್ದೇಶದಿಂದ ಮುಷ್ಠಿಗೇರಿಪ್ರಾಥಮಿಕ, ಪ್ರೌಢ ಹಾಗೂಪಿಯು ಕಾಲೇಜ್ ಅನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು 2018ರಅವಧಿಯಲ್ಲಿ ಆರಂಭಿಸಲಾಗಿದೆ. ಈಶಾಲೆಯಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಟ್ಟು 523 ಮಕ್ಕಳುವ್ಯಾಸಂಗ ಮಾಡುತ್ತಿದ್ದು, ಪ್ರೌಢಶಾಲೆವಿಭಾಗದಲ್ಲಿ 246 ಮಕ್ಕಳಿದ್ದು, 4ಕಿಮೀ ದೂರದ ಕರಡಿಗುಡ್ಡ ಗ್ರಾಮದಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿಈ ಶಾಲೆಗೆ ಬರುತ್ತಾರೆ.ಈ ಶಾಲೆಯಲ್ಲಿಕೊಠಡಿಯ ಸಮಸ್ಯೆ ಇಲ್ಲ. ಜಿಪಂನಿಂದಹೊಸದಾಗಿ 2ಕೊಠಡಿ ನಿರ್ಮಿಸಿದ್ದು,ಇಲ್ಲಿರುವ ಅಡುಗೆ ಕೋಣೆಮಳೆ ಬಂದರೆ ಸೋರುತ್ತಿದೆ.ಹೀಗಾಗಿ ಅದನ್ನು ಹೊಸದಾಗಿನಿರ್ಮಿಸಬೇಕಿದೆ. ಮುಖ್ಯವಾಗಿ ಬಾಲಕ- ಬಾಲಕಿಯರಿಗೆಶೌಚಾಲಯ ಸಮಸ್ಯೆ ಇದ್ದು, ಇಲ್ಲಿ1 ಕೊಠಡಿ, ಬಾಲಕ-ಬಾಲಕಿಯರಿಗೆಪ್ರತ್ಯೇಕ ಶೌಚಾಲಯ ನಿರ್ಮಾಣಸೇರಿದಂತೆ ಈ ಶಾಲೆಗೆ ಒಟ್ಟು 13.76ಲಕ್ಷ ಅನುದಾನ ಒದಗಿಸಿದ್ದಾರೆ.ಈಗಾಗಲೇ ಈ ಶಾಲೆಯಶಿಕ್ಷಕರೊಂದಿಗೆ ಚರ್ಚಿಸಿರುವಸಿದ್ದರಾಮಯ್ಯ, ಹಳ್ಳಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು. ಶಾಲೆಗೆಯಾವುದೇ ಅವಶ್ಯಕತೆಗಳಿದ್ದರೂ ತಿಳಿಸಲು ಸೂಚನೆ ಕೂಡ ನೀಡಿದ್ದಾರೆ.
ನಮ್ಮ ಶಾಲೆಯಲ್ಲಿ ಕೊಠಡಿಗಳ ಸಮಸ್ಯೆ ಇಲ್ಲ. ಅಡುಗೆ ಕೋಣೆ ಮಳೆ ಬಂದಾಗ ಸೋರುತ್ತಿದ್ದು, ಅದನ್ನು ಹೊಸದಾಗಿ ನಿರ್ಮಿಸಲುಕೇಳಿಕೊಂಡಿದ್ದೇವೆ. ಶೌಚಾಲಯ ಸಮಸ್ಯೆಯೂ ತೀವ್ರವಾಗಿತ್ತು.ಸಿದ್ದರಾಮಯ್ಯ ಅವರು ಎರಡು ಶೌಚಾಲಯ ನಿರ್ಮಿಸಲು ಅನುದಾನಒದಗಿಸುವುದಾಗಿ ಹೇಳಿದ್ದಾರೆ. ನಮ್ಮ ಶಾಲೆಯನ್ನು ಶಾಸಕರು,ಅಭಿವೃದ್ಧಿಗಾಗಿ ದತ್ತು ಪಡೆದಿರುವುದು ಖುಷಿ ತಂದಿದೆ. – ಲಲಿತಾ ರಾಮನಗೌಡ ಪಾಟೀಲ, ಮುಖ್ಯೋಪಾಧ್ಯಾಯನಿ ಮುಷ್ಠಿಗೇರಿ ಕೆಪಿಎಸ್
ಗುಳೇದಗುಡ್ಡದ ಸರ್ಕಾರಿ ಕಾಲೇಜು : ನೂತನ ತಾಲೂಕು ಕೇಂದ್ರ ಸ್ಥಾನಮಾನ ಹೊಂದಿರುವ ಗುಳೇದಗುಡ್ಡ ಪಟ್ಟಣದಸರ್ಕಾರಿ ಬಾಲಕರ ಪದವಿಪೂರ್ವಕಾಲೇಜಿನ ಪ್ರೌಢ ಶಾಲಾ ವಿಭಾಗವನ್ನುಸಮಗ್ರ ಅಭಿವೃದ್ಧಿಗೆ ಸಿದ್ದರಾಮಯ್ಯದತ್ತು ಪಡೆದಿದ್ದಾರೆ. ಇಲ್ಲಿನ 555ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು,ಕೊಠಡಿಯ ಸಮಸ್ಯೆ ತೀವ್ರವಾಗಿದೆ.ಹೀಗಾಗಿ ಇಲ್ಲಿ 86.08 ಲಕ್ಷ ವೆಚ್ಚದಲ್ಲಿ 10 ಹೊಸ ಶಾಲಾ ಕೊಠಡಿ, 3 ಲಕ್ಷ ವೆಚ್ಚದಲ್ಲಿಎರಡು ಶೌಚಾಲಯ ನಿರ್ಮಾಣ ಸೇರಿಒಟ್ಟು 91.58 ಲಕ್ಷ ಅನುದಾನವನ್ನುಒದಗಿಸಿದ್ದಾರೆ. ಈ ಶಾಲೆಯಲ್ಲಿದ್ದ ಕೊಠಡಿಸಮಸ್ಯೆ ಬಗೆಹರಿಯಲಿದೆ. ಮಾದರಿಪ್ರೌಢ ಶಾಲೆಯನ್ನಾಗಿ ರೂಪಿಸುವನಿಟ್ಟಿನಲ್ಲಿ ಹಲವು ಕಾರ್ಯಕ್ರಮ ರೂಪಿಸಲು, ಶಿಕ್ಷಕರಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ನಮ್ಮ ಶಾಲೆಯ ಅಭಿವೃದ್ಧಿಗಾಗಿ ಶಾಸಕರುದತ್ತು ಪಡೆಯುವುದಾಗಿ ಹೇಳಿದ್ದಾರೆ. ಎಸ್‌ಡಿಎಂಸಿ ಸದಸ್ಯರೊಂದಿಗೆ ಸೇರಿ ಸಮಗ್ರಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ರೂಪಿಸಲಾಗುವುದು. ನಮ್ಮ ಶಾಲೆಗೆ ಇರುವ ಕೊರತೆಗಳಕುರಿತು ಗಮನಕ್ಕೆ ತಂದಿದ್ದೇವೆ. -ಆರ್.ಎಸ್. ಪಾಗಿ, ಮುಖ್ಯಾಧ್ಯಾಪಕ, ಸರ್ಕಾರಿ ಪಪೂ ಕಾಲೇಜ್, ಪ್ರೌಢಶಾಲೆ ವಿಭಾಗ
ಕೆರೂರ ಸರ್ಕಾರಿ ಪ್ರೌಢಶಾಲೆ : ಪಪಂ ಹೊಂದಿದ್ದರೂ ಕೆರೂರಿನಲ್ಲಿ ಸರ್ಕಾರಿಪ್ರೌಢ ಶಾಲೆಯಕೊರತೆ ಇತ್ತು. ಈಪಟ್ಟಣಕ್ಕೆ ಸರ್ಕಾರಿಪ್ರೌಢಶಾಲೆ ಮಂಜೂರು ಮಾಡಿಸುವ ಜತೆಗೆ ಅದರಸಮಗ್ರ ಅಭಿವೃದ್ಧಿಗೆ ಸಿದ್ದರಾಮಯ್ಯಮುಂದಾಗಿದ್ದಾರೆ. 8ರಿಂದ10ನೇ ತರಗತಿವರೆಗೆ 70ವಿದ್ಯಾರ್ಥಿಗಳು ವ್ಯಾಸಂಗಮಾಡುತ್ತಿದ್ದು, ಹೊಸದಾಗಿ ಆರಂಭಗೊಂಡ ಈಶಾಲೆಗೆ ಹೊಸ ಮೆರಗುನೀಡಬೇಕಿದೆ. 10ಶಾಲಾ ಕೊಠಡಿ, ಆಟದ ಮೈದಾನ, ಶೌಚಾಲಯನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.
ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯ ಅವರು ಹೊಸದಾಗಿ ನಮ್ಮಶಾಲೆ ಆರಂಭಿಸಿದ್ದಾರೆ. ಕೊಠಡಿಗಳ ಸಮಸ್ಯೆ ಇದ್ದು, ನಿರ್ಮಿಸಿ ಕೊಡುವುದಾಗಿ ಹೇಳಿದ್ದಾರೆಇಡೀ ಶಾಲೆಯ ಸಮಗ್ರ ಅಭಿವೃದ್ಧಿಗೆ ಎಸ್‌ಡಿಎಂಸಿ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸುತ್ತೇವೆ. – ಎಸ್.ಎಂ. ನದಾಫ, ಮುಖ್ಯೋಪಾಧ್ಯಾಯ, ಸರ್ಕಾರಿ ಪ್ರೌಢಶಾಲೆ, ಕೆರೂರ
ಬಾದಾಮಿ ಕ್ಷೇತ್ರದ ಗುಳೇದಗುಡ್ಡ ಪಟ್ಟಣದ ಸರ್ಕಾರಿಕಾಲೇಜಿನ ಪ್ರೌಢಶಾಲೆ, ಮುಷ್ಠಿಗೇರಿಯಕೆಪಿಎಸ್ ಹಾಗೂ ಕೆರೂರಿನ ಸರ್ಕಾರಿ ಪ್ರೌಢ ಶಾಲೆಗಳನ್ನುದತ್ತು ಪಡೆದಿದ್ದು, ಅವುಗಳ ಸಮಗ್ರ ಅಭಿವೃದ್ಧಿಗೆ ಸಿದ್ದರಾಮಯ್ಯ ಸೂಚನೆನೀಡಿದ್ದಾರೆ. ಈಗಾಗಲೇ ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿದ್ದು, ಗ್ರಾಪಂ ಚುನಾವಣೆ ಬಳಿಕ ಚಾಲನೆ ನೀಡಲಿದ್ದಾರೆ. -ಹೊಳಬಸು ಶೆಟ್ಟರ, ಸಿದ್ದರಾಮಯ್ಯ ಆಪ್ತ, ಕಾಂಗ್ರೆಸ್ ಮುಖಂಡ
ಸರ್ಕಾರಿ ಶಾಲೆಗಳ ಬಲವರ್ಧನೆ ಮಾಡುವುದು ಬಹಳ ಮುಖ್ಯ.ನಮ್ಮ ಕ್ಷೇತ್ರದ ಮೂರು ಶಾಲೆ ದತ್ತುಪಡೆದಿದ್ದು, ಅವುಗಳ ಅಭಿವೃದ್ಧಿಗೆಕ್ರಿಯಾ ಯೋಜನೆ ರೂಪಿಸಿ,ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆಸೂಚನೆ ನೀಡಲಾಗಿದೆ. ಶಾಸಕರ ನಿಧಿ ವಾರ್ಷಿಕಕೇವಲ 2 ಕೋಟಿ ಇರುತ್ತದೆ. ಅದರಲ್ಲೇ ದತ್ತು ಶಾಲೆಗೆ ಅನುದಾನನೀಡಲು ಸರ್ಕಾರ ನಿರ್ದೇಶನ ನೀಡಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗಲ್ಲ. ಶಾಸಕರ ಶಾಲಾ ದತ್ತು ಕಾರ್ಯಕ್ರಮಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. – ಸಿದ್ದರಾಮಯ್ಯ, ಬಾದಾಮಿ ಶಾಸಕ, ವಿಧಾನಸಭೆ ವಿಪಕ್ಷ ನಾಯಕ
-ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ
ಕೇವಲ 12 ರೂ.ಗೆ ಬಿಸಿ ಜುನುಕಾ ರೊಟ್ಟಿ ಊಟ:!ಶಿಕ್ಷಕ ಬಸವರಾಜ ಜಾಲೋಜಿ ನಿಸ್ವಾರ್ಥ ಸೇವೆ
MUST WATCH
ಹೊಸ ಸೇರ್ಪಡೆ
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
SC: ಬಿಯಾಂತ್ ಹಂತಕ ಬಲ್ವಂತ್ ಕ್ಷಮಾದಾನ ಅರ್ಜಿ ಶೀಘ್ರ ಇತ್ಯರ್ಥಕ್ಕೆ ಸುಪ್ರೀಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.