ಎಂಆರ್ ಹೋಯ್ತು ಡಿಆರ್ ಬಂತು
ಅನುಮತಿ ಬೇಕಿಲ್ಲ ಎಂದಿದ್ದ ರವಿ ಶ್ರೀವತ್ಸ ಈಗ ಸಿನಿಮಾನೇ ಕೈ ಬಿಟ್ರಾ!
Team Udayavani, Jan 1, 2021, 3:08 PM IST
ಕೆಲ ದಿನಗಳ ಹಿಂದಷ್ಟೇ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಜೀವನವನ್ನು ಬಯೋಪಿಕ್ ನಲ್ಲಿ ತೆರೆಮೇಲೆ ತರುವುದಾಗಿ ನಿರ್ದೇಶಕ ರವಿ ಶ್ರೀವತ್ಸ ಘೋಷಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ತಮ್ಮ ಈ ಚಿತ್ರಕ್ಕೆ “ಎಂ.ಆರ್’ ಎಂದು ಟೈಟಲ್ ಕೂಡ ಇಟ್ಟಿದ್ದ ರವಿ ಶ್ರೀವತ್ಸ ಅದ್ಧೂರಿಯಾಗಿ ಚಿತ್ರದ ಮುಹೂರ್ತವನ್ನೂ ನೆರವೇರಿಸಿದ್ದರು. ಆದರೆ ಯಾವಾಗ ರವಿ ಶ್ರೀವತ್ಸ ತಮ್ಮ ಚಿತ್ರಕ್ಕೆ “ಎಂ.ಆರ್’ ಎಂದು ಹೆಸರಿಟ್ಟರೋ, ಆಗಲೇ ಈ ಚಿತ್ರದ ಬಗ್ಗೆ ಸಣ್ಣ ವಿವಾದವೊಂದು ಹೊಗೆಯಾಡಲು ಆರಂಭಿಸಿತು.
ಮುತ್ತಪ್ಪ ರೈ ಬಯೋಪಿಕ್ ತೆರೆಗೆ ತರುವುದರ ಬಗ್ಗೆ ಅವರ ಕುಟುಂಬ ವರ್ಗದ ಅನುಮತಿ, ಹಕ್ಕು ಸ್ವಾಮ್ಯದಬಗ್ಗೆ ಆರಂಭದಲ್ಲಿ ಪತ್ರಕರ್ತರ ಪ್ರಶ್ನೆಗಅತಿಯಾದ ಆತ್ಮವಿಶ್ವಾಸದಿಂದ ಉಡಾಫೆಯಉತ್ತರ ನೀಡಿದ್ದ ನಿರ್ದೇಶಕ ರವಿ ಶ್ರೀವತ್ಸ, “ಯಾರು ಏನೇ ಹೇಳಿದ್ರೂ “ಎಂ.ಆರ್’ ಸಿನಿಮಾ ಮಾಡಿಯೇ ಸಿದ್ಧ, ದೇವರ ಸಿನಿಮಾ ಮಾಡಲು ಯಾರ ಅನುಮತಿ ಬೇಕು’ ಎಂದಿದ್ದರು.
ಅದರೆ, ಇದಾದ ಕೆಲ ದಿನಗಳೊಳಗೆ ಮತ್ತೂಬ್ಬ ನಿರ್ಮಾಪಕ ಎಲ್. ಪದ್ಮನಾಭ್,ಮುತ್ತಪ್ಪ ರೈ ಬಯೋಪಿಕ್ ಮಾಡುವುದಕ್ಕೆಯಾರಿಗೂ ಹಕ್ಕಿಲ್ಲ. ಮುತ್ತಪ್ಪ ರೈ ಬದುಕಿದ್ದಾಗಲೇ ಈಕುರಿತು ಅವರೊಂದಿಗೆ ಚರ್ಚಿಸಿದ್ದು, ಅವರಜೀವನ ಕಥೆ ಮಾಡುವ ಕುರಿತುಈಗಾಗಲೇ ವಿಲ್ ಕೂಡ ಮಾಡಿದ್ದಾರೆ ಎಂದುಅಚ್ಚರಿಯ ಹೇಳಿಕೆಯನ್ನು ನೀಡಿದ್ದರು. ಯಾವಾಗ”ಎಂ.ಆರ್’ ಚಿತ್ರ ವಿವಾದ ಸ್ವರೂಪ ಪಡೆದುಕೊಳ್ಳಲುಶುರುವಾಯಿತೋ, ನಿರ್ದೇಶಕ ರವಿ ಶ್ರೀವತ್ಸಅನಿವಾರ್ಯವಾಗಿ ತಮ್ಮ “ಎಂ.ಆರ್’ ಚಿತ್ರದ ಟೈಟಲ್‌ಅನ್ನು ಬದಲಾಯಿಸಲು ಮುಂದಾಗಿದ್ದಾರೆ.
ಈ ಬಗ್ಗೆ ದಿಢೀರ್ ಆಗಿ ಒಂದು ಪತ್ರಿಕಾಗೋಷ್ಠಿ ನಡೆಸಿದ ರವಿ ಶ್ರೀವತ್ಸ, ತಮ್ಮ ಚಿತ್ರ “ಎಂ.ಆರ್’ ಅಲ್ಲ, “ಡಿ.ಆರ್’ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ “ಡಿ.ಆರ್’ ಚಿತ್ರದ ಹೊಸ ಪೋಸ್ಟರ್‌ವೊಂದನ್ನು ರಿಲೀಸ್ ಮಾಡಿದ್ದಾರೆ. ಇದೇ ವೇಳೆ ಮಾತನಾಡಿರುವ ರವಿ ಶ್ರೀವತ್ಸ, “ನಾನು ಮುತ್ತಪ್ಪ ರೈ ಬಗ್ಗೆ ಸ್ಟಡಿ ಮಾಡಿದ್ದೇನೆ. ಸಿಡ್ನಿಗೂ ಹೋಗಿ ಮಾಹಿತಿ ಕಲೆ ಹಾಕಿದ್ದೆ. ಆದರೆ ಆಗ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆರ್‌ಜಿವಿ ಕಥೆಯಾದರೆ, ಸರ್ಕಾರಕ್ಕೆ ಡಾಕ್ಯುಮೆಂಟ್ ಆಗುತ್ತೆ ಎಂಬ ಭಯದಿಂದ ಮಾಡಲಾಗಲಿಲ್ಲ. ನಾನು ಸಿನಿಮಾ ಬಿಟ್ಟುಕೊಡ್ತೀನಿ. ಅವರು ಮಾಡಿ ರಿಲೀಸ್ ಮಾಡಿದ ಬಳಿಕ ನಾನು ಈ ಸಿನಿಮಾ ಮಾಡ್ತೀನಿ’ ಎಂದಿದ್ದಾರೆ.
ಇದನ್ನೂ ಓದಿ:ಇಂದು ಎಸ್.ನಾರಾಯಣ್ ಸಿನಿಮಾದ ಟೈಟಲ್ ಲಾಂಚ್
ಇನ್ನು ಹಿಂದೆ “ಎಂ.ಆರ್’ ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದ ಟೀಮ್ ಮತ್ತು ಕಲಾವಿದರೇ ಇಲ್ಲೂ ಕೆಲಸ ಮಾಡಲಿದ್ದಾರೆ. ಆದರೆ, ಇದು ಬ್ಯಾಂಕಾಕ್, ಮಂಗಳೂರು ಸುತ್ತಮುತ್ತಲ ಕಥೆಯಲ್ಲ. ಹಳೆಯ ತಂಡದ ಜೊತೆಗೆ ಈಗ ಡಿಆರ್ ಚಿತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಇದು ಮುತ್ತಪ್ಪ ರೈ ಅವರದೇ ಕಥೆನಾ? ಎಂಬ ಪ್ರಶ್ನೆಗೆ ನಿರ್ದೇಶಕರಿಂದ ಯಾವುದೇ ಸ್ಪಷ್ಟ ಉತ್ತರವಿಲ್ಲ. ಆದರೂ ಇದು ಮುತ್ತಪ್ಪ ರೈ ಅವರ ಕುರಿತಾದ ಕಥೆಯೇ ಎಂದು ಹೇಳಲಾಗುತ್ತಿದೆ. ನಿರ್ದೇಶಕರು ಮಾತ್ರ, ಅದನ್ನು ರಿವೀಲ್ ಮಾಡದೆ, ಇದು “ಎಂ. ಆರ್’ ಅಲ್ಲ, “ಡಿ.ಆರ್’ ಎಂದಷ್ಟೇ ಹೇಳಿದ್ದಾರೆ ಎನ್ನಲಾಗುತ್ತಿದೆ.
ಇದೇ ವೇಳೆ ಮಾತನಾಡಿದ ಚಿತ್ರದ ನಾಯಕ ನಟ ದೀಕ್ಷಿತ್, “ಆರಂಭದಲ್ಲೇ ಇಂಥದ್ದೊಂದು ವಿವಾದ ಪಡೆದುಕೊಳ್ಳುತ್ತಿರುವುದು ಕಂಡು ನೋವಾಗುತ್ತೆ, ತುಂಬಾ ಒಳ್ಳೆಯ ವೆಲ್ ಕಮ್ ಸಿಗುತ್ತೆ. ಅಂತ ಅಂದುಕೊಂಡಿದ್ದೆ. ನಂಗೆ ಗೊತ್ತಾಗಿದೆ. ಖಂಡಿತವಾಗಿಯೂ ನಾವು ದೊಡ್ಡ ಮಟ್ಟಕ್ಕೆ ಹೆಸರು ಮಾಡಲಿದ್ದೇವೆ’ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಶೋಭರಾಜಣ್ಣ, ಪ್ರಶಾಂತ್ ಸಂಬರಗಿ, ಉಮೇಶ್ ಬಣಕಾರ್ ಮತ್ತಿತರರು ಹಾಜರಿದ್ದರು.
ಒಟ್ಟಾರೆ ಸದ್ಯ ಬಿಡುಗಡೆಯಾಗಿರುವ “ಡಿ.ಆರ್’ ಪೋಸ್ಟರ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, “ಎಂ.ಆರ್’ ಟೈಟಲ್ ಬದಲಾಗಿ “ಡಿ.ಆರ್’ ಎಂದು ಇಡಲಾಗಿದೆ ಎಂಬುದಂತೂ ಸ್ಪಷ್ಟವಾಗುತ್ತದೆ. ಅದೇನೆಯಿರಲಿ, ಸದ್ಯ ವಿವಾದಕ್ಕೆ ಕಾರಣವಾಗಿರುವ “ಎಂ.ಆರ್’ ಗೂ, “ಡಿ.ಆರ್’ಗೂ ಕನೆಕ್ಷನ್ ಏನಾದರೂ ಇದೆಯಾ, ಅನ್ನೋದು ಚಿತ್ರ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.