ಹೊಸ ವರ್ಷ ಸಂಭ್ರಮ; ಇಂದು ಶಾಲೆಯತ್ತ ವಿದ್ಯಾರ್ಥಿಗಳು
Team Udayavani, Jan 1, 2021, 7:00 AM IST
ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ 9 ತಿಂಗಳಿನಿಂದ ಮುಚ್ಚಿದ್ದ ಶಾಲೆಗಳ ಬಾಗಿಲು ತೆರೆಯಲು ಸರಕಾರ ಸಮ್ಮತಿ ಸೂಚಿಸಿದ್ದು, ಇಂದಿನಿಂದ (ಜ.1 ರಿಂದ) ಮಕ್ಕಳ ಕಲರವ ಆರಂಭವಾಗಲಿದೆ.
ಕೊರೊನಾ ನಿಯಮಾವಳಿ ಪಾಲನೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇಟ್ಟಿರುವ ಶಿಕ್ಷಕರು ಗುರುವಾರ ಶಾಲಾ ಆವರಣವನ್ನು ಶುಚಿಗೊಳಿಸಿ, ಮಕ್ಕಳ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಾನಾ ಕಲಾಕೃತಿ, ಸೂಚನ ಫಲಕಗಳೊಂದಿಗೆ ಕೋವಿಡ್‌ನ ಜಾಗೃತಿ ಮೂಡಿಸಿ ಮಕ್ಕಳನ್ನು ಮತ್ತೆ ಶಾಲೆಗಳಲ್ಲಿ ಪ್ರೀತಿಯಿಂದ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಶಾಲೆಯ ಆವರಣದಲ್ಲಿ ಬೆಳೆದಿದ್ದ ಕಸ ಕಡ್ಡಿಗಳನ್ನು ತೆರೆವುಗೊಳಿಸಿ, ನೀರು ಹಾಕಿ ಶುಚಿ ಮಾಡಲಾಗಿದೆ. ಸರಕಾರಿ ಶಾಲೆಯ ಶಿಕ್ಷಕರು ಸ್ವಾಗತಕ್ಕಾಗಿ ಶಾಲಾ ಆವರಣದಲ್ಲಿ ರಂಗೋಲಿ ಇಟ್ಟು, ಮಾವಿನ ತೋರಣ ಕಟ್ಟಿದ್ದಾರೆ.
ಶಿಕ್ಷಕನಿಗೆ ಕೊರೊನಾ
ಜಾನುವಾರುಕಟ್ಟೆಯ ಎಚ್‌ಪಿಎಸ್ ಶಾಲೆಯ ಓರ್ವ ಶಿಕ್ಷಕನಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆ ಶಾಲೆಯಲ್ಲಿ ವಿದ್ಯಾಗಮವನ್ನು ರದ್ದು ಮಾಡಲಾಗಿದೆ ಎಂದು ಬ್ರಹ್ಮಾವರ ವಲಯ ಬಿಇಒ ಅವರು ತಿಳಿಸಿದ್ದಾರೆ.
ಸಿದ್ಧತೆ ಸಂಪೂರ್ಣ
ಜಿಲ್ಲೆಯಲ್ಲಿ 6ರಿಂದ 9ನೇ ತರಗತಿವರೆಗೆ ವಿದ್ಯಾಗಮಕ್ಕೆ 467 ಸರಕಾರಿ ಶಾಲೆ, ಅನುದಾನಿತ 228 ಹಾಗೂ ಅನುದಾನ ರಹಿತ 175 ಶಾಲೆಗಳಿದ್ದು, ಎಸೆಸೆಲ್ಸಿ ವಿದ್ಯಾರ್ಥಿಗಳಿರುವ 106 ಸರಕಾರಿ ಶಾಲೆ ಸೇರಿದಂತೆ 300 ಕ್ಕೂ ಅಧಿಕ ಶಾಲೆಯಲ್ಲಿ ತರಗತಿ ಆರಂಭವಾಗಲಿದೆ. ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಶಾಲೆಯನ್ನು ಸ್ಯಾನಿಟೈಸ್ ಮಾಡಿದ್ದೇವೆ. ನಮ್ಮೆಲ್ಲ ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದಾರೆ. ದ್ವಿತೀಯ ಪಿಯುಸಿ 14,791 ವಿದ್ಯಾರ್ಥಿಗಳು, 6 ರಿಂದ 9 ವಿದ್ಯಾಗಮ 64 ಸಾವಿರ ವಿದ್ಯಾರ್ಥಿ, 10 ನೇ 15829 ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಇದ್ದಾರೆ ಎಂದು ಡಿಡಿಪಿಐ ಮತ್ತು ಡಿಡಿಪಿಯು ಎನ್.ಎಚ್. ನಾಗೂರ, ಭಗವಂತ ಕಟ್ಟಿಮನಿ ಅವರು ತಿಳಿಸಿದ್ದಾರೆ.
ಉಡುಪಿ: ಪ್ರವೇಶ ದ್ವಾರಕ್ಕೆ ಮಾವಿನ ತೋರಣ ಕಟ್ಟಿ ಮಕ್ಕಳ ಸ್ವಾಗತಕ್ಕೆ ಸಿದ್ಧರಾದ ಶಿಕ್ಷಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.