1000 ನರ್ಸ್‌ಗಳಿಗೆ ವಿದೇಶದಲ್ಲಿ ಉದ್ಯೋಗ

ಯುರೋಪ್‌ ಸೇರಿ ಅನೇಕ ದೇಶಗಳ ಆಸ್ಪತ್ರೆಗಳಲ್ಲಿ ಕೆಲಸ „ ವಾರ್ಷಿಕ ತಲಾ 20 ಲಕ್ಷ ರೂ. ಪ್ಯಾಕೇಜ್‌: ಡಿಸಿಎಂ

Team Udayavani, Jan 1, 2021, 12:55 PM IST

1000 ನರ್ಸ್‌ಗಳಿಗೆ ವಿದೇಶದಲ್ಲಿ ಉದ್ಯೋಗ

ಬೆಂಗಳೂರು: ಕೋವಿಡ್ ಬಿಕ್ಕಟ್ಟಿನ ನಡುವೆಯೂ ನಮ್ಮ ರಾಜ್ಯದ ನರ್ಸ್‌ಗಳಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದು,ಯುರೋಪ್‌ ಸೇರಿ ಅನೇಕ ದೇಶಗಳ ಆಸ್ಪತ್ರೆಗಳು ಅವರಿಗೆ ಉದ್ಯೋಗಾವಕಾಶ ನೀಡಲು ಮುಂದೆ ಬಂದಿವೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಈ ನಿಟ್ಟಿನಲ್ಲಿ ಮೊದಲಿಗೆ ಬ್ರಿಟನ್‌ಸರ್ಕಾರದಿಂದ ಒಂದು ಸಾವಿರನರ್ಸ್‌ಗಳಿಗೆ ಬೇಡಿಕೆ ಬಂದಿದೆ.ಅಷ್ಟೂ ಮಂದಿಶುಶ್ರೂಷಕಿಯರನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿದರು.

ಬ್ರಿಟನ್‌ಗೆ ಕಳಿಸಲಾಗುತ್ತಿರುವ ಶುಶ್ರೂಷಕಿಯರಿಗೆ ಸಂವಹನ ಕಲೆ ಸೇರಿ ಅವರವೃತ್ತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಕುಶಲತರಬೇತಿಯನ್ನು ಕರ್ನಾಟಕ ವೃತ್ತಿ ತರಬೇತಿಮತ್ತು ಕೌಶಲ್ಯಾಭಿವೃದ್ಧಿ ನಿಗಮ ವತಿಯಿಂದನೀಡಲಾಗುತ್ತದೆ. ಈ ನರ್ಸ್‌ಗಳಿಗೆ ವಾರ್ಷಿಕ ತಲಾ 20 ಲಕ್ಷ ರೂ. ಪ್ಯಾಕೇಜ್‌ ನಿಗದಿ ಮಾಡಿದೆಎಂದರು.

ವಿದೇಶದಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ಸರ್ಕಾರವೇ ಅಂತಾರಾಷ್ಟ್ರೀಯ ವಲಸೆ ಕೇಂದ್ರ ಸ್ಥಾಪಿಸಿದೆ. ಇದರ ಮೂಲಕಇಷ್ಟೂ ಶುಶ್ರೂಷಕಿಯರನ್ನು ಕಳಿಸಲಾಗುತ್ತಿದ್ದು,ಅವರ ಜತೆ ನಿರಂತರವಾಗಿ ಈ ಕೇಂದ್ರ ಸಂಪರ್ಕದಲ್ಲಿರುತ್ತದೆ ಹಾಗೂ ಅವರ ಕುಂದುಕೊರತೆಬಗ್ಗೆ ನಿಗಾ ಇರಿಸುತ್ತದೆ. ಯಾವುದೇ ಸಮಸ್ಯೆಅಥವಾ ದೂರು ಇದ್ದರೆ ಬ್ರಿಟನ್‌ನಿಂದಲೇಇಲ್ಲಿಗೆ ತಿಳಿಸಬಹುದು.ಕೂಡಲೇ ಅವರಿಗೆಸೂಕ್ತ ಸಹಕಾರ ಒದಗಿಸಲಾಗುವುದೆಂದರು. ಸದ್ಯಕ್ಕೆ ರಾಜ್ಯದಲ್ಲಿ ಕುಶಲತೆಯುಳ್ಳ ಮಾನವಸಂಪನ್ಮೂಲ ವಿಫ‌ುಲವಾಗಿದ್ದು, ಇಂಥ ನಿರುದ್ಯೋಗಿ ಯುವಜನರಿಗೆ ಜಾಗತಿಕ ಮಟ್ಟದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ವಲಸೆ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.

ಇದನ್ನೂ ಓದಿ : ಪೇಜಾವರ ಶ್ರೀಗಳಿಗೆ ‘ವೈ’ ಶ್ರೇಣಿ ಭದ್ರತೆ

ರಾಮನಗರದಲ್ಲಿ ಬಿಜೆಪಿ ಮೂರಂಕಿ: ಡಿಸಿಎಂ :

ರಾಮನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿ, ಶೂನ್ಯಕ್ಕೆ ಸೀಮಿತವಾಗಿದ್ದ ಬಿಜೆಪಿ ಸಂಖ್ಯಾಬಲ ಇದೀಗ ಮೂರಂಕಿ ದಾಟಿದ್ದು ಕಾಂಗ್ರೆಸ್‌-ಜೆಡಿಎಸ್‌ ಬುಡ ಅಲ್ಲಾಡಿಸಿದೆ ಎಂದು ಹೇಳಿದರು. ಬೆಂಗಳೂರು ನಗರಕ್ಕೆ ಅತಿ ಸನಿಹ ಇರುವ ಜಿಲ್ಲೆಯಲ್ಲಿ ಕಾಂಗ್ರೆಸ್‌,ಜೆಡಿಎಸ್‌ ಬಲಾಡ್ಯ ನಾಯಕರಿದ್ದರೂ ಬಿಜೆಪಿ ಬೆಂಬಲಿತರು ಛಲದಿಂದ ಹೋರಾಟ ಮಾಡಿದ್ದಾರೆ. ಜಿಲ್ಲೆಯ 4 ತಾಲೂಕುಗಳಲ್ಲಿ 234 ಕಡೆ ಬಿಜೆಪಿ ಸಾಧಿಸಿದ್ದಾರೆ ಎಂದು ತಿಳಿಸಿದರು.

ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮತ್ತೂಂದೆಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಶಕ್ತಿಗಳನ್ನು ಪಕ್ಕಾ ಕಾರ್ಯತಂತ್ರದ ಮೂಲಕ ನಮ್ಮ ಕಾರ್ಯಕರ್ತರು ಹಿಮ್ಮೆಟ್ಟಿಸಿ ಗೆಲವು ಪಡೆದಿದ್ದಾರೆಂದರು. ರಾಮನಗರ ಜಿಲ್ಲೆಯಲ್ಲಿ ಒಟ್ಟು 234 ಗ್ರಾಪಂ ಕ್ಷೇತ್ರಗಳಲ್ಲಿ ನಮಗೆ ಗೆಲುವು ಸಿಕ್ಕಿದೆ. ಕನಕಪುರದಲ್ಲೇ 52 ಕಡೆ ಗೆದ್ದಿದ್ದೇವೆ. ಅಲ್ಲಿ ಕನಕಪುರ ಬಂಡೆ ಸ್ಪಷ್ಟವಾಗಿ ಬಿರುಕು ಬಿಟ್ಟಂತೆ ಆಗಿದೆ. ಅಲ್ಲಿ ವಿಶೇಷ ಎಂದರೆ ಜೆಡಿಎಸ್‌ಗಿಂತ 45 ಹೆಚ್ಚು ಸ್ಥಾನ ಗೆದ್ದಿದ್ದೇವೆ. ಮಾಗಡಿಯಲ್ಲಿ 40ಕ್ಕೂ ಹೆಚ್ಚು ಸ್ಥಾನ, ರಾಮನಗರದಲ್ಲಿ 22. ಚನ್ನಪಟ್ಟಣದಲ್ಲಿ 142 ಕಡೆ ಗೆಲುವು ಪಡೆದಿದ್ದೇವೆಂದರು.

ಹೊಸ ವರ್ಷಕ್ಕೆ ಮುನ್ನ ಕಡತ ವಿಲೇವಾರಿ :

ಉನ್ನತ ಶಿಕ್ಷಣ ಖಾತೆಯನ್ನು ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಮುನ್ನಾ ದಿನವಾದ ಗುರುವಾರ ತಮ್ಮ ಮುಂದೆ ಇದ್ದ ಎಲ್ಲಾ ಕಡತಗಳನ್ನು ವಿಲೇವಾರಿ ಮಾಡಿದ್ದಾರೆ.

ಈ ಮೂಲಕ ಅವರು 2020 ವರ್ಷವನ್ನು ಮುಕ್ತಾಯಗೊಳಿಸಿ ಒಂದು ಅರ್ಥಪೂರ್ಣ ಸಂಪ್ರದಾಯಕ್ಕೆ ನಾಂದಿ ಹಾಡಿದರಲ್ಲದೆ, ರಾತ್ರಿ 9 ಗಂಟೆವರೆಗೂ ಗೃಹ ಕಚೇರಿಯಲ್ಲೇ ಕೂತು ಬಾಕಿ ಇದ್ದ ಸುಮಾರು 40 ಕಡತ ವಿಲೇವಾರಿ ಮಾಡುವುದರ ಮೂಲಕ ಹೊಸ ವರ್ಷಾಚರಿಸಿದರು. 2021 ವರ್ಷವನ್ನು ಇ-ಆಫೀಸ್‌ ವ್ಯವಸ್ಥೆಯ ಮೂಲಕ ನೂತನ ಆರಂಭಕ್ಕೆ ಎದುರು ನೋಡುತ್ತಿದ್ದೇನೆ. ಜನಪರ ಕಾರ್ಯಗಳ ಅನುಷ್ಠಾನಕ್ಕೆ ಈ ರೀತಿಯಲ್ಲಿ ಕ್ಷಿಪ್ರ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲು ಸದಾ ಬದ್ಧನಾಗಿದ್ದೇನೆ. ಇವತ್ತಿನವರೆಗೆ ಇದ್ದ ಎಲ್ಲಾ ಕಡತ ವಿಲೇವಾರಿ ಮಾಡಿದ್ದು, ನನ್ನ ವ್ಯಾಪ್ತಿಯ ಯಾವುದೇ ಇಲಾಖೆಯಲ್ಲಿ ಯಾವ ಕಡತವೂ ಬಾಕಿ ಬಿದ್ದಿಲ್ಲ ಎಂದು ಡಿಸಿಎಂ ತಿಳಿಸಿದ್ದಾರೆ. ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಇ-ಆಫೀಸ್‌ ಮೂಲಕವೇ ನಡೆಯುತ್ತಿದೆ. ಹೊಸ ವರ್ಷದ ಮೊದಲ ದಿನದಿಂದ ಎಲ್ಲಾ ವಿಶ್ವವಿದ್ಯಾಲಯಗಳ ವ್ಯವಹಾರಗಳು ಸಂಪೂರ್ಣವಾಗಿ ಇ-ಆಫೀಸ್‌ ಮೂಲಕವೇ ನಡೆಯುತ್ತವೆ. ಎಲ್ಲಾ ಕಡತ, ಪತ್ರಗಳು ಇ-ಆಫೀಸ್‌ ಮೂಲಕವೇ ನಡೆಯಲಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

CM-Office

By Election Result: ನಾನು ದಂತದ ಗೋಪುರದಲ್ಲಿ ಕೂತವನಲ್ಲ,ಜನರೊಂದಿಗೆ ಸದಾ ಒಡನಾಟವಿದೆ: ಸಿಎಂ

1-ree

Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್

mamata

West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ

55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್‌ – ಮನರಂಜನೆಗೆ ಹೊಸ ಆಯಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ

7

Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Katpadi: ಸ್ಕೂಟರ್‌ಗೆ ಟೆಂಪೋ ಢಿಕ್ಕಿ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.