ರೈತರ ಧರಣಿ ಅಂತ್ಯ: ಇನ್ನು ಗ್ರಾಮೀಣದಲ್ಲಿ ಜಾಥಾ
Team Udayavani, Jan 1, 2021, 6:57 PM IST
ಕಲಬುರಗಿ: ಕೇಂದ್ರ ಸರ್ಕಾರ ರೈತರಿಗೆ ಮಾರಕವಾಗಿರುವ ಮೂರು ಕೃಷಿ ಕಾಯ್ದೆಗಳನ್ನುಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ಜಗತ್ ವೃತ್ತದಲ್ಲಿ 17 ದಿನಗಳಿಂದ ನಡೆಯುತ್ತಿದ್ದರೈತರ ಹಕ್ಕೊತ್ತಾಯಗಳಿಗಾಗಿ ಧರಣಿಯನ್ನು ಗುರುವಾರಕ್ಕೆ ಅಂತ್ಯ ಮಾಡಲಾಯಿತು.
ಇನ್ಮುಂದೆ ಕಾಯ್ದೆಗಳ ಅಪಾಯದ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲುಗ್ರಾಮಾಂತರ ಪ್ರದೇಶದಲ್ಲಿ ಜಾಥಾ ನಡೆಸಲು ತೀರ್ಮಾನಿಸಲಾಗಿದೆ.ಕರ್ನಾಟಕ ಪ್ರಾಂತ ಕೃಷಿ ಕಾರ್ಮಿಕರು ಸಂಘಟನೆ, ಜನವಾದಿ ಮಹಿಳಾ ಸಂಘಟನೆಗಳನೇತೃತ್ವದಲ್ಲಿ ಧರಣಿ ಆರಂಭಿಸಲಾಗಿತ್ತು. ಮೊದಲನೆ ಹಂತದ ಹೋರಾಟವನ್ನುಪಾದಯಾತ್ರೆ, ಮೆರವಣಿಗೆ ಮತ್ತ ಬಹಿರಂಗಸಭೆ ನಡೆಸಿ, ಕೇಂದ್ರ ಸರ್ಕಾರದ ರೈತ ವಿರೋಧಿ ಕರಾಳ ಕಾಯ್ದೆಗಳು, ವಿದ್ಯುತ್ ಮಸೂದೆ ಹಾಗೂ ರಾಜ್ಯ ಸರ್ಕಾರದ ಭೂಸುಧಾರಣಾತಿದ್ದುಪಡಿ ಕಾಯ್ದೆ ಮತ್ತು ಗೋಹತ್ಯಾ ನಿಷೇಧ ಸುಗ್ರೀವಾಜ್ಞೆ ಪ್ರತಿಗಳನ್ನು ದಹಿಸಲಾಯಿತು.
ಇದಕ್ಕೂ ಮುನ್ನ ಸಾತ್ ಗುಂಬಜ್ ವೃತ್ತದ ನ್ಯಾಷನಲ್ ಕಾಲೇಜಿನಿಂದ ಸರಾಫ್ ಬಜಾರತರಕಾರಿ ಮಾರುಕಟ್ಟೆ, ಸೂಪರ್ ಮಾರ್ಕೆಟ್ ಮೂಲಕ ಜಗತ್ ವೃತ್ತದಲ್ಲಿ ಪಾದಯಾತ್ರೆ ನಡೆಸಿದ ರೈತ ಮುಖಂಡರು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೃಷಿ ಮತ್ತು ಎಪಿಎಂಸಿ ವಲಯ ನಾಶವಾಗುವಂತೆ ಕಾಯ್ದೆಗಳ ಬಗ್ಗೆ ರೈತರುಈಗಲೇ ಎಚ್ಚರಗೊಳ್ಳಬೇಕು. ಇಂತಹ ಕಾಯ್ದೆಗಳನ್ನು ವಾಪಸ್ ಪಡೆಯುವರೆಗೂಹೋರಾಟ ಮಾಡಬೇಕಿದೆ ಎಂದು ಕರೆ ನೀಡಿದರು.
ರೈತ ಮುಖಂಡರು, ಚಿತಂಕರಾದ ಎಂ.ಬಿ. ಸಜ್ಜನ್, ಆರ್.ಕೆ. ಹುಡಗಿ, ಕಾಶಿನಾಥಅಂಬಲಗಿ, ಭೀಮಶೆಟ್ಟಿ ಯಂಪಳ್ಳಿ, ಕೆ.ನೀಲಾ,ಶರಣಬಸವ ಮಮಶೆಟ್ಟಿ, ದತ್ತಾತ್ರೇಯ ಇಕ್ಕಳಕಿ,ಅಲ್ತಾಫ್ ಇನಾಮದಾರ್, ಮೇಘರಾಜ್ ಕಠಾರೆ, ಮೌಲಾ ಮುಲ್ಲಾ,ನಂದಾದೇವಿ ಮಂಗೊಂಡಿ, ಅಮೀನಾ ಬೇಗಂ, ಚಂದಪ್ಪಪೂಜಾರಿ, ಶ್ರೀಮಂತ ಬಿರಾದಾರ, ಜಗದೇವಿಹೆಗಡೆ ಮಲ್ಲಮ್ಮ ಕೋಡ್ಲಿ ಮುಂತಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.