ಅಪಸ್ಮಾರ: ಮೆದುಳಿನ ಕೋಶದಲ್ಲಿ ಅಪಸ್ವರ
Team Udayavani, Dec 30, 2020, 8:09 PM IST
ಚೆನ್ನಾಗಿಯೇ ಮಾತಾಡುತ್ತಾ ಕುಳಿತಿದ್ದು ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬೀಳುವ ಜನರನ್ನುನಾವೆಲ್ಲಾ ನೋಡಿಯೇ ಇರುತ್ತೇವೆ. ಹೀಗೆ ದಿಢೀರ್ ಕಾಣಿಸಿಕೊಳ್ಳುವಕಾಯಿಲೆಯೇ ಮೂರ್ಛೆ ರೋಗ. ಮಿದುಳಿನ ಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ ಮೂರ್ಛೆ ರೋಗ ಜೊತೆಯಾಗುತ್ತದೆ. ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದು, ಪಥ್ಯ ಅನುಸರಿಸಿದರೆ ಮೂರ್ಛೆ ರೋಗದಿಂದಪಾರಾಗಬಹುದು.
ಈ ಕಾಯಿಲೆಯು ಯಾವಾಗಲಾದರೂ, ಯಾವ ವಯಸ್ಸಿನವರಲ್ಲಾದರೂ ಬರಬಹುದು. ದೇವರ ಶಾಪದಕಾರಣಕ್ಕೆ ಈ ಕಾಯಿಲೆ ಬಂದಿದೆ ಎಂದುನಂಬುವ ಕೆಲವರು, ಅದು ತಂತಾನೇಹೋಗಿಬಿಡುತ್ತದೆ ಎಂದೂ ವಾದಿಸುತ್ತ ಚಿಕಿತ್ಸೆಪಡೆಯುವುದೇ ಇಲ್ಲ. ಇದರಿಂದಕಾಯಿಲೆಯು ಉಲ್ಬಣಿಸಿ ಭವಿಷ್ಯದಲ್ಲಿಹೆಚ್ಚಿನ ತೊಂದರೆ ಜೊತೆಯಾಗುವ ಸಾಧ್ಯತೆ ಇದ್ದೇ ಇದೆ.
ಮೆದುಳಿಗೆ ಜ್ವರ ಬರುವ ಕಾರಣಕ್ಕೆ, ರಸ್ತೆಅಪಘಾತದಲ್ಲಿ ತಲೆಗೆ ಪೆಟ್ಟು ಮಾಡಿಕೊಂಡಕಾರಣಕ್ಕೆ, ಸೆರೆಬ್ರಲ್ ಪಾಲ್ಸಿಯ ಕಾರಣಕ್ಕೆಮತ್ತು ಅಪೌಷ್ಟಿದಾಯಕ ಆಹಾರಸೇವನೆಯ ಕಾರಣಕ್ಕೆ ಅಪಸ್ಮಾರಜೊತೆಯಾಗಬಹುದು. ಸೂಕ್ತ ಚಿಕಿತ್ಸೆಪಡೆದು ವೈದ್ಯರ ಸಲಹೆಯನ್ನುಕಡ್ಡಾಯವಾಗಿ ಪಾಲಿಸಿದರೆ 3ರಿಂದ 5ವರ್ಷದಲ್ಲಿ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
ಮೂರ್ಛೆ ರೋಗದ ಸಮಸ್ಯೆ ಇರುವವರು :
- ವಾಹನ ಚಾಲನೆ ಮಾಡಬಾರದು.
- ಬೆಂಕಿ, ನೀರು, ಅತಿ ಎತ್ತರದ ಸ್ಥಳದಲ್ಲಿ ಕೆಲಸ ಮಾಡಲು ಹೋಗಬಾರದು.
- ಹಣ್ಣು- ತರಕಾರಿಗಳನ್ನು ಉಪ್ಪಿನ ನೀರಿನಲ್ಲಿ ತೊಳೆದು ಸೇವಿಸಬೇಕು.
- ಮಾಂಸಾಹಾರವನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು.
- ವೈದ್ಯರು ಹೇಳಿದ ಪಥ್ಯವನ್ನು ತಪ್ಪದೇ ಪಾಲಿಸಬೇಕು.
ಕಾರಣಗಳು :
- ನಿದ್ದೆಯ ಅಭಾವ
- ಮಾತ್ರೆ ಸೇವನೆಯನ್ನು ತಪ್ಪಿಸುವುದು.
- ಅತಿಯಾದ ಒತ್ತಡದಲ್ಲಿ ಕೆಲಸ ಮಾಡುವುದು
- ಮದ್ಯಪಾನ
-ಡಾ. ರೂಪಾ ಕೆ. ಜಿ. ಶಿವಮೊಗ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.