ಮುಂಬಯಿ: ಚರ್ಮ ದಾನದಲ್ಲಿ ಶೇ. 90ರಷ್ಟು ಇಳಿಕೆ

Team Udayavani, Dec 30, 2020, 7:41 PM IST

ಮುಂಬಯಿ: ಚರ್ಮ ದಾನದಲ್ಲಿ ಶೇ. 90ರಷ್ಟು ಇಳಿಕೆ

ಮುಂಬಯಿ, ಡಿ. 29: ಕಳೆದ ವರ್ಷಕ್ಕೆ ಹೋಲಿ ಸಿದರೆ ಕಳೆದ ಒಂಬತ್ತು ತಿಂಗಳಲ್ಲಿ ಮುಂಬಯಿಯಲ್ಲಿ ಚರ್ಮ ದಾನವು ಶೇ. 90ರಷ್ಟು ಕಡಿಮೆಯಾಗಿದೆ. ಕೋವಿಡ್ ಸೋಂಕು ಜತೆಗೆ ಚರ್ಮ ದಾನದ ಬಗ್ಗೆ ಅರಿವಿನ ಕೊರತೆ ಈ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ತೀವ್ರ ವಾದ ಸುಟ್ಟಗಾಯಗಳಿಂದ ಬಳಲುತ್ತಿರುವ ರೋಗಿಗಳು ಸಮಸ್ಯೆಗಳನ್ನು  ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್  ಸೋಂಕು ಪ್ರಾರಂಭವಾಗುವ ಮೊದಲು ತಿಂಗಳಿಗೆ ಸುಮಾರು 20 ಚರ್ಮ ದಾನಗಳನ್ನು ಪಡೆಯುತ್ತಿದ್ದೆವು, ಆದರೆ ಈಗ ಅದು 4ಕ್ಕೆ ಇಳಿದಿದೆ ಎಂದು ನ್ಯಾಶನಲ್‌ ಬರ್ನ್ಸ್ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ| ಸುನೀಲ್‌ ಕೆಸ್ವಾನಿ ಹೇಳಿದ್ದಾರೆ.

ನಗರವು ಮೊದಲ ಕೋವಿಡ್  ಪ್ರಕರಣವನ್ನು ವರದಿ ಮಾಡಿದಾಗ ಕೇಂದ್ರವು ಒಂಬತ್ತು ಚರ್ಮ ದಾನಗಳನ್ನು ಪಡೆದಿತ್ತು. ಎಪ್ರಿಲ್‌ ಮತ್ತು ಆಗಸ್ಟ್‌ ನಡುವೆ ಚರ್ಮ ಬ್ಯಾಂಕ್‌ನಲ್ಲಿ ಒಂದೇ ಒಂದು ದಾನವನ್ನು ದಾಖಲಿಸಲಾಗಿಲ್ಲ. ಸೆಪ್ಟಂಬರ್‌ನಲ್ಲಿ ಐದು ದಾನಗಳನ್ನು ಮಾತ್ರ ದಾಖಲಿಸಲಾಗಿದ್ದು, ಅಕ್ಟೋಬರ್‌ನಲ್ಲಿ ಮೂರು ಮತ್ತು ನವೆಂಬರ್‌ನಲ್ಲಿ ಐದು ಚರ್ಮ ದಾನಗಳನ್ನು ಪಡೆಯಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಜನರಲ್ಲಿ ತಪ್ಪು ಕಲ್ಪನೆ ಮತ್ತು ಚರ್ಮ ದಾನದ ಅಗತ್ಯತೆ ಬಗ್ಗೆ ಅರಿವಿನ ಕೊರತೆ ಸಹಿತ ಹಲವಾರು ಅಂಶಗಳಿಂದಾಗಿ ಮುಂಬಯಿಯಾದ್ಯಂತ ಚರ್ಮದ ದಾನ ಕಡಿಮೆಯಾಗಿದೆ. ನಾಗರಿಕರು ತಾವು ಸೋಂಕಿಗೆ ಒಳಗಾಗಬಹುದೆಂಬ ಭಯ ದಿಂದ ತಮ್ಮ ಪ್ರೀತಿಪಾತ್ರರ ಸಾವಿನ ಬಳಿಕ ಚರ್ಮ ವನ್ನು ದಾನ ಮಾಡಲು ಹಿಂಜರಿಯುತ್ತಿ ದ್ದಾರೆ ಎಂದು ಡಾ| ಕೇಸ್ವಾನಿ ಹೇಳಿದ್ದಾರೆ.

ಚರ್ಮ ದಾನವು ತೀವ್ರವಾಗಿ ಸುಟ್ಟ ರೋಗಿ ಗಳ ಚಿಕಿತ್ಸೆ ಯಲ್ಲಿ ಸಹಾಯ ಮಾಡುತ್ತದೆ.  ತೀವ್ರ ವಾದ ಸುಟ್ಟ ಗಾಯಗಳ ರೋಗಿಗಳಿಗೆ ಅಲೋ ಗ್ರಾಫ್ಟ್ ಚಿಕಿತ್ಸೆ ಯೊಂದಿಗೆ ಗಾಯವನ್ನು ಮುಚ್ಚಲು ಅಂಗ ದಾನಿಗಳಿಂದ ಪಡೆದ ಚರ್ಮವು ಅಗತ್ಯವಾಗಿರುತ್ತದೆ.

ಚರ್ಮವು ಸೋಂಕನ್ನು ತಡೆಗಟ್ಟಲು, ನೋವು ಕಡಿಮೆ ಮಾಡಲು ಮತ್ತು ರಕ್ಷಣೆ ಯನ್ನು ಒದಗಿಸಲು ಮತ್ತು ವೇಗವಾಗಿ ಚೇತ ರಿಕೆ ಹೊಂದಲು ಸಹಾಯ ಮಾಡುತ್ತದೆ. ಸುಟ್ಟ ಜಾಗ ವನ್ನು ತತ್‌ಕ್ಷಣ ದಾನ ಮಾಡಿದ ಚರ್ಮದಿಂದ ಮುಚ್ಚದಿದ್ದರೆ, ರೋಗಿಗಳು ಸೋಂಕಿಗೆ ಗುರಿಯಾಗಬಹುದು. ಇದು ಅವರ ಸಾವಿಗೆ ಕಾರಣವಾಗಬಹುದು.

ಭಾರತದಲ್ಲಿ 13 ಚರ್ಮ ಬ್ಯಾಂಕ್‌ಗಳಿದ್ದು, ಅವುಗಳಲ್ಲಿ ಮೂರು ಮುಂಬಯಿ ಮಹಾನಗರ ಪ್ರದೇಶದ ಎನ್‌ಬಿಸಿ ಐರೋಲಿ, ಲೋಕಮಾನ್ಯ ತಿಲಕ್‌ ಮುನ್ಸಿಪಲ್‌ ಜನರಲ್‌ ಆಸ್ಪತ್ರೆ, ಸಯಾನ್‌ ಮತ್ತು ಮಸಿನಾ ಆಸ್ಪತ್ರೆಯಲ್ಲಿವೆ.

ಟಾಪ್ ನ್ಯೂಸ್

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.