ಸಾವಿರ ಹೆಣ್ಣು ಮಕ್ಕಳ ಮತಾಂತರ
ಪಾಕ್ನಲ್ಲಿ ಹಿಂದೂ, ಸಿಖ್ಬ್, ಕ್ರೈಸ್ತ ಧರ್ಮದವರೇ ಟಾರ್ಗೆಟ್
Team Udayavani, Dec 31, 2020, 3:01 AM IST
ಸಾಂದರ್ಭಿಕ ಚಿತ್ರ
ಕರಾಚಿ: ಪಾಕಿಸ್ಥಾನದಲ್ಲಿ ಪ್ರತೀ ವರ್ಷ 1 ಸಾವಿರ ಹಿಂದೂ, ಸಿಕ್ಖ್, ಕ್ರೈಸ್ತ ಸಮುದಾಯದ 14 ವರ್ಷದೊಳಗಿನ ಹೆಣ್ಣು ಮಕ್ಕಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ!
“ಅಸೋಸಿಯೇಟೆಡ್ ಪ್ರಸ್’ ಸುದ್ದಿಸಂಸ್ಥೆಯ ತನಿಖಾ ವರದಿ, “ವಿವಾಹ ಉದ್ದೇಶಕ್ಕಾಗಿ ಇಂಥ ಕೃತ್ಯ ಎಸಲಾಗುತ್ತಿದೆ’ ಎಂಬ ಸಂಗತಿ ಬಹಿರಂಗಪಡಿಸಿದೆ. “ಅನ್ಯಧರ್ಮದ 14 ವರ್ಷದೊಳಗಿನ ಹೆಣ್ಮಕ್ಕಳ ಮತಾಂತರ ಲಾಕ್ಡೌನ್ ವೇಳೆ ಅತೀ ಹೆಚ್ಚು ನಡೆದಿದೆ’ ಎಂದು ವರದಿ ಹೇಳಿದೆ.
“ಲಾಕ್ಡೌನ್ನಲ್ಲಿ ಶಾಲೆಗಳು ಮುಚ್ಚಿದ್ದ ಕಾರಣ ಹೆಣ್ಮಕ್ಕಳು ಮನೆಯಲ್ಲೇ ಉಳಿದಿದ್ದರು. ಅವರ ಕುಟುಂಬಗಳು ಸಾಲದ ಸುಳಿಗೆ ಸಿಲುಕಿದ್ದವು. ಇದನ್ನೇ ದುರುಪಯೋಗಪಡಿಸಿಕೊಂಡ ವಧು ಕಳ್ಳಸಾಗಣೆದಾರರು ಇಂಟರ್ನೆಟ್ಗಳ ಮೂಲಕ ಇಂಥ ಕುಟುಂಬ ಗಳನ್ನು ಸಂಪರ್ಕಿಸಿ, ವ್ಯವಹಾರ ನಡೆಸಿದ್ದಾರೆ’ ಎಂದು ಮಾನವ ಹಕ್ಕು ಹೋರಾಟಗಾರರು ತಿಳಿಸಿದ್ದಾರೆ.
“ಹೆಣ್ಮಕ್ಕಳ ಕುಟುಂಬದವರು ಮತಾಂತರಕ್ಕೆ ಒಪ್ಪದಿದ್ದಾಗ ಹಲವರನ್ನು ಕಿಡ್ನ್ಯಾಪ್ ಮಾಡಿ, ಅತ್ಯಾಚಾರ ಎಸಗಲಾಗಿದೆ. ಕೆಲವು ಪ್ರಕರಣಗಳಲ್ಲಿ ಪೋಷಕರು ಸಾಲ ಪಡೆದ ಕಾರಣಕ್ಕಾಗಿ, ಹೆಣ್ಮಕ್ಕಳನ್ನು ಬಲವಂತವಾಗಿ ಮತಾಂತರಿಸಲಾಗಿದೆ. ಇಂಥ ಹೆಣ್ಮಕ್ಕಳನ್ನು ಇಸ್ಲಾಂ ವೃದ್ಧರು ಮದುವೆಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಸಾಲು ಸಾಲು ಪ್ರಕರಣ
ಚರ್ಚ್ನಲ್ಲಿ ಸಂಗೀತ ಹೇಳುತ್ತಿದ್ದ 14 ವರ್ಷದ ನೇಹಾ ಇತ್ತೀಚೆಗೆ ಹಾಡೋದನ್ನೇ ನಿಲ್ಲಿಸಿದ್ದಾಳೆ. ಅವಳನ್ನು ಕಳೆದ ವಾರ ಬಲವಂತವಾಗಿ ಇಸ್ಲಾಮ್ಗೆ ಮತಾಂತರ ಮಾಡಲಾಗಿದ್ದು, ಇಬ್ಬರು ಮಕ್ಕಳ ತಂದೆ, 45 ವರ್ಷದ ವ್ಯಕ್ತಿ ಈಕೆಯನ್ನು ನಿಖಾ ಆಗಿದ್ದಾನೆ. ಆದರೆ ಎಳೆ ಹೆಣ್ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಈಕೆಯ ಗಂಡನನ್ನು ಜೈಲಿಗಟ್ಟಲಾಗಿದೆ. ಇತ್ತೀಚೆಗಷ್ಟೇ, ಸಿಂಧ್ ಪ್ರಾಂತ್ಯದಲ್ಲಿ 13 ವರ್ಷದ ಸೋನಿಯಾ ಕುಮಾರಿಯನ್ನು ಅಪಹರಿಸಿ, ಮತಾಂತರ ಮಾಡಲಾಗಿದೆ. ಕರಾಚಿಯ ತನ್ನ ಮನೆಯಿಂದ ಕಣ್ಮರೆಯಾಗಿರುವ 13 ವರ್ಷದ ಅಝೂì ರಾಜಾ, ಇನ್ನೂ ಪತ್ತೆಯಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.