![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jan 1, 2021, 8:00 PM IST
ಬೆಂಗಳೂರು: ಲ್ಯಾಪ್ ಟಾಪ್ ಬಳಕೆದಾರರ ವಿಶ್ವಾಸಾರ್ಹ ಬ್ರಾಂಡ್ ಆದ ಎಚ್ ಪಿ ಭಾರತದಲ್ಲಿ ಹೊಸ ಶ್ರೇಣಿಯ ಪ್ರೋಬುಕ್ ಲ್ಯಾಪ್‍ಟಾಪ್ ಗಳನ್ನು ಬಿಡುಗಡೆ ಮಾಡಿದೆ. ಈ ಹೊಸ ಲ್ಯಾಪ್‍ಟಾಪ್ ಅನ್ನು ಬ್ಯುಸಿನೆಸ್‍ದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ.
ಈ ಹೊಸ ಮಾಡೆಲ್‍ನ ಹೆಸರು, ಎಚ್ ಪಿ ಪ್ರೋಬುಕ್ 635 ಏರೋ ಜಿ7. ಎಎಂಡಿ ಪ್ರೊಸೆಸರ್ ಆಧಾರಿತ ಅತ್ಯಂತ ಹಗುರವಾದ ಬ್ಯುಸಿನೆಸ್ ನೋಟ್ ಬುಕ್ ಇದಾಗಿದೆ. ಇದರ ತೂಕ 1 kg ಗಿಂತ ಕಡಿಮೆಯಿದೆ. AMD Ryzen 4000 Series Mobile Processors ಅನ್ನು ಇದಕ್ಕೆ ಬಳಸಲಾಗಿದೆ.
ವಿಂಡೋಸ್ 10 ಪ್ರೊಫೆಷನಲ್ ಆವೃತ್ತಿ ಹೊಂದಿದೆ. ಎಚ್ ಪಿ ಏಷ್ಯಾ, ಎಸ್ಎಂಬಿ ಔಟ್ ಲುಕ್ ವರದಿ 2020 ರ ಪ್ರಕಾರ, ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ವ್ಯವಹಾರಗಳು (ಎಸ್ಎಂಬಿಗಳು) ಕೋವಿಡ್ ಪರಿಣಾಮದಿಂದ ತಮ್ಮ ಬಹುತೇಕ ಎಲ್ಲಾ ಬ್ಯಾಂಕಿಂಗ್ ವ್ಯವಹಾರಗಳನ್ನು ಡಿಜಿಟಲ್ ಗೆ ಪರಿವರ್ತನೆ ಮಾಡಿಕೊಂಡಿವೆ ಮತ್ತು ಕೋವಿಡ್ ನಂತರ ವ್ಯವಹಾರವನ್ನು ಮತ್ತಷ್ಟು ಬಲವರ್ಧನೆಗೊಳಿಸುತ್ತಿವೆ. ಸಮೀಕ್ಷೆ ನಡೆಸಿದ ನಾಲ್ಕನೇ ಮೂರರಷ್ಟು ಅಂದರೆ ಶೇ.75 ರಷ್ಟು ವ್ಯವಹಾರಸ್ಥರು ತಮ್ಮ ವ್ಯಾಪಾರ ಪ್ರಗತಿಗೆ ಡಿಜಿಟಲೀಕರಣ ಅತ್ಯಂತ ಅಗತ್ಯ ಅಥವಾ ಪ್ರಮುಖವಾಗಿದೆ ಎಂದು ಅರಿತಿದ್ದಾರೆ. ದೇಶದ ಆರ್ಥಿಕತೆಯ ಪ್ರಗತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಎಸ್ಎಂಬಿಗಳು, ಉದ್ಯಮಿಗಳು ಮತ್ತು ಮೊಬೈಲ್ ವೃತ್ತಿಪರರನ್ನು ಗಮನದಲ್ಲಿಟ್ಟುಕೊಂಡು ಎಚ್ ಪಿ ಪ್ರೋ ಬುಕ್ 635 ಏರೋ ಜಿ7 ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಎಲ್ಲಿ ಬೇಕಾದರೂ ಕೆಲಸ ಮಾಡುವ ಸ್ವಾತಂತ್ರ್ಯ
ಇದು 13.3 ಇಂಚಿನ ಫುಲ್ ಎಚ್‍ಡಿ ಡಿಸ್‍ಪ್ಲೇ ಹೊಂದಿದೆ. ಪ್ರೋಬುಕ್ 635 ಏರೋ ಮೆಗ್ನೀಶಿಯಂ ಮಿಶ್ರಲೋಹದಿಂದ ತಯಾರಿಸಲಾದ ಮೊದಲ ಪ್ರೋಬುಕ್ ಆಗಿದ್ದು, ಇದು ಮೆಗ್ನೀಶಿಯಂನ ಹಗುರ ಮತ್ತು ಅಲ್ಯೂಮೀನಿಯಂನ ಶಕ್ತಿ ಹೊಂದಿದೆ.
ಎಚ್ ಪಿ ಪ್ರೋಬುಕ್ 635 ಏರೋ ಜಿ7 ವೈಶಿಷ್ಟ್ಯತೆಗಳು:
· ಸಂಪರ್ಕ: ಬಳಕೆದಾರರು ವೈ–ಫೈ 6 ಮತ್ತು ಕ್ಯಾಟ್ 9 4ಜಿ ಎಲ್ ಟಿಇ ವೈರ್ ಲೆಸ್ ವಾತಾವರಣದಲ್ಲಿಯೂ ವೇಗವಾಗಿ ಮತ್ತು ವಿಶ್ವಾಸಾರ್ಹವಾಗಿ ಗಿಗಾಬೈಟ್ ವೇಗದಲ್ಲಿ ಸಂಪರ್ಕವನ್ನು ಸುಲಭವಾಗಿ ಸಾಧಿಸಬಹುದು.
ಇದನ್ನೂ ಓದಿ:ನನಸಾದ ಇಂಡಸ್ಟ್ರಿಯಲ್ ನೋಡ್ ಕನಸು
ಭದ್ರತೆ: ಎಚ್ ಪಿ ಶ್ಯೂರ್ ವ್ಯೂ ರಿಫ್ಲೆಕ್ಟ್ ಬಳಕೆದಾರರಿಗೆ ವಿವೇಚನೆಯಿಂದ ಕಾರ್ಯ ನಿರ್ವಹಣೆ ಮಾಡಲು ಅನುವು ಮಾಡಿಕೊಡುತ್ತದೆ. ಅದರಲ್ಲಿನ ಕಾಪರ್ ಬಣ್ಣದ ಪ್ರತಿಫಲಿತ ಗೌಪ್ಯತೆಯ ಪರದೆಯು ವಿಶ್ವದ ಅತ್ಯಾಧುನಿಕ ಗೌಪ್ಯತೆಯಾಗಿದೆ. ಇದು ಪ್ರಕಾಶಮಾನವಾದ ಮತ್ತು ಮಂದ ಬೆಳಕಿನ ಪರಿಸರದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ.
·ದೀರ್ಘ ಬಾಳಿಕೆಯ ಬ್ಯಾಟರಿ: ಇದು ದೀರ್ಘ ಬಾಳಿಕೆಯ ಬ್ಯಾಟರಿ ಹೊಂದಿದ್ದು 18 ರಿಂದ 23 ಗಂಟೆಗಳ ಕಾಲ ಕೆಲಸ ಮಾಡಬಹು ಎಂದು ಕಂಪೆನಿ ತಿಳಿಸಿದೆ. ಕೇವಲ 30 ನಿಮಿಷಗಳಲ್ಲಿ ಶೇ.50 ರಷ್ಟು ಬ್ಯಾಟರಿ ಚಾರ್ಜ್ ಆಗುವ ಸಾಮರ್ಥ್ಯವನ್ನು ಹೊಂದಿದೆ.
ಇದರಲ್ಲಿರುವ ಎಎಂಡಿ ರೈಝೆನ್ 4000 ಸೀರೀಸ್ ಮೊಬೈಲ್ ಪ್ರೊಸೆಸರ್ ಗೆ , ಎಎಂಡಿ ರೇಡಿಯನ್ ವೆಗಾ ಗ್ರಾಫಿಕ್ಸ್ ಸೌಲಭ್ಯವಿದೆ. 8 ಕೋರ್ ನ ಪ್ರೊಸೆಸರ್ ಹೊಂದಿದೆ. 512 ಜಿಬಿ ಎಸ್‍ಎಸ್‍ಡಿ ಸ್ಟೋರೇಜ್ ಇದ್ದು, ಅದನ್ನು 1 ಟಿಬಿವರೆಗೂ ವಿಸ್ತರಿಸಿಕೊಳ್ಳಬಹುದು. 8 ಜಿಬಿ ರ್ಯಾಮ್ ಇದ್ದು, 32 ಜಿಬಿವರೆಗೂ ವಿಸ್ತರಿಸಿಕೊಳ್ಳುವ ಆಯ್ಕೆ ನೀಡಲಾಗಿದೆ. ಇದರ ದರ 74,999/- ರೂಪಾಯಿಗಳಿಂದ ಆರಂಭಗೊಳ್ಳುತ್ತದೆ.
ಈ ಬಗ್ಗೆ ಮಾತನಾಡಿದ ಎಚ್ ಪಿ ಇಂಡಿಯಾ ಮಾರ್ಕೆಟ್ ನ (ಪರ್ಸನಲ್ ಸಿಸ್ಟಮ್ಸ್) ಹಿರಿಯ ನಿರ್ದೇಶಕ ವಿಕ್ರಂ ಬೇಡಿ , “ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ನಮ್ಮ ಜಿಡಿಪಿಗೆ ಮೂರನೇ ಒಂದು ಭಾಗದಷ್ಟು ಕೊಡುಗೆ ನೀಡುತ್ತಿವೆ ಮತ್ತು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿವೆ. ಮತ್ತು ಜನರು ಮನೆಯಿಂದಲೇ ಕೆಲಸ ಮಾಡುವುದು ಮುಂದುವರೆದಿದೆ .ಇಂತವರಿಗಾಗಿ ಎಚ್ ಪಿ ಪ್ರೋಬುಕ್ 635 ಏರೋ ಜಿ7 ಒಂದು ಮೊಬೈಲ್ ಪವರ್ ಹೌಸ್ ಆಗಿ ವಿನ್ಯಾಸಗೊಂಡಿದ್ದು, ಇದು ಹೆಚ್ಚು ಶ್ರಮವಿಲ್ಲದೇ ಸಂಪರ್ಕವನ್ನು ಸಾಧಿಸುವ ಮೂಲಕ ಬಹು–ಕಾರ್ಯ, ಬಹು–ಸ್ಥಳಗಳ ಅಗತ್ಯತೆಗಳನ್ನು ಪೂರೈಸಲಿದೆ ಎಂದು ತಿಳಿಸಿದರು.
–ಕೆ.ಎಸ್. ಬನಶಂಕರ ಆರಾಧ್ಯ
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.