ಉಮೇಶ್ ಯಾದವ್ ಸ್ಥಾನಕ್ಕೆ ನಟರಾಜನ್ ಸೇರ್ಪಡೆ
Team Udayavani, Jan 1, 2021, 11:16 PM IST
ಹೊಸದಿಲ್ಲಿ: ಗಾಯಾಳು ಉಮೇಶ್ ಯಾದವ್ ಬದಲು ಎಡಗೈ ಪೇಸ್ ಬೌಲರ್ ಟಿ. ನಟರಾಜನ್ ಅವರನ್ನು ಶುಕ್ರವಾರ ಅಧಿಕೃತವಾಗಿ ಭಾರತ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಇದರೊಂದಿಗೆ ಅವರು ಸಿಡ್ನಿಯ ನ್ಯೂ ಇಯರ್ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆ ಗೋಚರಿಸಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಗಾಯಾಳಾಗಿ ಹೊರನಡೆದ ಉಮೇಶ್ ಯಾದವ್ ಈಗಾಗಲೇ ಸರಣಿಯಿಂದ ಬೇರ್ಪಟ್ಟಿದ್ದಾರೆ. ಇವರ ಬದಲು 3ನೇ ಟೆಸ್ಟ್ ಪಂದ್ಯದಲ್ಲಿ ಶಾದೂìಲ್ ಠಾಕೂರ್ ಆಡುವರೆಂದು ಸುದ್ದಿಯಾಗಿತ್ತು. ಆದರೀಗ ನಟರಾಜನ್ ಕೂಡ ರೇಸ್‌ನಲ್ಲಿರುವುದು ಸ್ಪಷ್ಟವಾಗಿದೆ. ನಟರಾಜನ್ ಇದೇ ಸರಣಿಯ ವೇಳೆ ಏಕದಿನ ಹಾಗೂ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. ಇದೀಗ ಟೆಸ್ಟ್‌ಕ್ಯಾಪ್ ಧರಿಸುವ ಅವಕಾಶವೂ ಎದುರಾಗಿದೆ.
ಬಿಸಿಸಿಐ ಪ್ರಕಟನೆ
“ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಗಾಯಾಳು ಉಮೇಶ್ ಯಾದವ್ ಸ್ಥಾನಕ್ಕೆ ಟಿ. ನಟರಾಜನ್ ಅವರನ್ನು ಸೇರ್ಪಡೆಗೊಳಿಸಿದೆ. ಇದಕ್ಕೂ ಮೊದಲು ಮೆಲ್ಬರ್ನ್ ಟೆಸ್ಟ್‌ಗಾಗಿ ಗಾಯಾಳು ಮೊಹಮ್ಮದ್ ಶಮಿ ಬದಲು ಶಾದೂìಲ್ ಠಾಕೂರ್ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಶಮಿ ಮತ್ತು ಯಾದವ್ ಇಬ್ಬರೂ ಬೆಂಗಳೂರಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಗೆ ತೆರಳಿ ಪುನಶ್ಚೇತನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಬಿಸಿಸಿಐ ಪ್ರಕಟನೆ ತಿಳಿಸಿದೆ.
ಭಾರತ ತಂಡ ಜ. 4ರ ತನಕ ಮೆಲ್ಬರ್ನ್ನಲ್ಲೇ ಅಭ್ಯಾಸ ನಡೆಸಲಿದ್ದು, ಅನಂತರವಷ್ಟೇ ಸಿಡ್ನಿಗೆ ತೆರಳಲಿದೆ. ಸಿಡ್ನಿ ಟೆಸ್ಟ್ ಪಂದ್ಯ ಜ. 7ರಿಂದ ಆರಂಭ ವಾಗಲಿದೆ. ರೋಹಿತ್ ಶರ್ಮ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದ್ದು, ಇವರಿಗಾಗಿ ಜಾಗ ಖಾಲಿ ಮಾಡುವವರು ಯಾರೆಂಬುದು ಮತ್ತೂಂದು ಕುತೂಹಲದ ಸಂಗತಿ. ಇಲ್ಲಿ ಮಾಯಾಂಕ್ ಅಗರ್ವಾಲ್ ಮತ್ತು ವಿಹಾರಿ ಹೆಸರು ಕೇಳಿಬರುತ್ತಿದೆ.
ರೋಹಿತ್ ಶರ್ಮ ಈಗ ಉಪನಾಯಕ
ಟೀಮ್ ಇಂಡಿಯಾವನ್ನು ಸೇರಿಕೊಂಡು ಅಭ್ಯಾಸ ಆರಂಭಿಸಿದ ರೋಹಿತ್ ಶರ್ಮ ಮೊದಲ ಸಲ ಟೆಸ್ಟ್ ತಂಡದ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಈ ಜವಾಬ್ದಾರಿ ಹೊತ್ತಿದ್ದರು.
ವಿರಾಟ್ ಕೊಹ್ಲಿ ನಾಯಕತ್ವದ ವೇಳೆ ಅಜಿಂಕ್ಯ ರಹಾನೆ ಉಪನಾಯಕರಾಗಿ ಕರ್ತವ್ಯ ನಿಭಾಯಿಸುತ್ತಿದ್ದರು. ಆದರೆ ಕೊಹ್ಲಿ ಗೈರಲ್ಲಿ ರಹಾನೆ ನಾಯಕರಾಗಿ ಭಡ್ತಿ ಪಡೆದರು. ಮೆಲ್ಬರ್ನ್ನಲ್ಲಿ ಪೂಜಾರ, ಈಗ ರೋಹಿತ್ ಅವರಿಗೆ “ಡೆಪ್ಯುಟಿ’ ಜವಾಬ್ದಾರಿ ವಹಿಸಲಾಗಿದೆ.
“ರೋಹಿತ್ ಶರ್ಮ ಸುದೀರ್ಘ ಕಾಲದಿಂದ ಏಕದಿನ ಕ್ರಿಕೆಟ್ ತಂಡದ ಉಪನಾಯಕರಾಗಿದ್ದಾರೆ. ಈಗ ಕೊಹ್ಲಿ ಗೈರಲ್ಲಿ ಟೆಸ್ಟ್ ತಂಡದ ಲೀಡರ್‌ಶಿಪ್‌ನಲ್ಲಿ ತಾತ್ಕಾಲಿಕ ಪರಿವರ್ತನೆ ಮಾಡಲಾಗಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪರಿಷ್ಕೃತ ಟೆಸ್ಟ್ ತಂಡ:
ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮ (ಉಪನಾಯಕ), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್. ರಾಹುಲ್, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ಶುಭಮನ್ ಗಿಲ್, ವೃದ್ಧಿಮಾನ್ ಸಾಹಾ, ರಿಷಭ್ ಪಂತ್, ಜಸ್‌ಪ್ರೀತ್ ಬುಮ್ರಾ, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜ, ಆರ್. ಅಶ್ವಿನ್, ಮೊಹಮ್ಮದ್ ಸಿರಾಜ್, ಶಾದೂìಲ್ ಠಾಕೂರ್, ಟಿ. ನಟರಾಜನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.