ಲಕ್ಕಿ ಚೀಟಿಯಲ್ಲಿ ಗೆಲುವಿನ ಅದೃಷ್ಟ ಲಕ್ಷ್ಮೀ
Team Udayavani, Jan 1, 2021, 7:11 PM IST
ದೇವದುರ್ಗ: ಗ್ರಾಪಂ ಚುನಾವಣೆಯಲ್ಲಿ ವಿಶೇಷಐವರು ಮಹಿಳೆಯ ಅಭ್ಯರ್ಥಿಗಳಿಗೆ ಮತದಾರರುಲಕ್ಕಿ ಚೀಟಿ ಅದೃಷ್ಟಲಕ್ಷ್ಮೀ ಕೈ ಹಿಡಿಯುವ ಮೂಲಕ ಗೆಲುವು ಸಾಧಿಸಿದ್ದಾರೆ.
ಐದು ಗ್ರಾಪಂನ ಹತ್ತು ಅಭ್ಯರ್ಥಿಗಳು ಸಮಮತಪಡೆದಿದ್ದು, ಚುನಾವಣಾಧಿಕಾರಿ ಲಕ್ಕಿ ಚೀಟಿ ಎತ್ತುವ ಮೂಲಕ ಐವರನ್ನುವಿಜಯಿ ಎಂದು ಘೋಷಿಸಿದರು. ಇಂಥಪ್ರಸಂಗಗಳು ತಾಲೂಕಿನಲ್ಲಿ ನಡೆದಿವೆ. 10ಅಭ್ಯರ್ಥಿಗಳು ಸಮಾನ ಮತ ಪಡೆದಿದ್ದಾರೆ. ಕೆಲವರಿಗೆ ಮತದಾರ ಕೈ ಹಿಡಿದರೂ, ಲಕ್ಕಿ ಚೀಟಿ ಕೈ ಕೊಟ್ಟಿದೆ. ಕೆಲವರ ಪಾಲಿಗೆ ವಿಜಯಲಕ್ಷ್ಮಿ ಲಕ್ಕಿ ಚೀಟಿಯಲ್ಲಿ ಒಲಿದಳು. ಸುಂಕೇಶ್ವರಹಾಳ, ಗಲಗ,ಜಾಡಲದಿನ್ನಿ, ಮುಷ್ಟೂರು, ಸೋಮನಮರಡಿ ಗ್ರಾಪಂ ವ್ಯಾಪ್ತಿಯಲ್ಲಿ ಸಮಬಲದ ಸ್ಪರ್ಧೆ ನಡೆದಿದ್ದು, ಹತ್ತೂ ಅಭ್ಯರ್ಥಿಗಳು ಮಹಿಳೆಯರು ಎನ್ನುವುದು ಮತ್ತೂಂದು ವಿಶೇಷ.
ಪ್ರತಿಯೊಂದು ಮತದ ಮೌಲ್ಯ ಅಭ್ಯರ್ಥಿಗಳಲ್ಲಿ ನಡುಕ ಉಂಟು ಮಾಡಿತ್ತು. ಸೋತ ಅಭ್ಯರ್ಥಿಗಳನ್ನು ಮತದಾರರು ಕೈ ಹಿಡಿದರೂ ಲಕ್ಕಿ ಚೀಟಿ ಕೈ ಹಿಡಿಯಲಿಲ್ಲ. ಸೋತವರಿಗೆ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ಗೆದ್ದವರಿಗೆ ನಂಬಲೂ ಆಗುತ್ತಿಲ್ಲ. ಮಧ್ಯರಾತ್ರಿ1ಗಂಟೆವರೆಗೆ ಎಣಿಕೆ ನಡೆದರೂ ಹಲವುಕ್ಷೇತ್ರಗಳು ಕೊನೆಯ ಕ್ಷಣದವರೆಗೆ ಕುತೂಹಲ ಕಾಯ್ದಿರಿಸಿಕೊಂಡಿದ್ದವು.
ಯಾರು ಗೆದ್ದರು, ಯಾರು ಬಿದ್ದರು? : ಹೆಗ್ಗಡದಿನ್ನಿಗೆ ಸ್ಪರ್ಧಿಸಿದ್ದ ಸುಲೋಚನಾ ಗಡ್ಡೆಪ್ಪ, ಪುಷ್ಪಾವತಿ ಚನ್ನಪ್ಪ ಇಬ್ಬರೂ ತಲಾ 376 ಮತ ಪಡೆದಿದ್ದರು. ಲಕ್ಕಿ ಚೀಟಿಯಲ್ಲಿ ಗೆಲುವು ಸುಲೋಚನಾ ಕೈ ಹಿಡಿಯಿತು. ಮುಷ್ಟೂರು ಗ್ರಾಪಂ ವ್ಯಾಪ್ತಿಯ ಆಲ್ದರ್ತಿ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಚನ್ನಮ್ಮ ಪ್ರತಿಸ್ಪರ್ಧಿ ಲಕ್ಷ್ಮಿ ತಲಾ 208 ಮತ ಪಡೆದಿದ್ದರು. ಲಕ್ಕಿ ಡ್ರಾನಲ್ಲಿ ಚನ್ನಮ್ಮಗೆ ಗೆಲುವುಒಲಿಯಿತು. ಸೋಮನಮರಡಿ ಗ್ರಾಪಂನಲ್ಲಿ ಸ್ಪರ್ಧಿಸಿದ್ದ ಮಹಾದೇವಮ್ಮ ಶಿವಪ್ಪ ಹಾಗೂ
ಹುಲಿಗೆಮ್ಮ ಹನುಮಂತ ತಲಾ 248 ಮತ ಪಡೆದಿದ್ದರು. ಮಹಾದೇವಮ್ಮಗೆ ಲಕ್ಕಿ ಚೀಟಿ ಅದೃಷ್ಟ ತಂದುಕೊಟ್ಟಿತು. ಗಲಗ ಗ್ರಾಪಂಗೆ ಸ್ಪರ್ಧಿಸಿದ್ದ ಅಂಬಮ್ಮ ಹಾಗೂ ಶಶಿಕಲಾ ತಲಾ 155 ಮತ ಪಡೆದರು ಟೈ ಸಾಧಿ ಸಿದ್ದು, ಲಕ್ಕಿ ಚೀಟಿ ಅಂಬಮ್ಮ ಅಭ್ಯರ್ಥಿ ಕೈ ಹಿಡಿಯಿತು. ರಾಮದುರ್ಗ ಗ್ರಾಪಂ ವ್ಯಾಪ್ತಿಯ ಸುಂಕೇಶ್ವರಹಾಳದಲ್ಲಿ ಸ್ಪರ್ಧಿಸಿದ್ದ ಅರುಣಮ್ಮ ಹಾಗೂ ಭೀಮವ್ವ ತಲಾ 388 ಮತ ಪಡೆದಿದ್ದರು. ಚೀಟಿ ಎತ್ತಿದಾಗ ಅರುಣಮ್ಮಗೆ ಅದೃಷ್ಟ ಒಲಿಯಿತು.
ನಾಗಡದಿನ್ನಿ, ಆಲ್ದರ್ತಿ, ಸೋಮನಮರಡಿ, ಗಲಗ, ಸುಂಕೇಶ್ವರಹಾಳಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಸಮ ಮತ ಪಡೆದಿದ್ದರು. ಚುನಾವಣೆ ನಿಯಮ ಪ್ರಕಾರ ಚೀಟಿ ಎತ್ತುವ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಯಿತು. –ಮಧುರಾಜ್ ಯಾಳಗಿ, ಚುನಾವಣಾಧಿಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.