ಅವಳಿ ಜಿಲ್ಲೆಗಳಲ್ಲಿ 149 ಶಿಶುಗಳ ಜನನ: 2021ರ ಮೊದಲ ದಿನ ಹೆಣ್ಣು ಶಿಶುಗಳೇ ಹೆಚ್ಚು
ವಿಶೇಷ ದಿನದಂದು ಸಿಸೇರಿಯನ್ ಮೊರೆ?: ದ.ಕ. ಜಿಲ್ಲೆ ಶಿಶು ಜನನ 119; ಉಡುಪಿ ಜಿಲ್ಲೆ ಶಿಶು ಜನನ 30
Team Udayavani, Jan 2, 2021, 9:02 AM IST
ಉಡುಪಿ/ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಹೊಸ ವರ್ಷದಂದು ಶುಕ್ರವಾರ ಒಟ್ಟು 149 ಶಿಶುಗಳ ಜನನವಾಗಿವೆ. ಉಡುಪಿ ಜಿಲ್ಲೆಯಲ್ಲಿ 18 ಹೆಣ್ಣು ಶಿಶು ಜನಿಸಿದೆ.
ದ.ಕ. ಜಿಲ್ಲೆಯಲ್ಲಿ 119 ಹಾಗೂ ಉಡುಪಿ ಜಿಲ್ಲೆಯಲ್ಲಿ 30 ಶಿಶುಗಳು ಜನಿಸಿದ್ದು, ಜಿಲ್ಲಾ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ 19 ಶಿಶುಗಳ ಜನನವಾಗಿವೆ. 119 ಶಿಶುಗಳ ಪೈಕಿ ಗಂಡು ಮತ್ತು ಹೆಣ್ಣು ಶಿಶುಗಳೆಷ್ಟು ಎಂಬ ಸಂಖ್ಯೆ ಲಭ್ಯವಾಗಿಲ್ಲ. ಲೇಡಿಗೋಶನ್ ಆಸ್ಪತ್ರೆಯಲ್ಲಿ ಜನಿಸಿದ 19 ಶಿಶುಗಳ ಪೈಕಿ 9 ಸಿಸೇರಿಯನ್ ಹೆರಿಗೆ, 9 ಸಹಜ ಹೆರಿಗೆಗಳಾಗಿವೆ. 19ರಲ್ಲಿ 11 ಗಂಡು, 8 ಹೆಣ್ಣು ಶಿಶುಗಳಾಗಿವೆ. 119 ಶಿಶುಗಳು ಕೂಡ ಡಿ. 31ರ ಮಧ್ಯರಾತ್ರಿ 12 ಗಂಟೆಯಿಂದ ಜ. 1ರ ರಾತ್ರಿ 9 ಗಂಟೆಯವರೆಗಿನ 21 ಗಂಟೆ ಅವಧಿಯಲ್ಲಿ ಜನಿಸಿದ ಶಿಶುಗಳಾಗಿವೆ.
ಉಡುಪಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಒಟ್ಟು 12 ಹೆರಿಗೆಗಳಾಗಿವೆ. 6 ನಾರ್ಮಲ್ ಮತ್ತು 6 ಸಿಸೇರಿಯನ್ ಹೆರಿಗೆ ಯಾಗಿದೆ. ಅದರಲ್ಲಿ 4 ಗಂಡು ಮಕ್ಕಳು, 8 ಹೆಣ್ಣು ಮಕ್ಕಳು. ಕೋಟ ಸರಕಾರಿ ಆಸ್ಪತ್ರೆಯಲ್ಲಿ 2 ಹೆರಿಗೆಯಾಗಿದ್ದು, ತಲಾ ಒಂದು ನಾರ್ಮಲ್ ಮತ್ತು ಸಿಸೇರಿಯನ್ ಹೆರಿಗೆಯಾಗಿದೆ. ಅದರಲ್ಲಿ ಒಂದು ಹೆಣ್ಣು ಮತ್ತು ಗಂಡು ಮಗು. ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ 2 ಸಹಜ ಹರಿಗೆಯಲ್ಲಿ ಒಂದು ಗಂಡು ಹಾಗೂ ಹೆಣ್ಣು ಮಗು ಜನಿಸಿದೆ. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಮೂರು ಹರಿಗೆಯಾಗಿದ್ದು, ಒಂದು ಸಿಸೇರಿಯನ್, 2 ಸಹಜ ಹೆರಿಗೆಯಾಗಿದೆ. ಇಲ್ಲಿ 2 ಹೆಣ್ಣು, ಒಂದು ಗಂಡು ಮಗುವಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಒಟ್ಟು 19 ಹೆರಿಗೆಯಾಗಿದೆ.
8 ಸಿಸೇರಿಯನ್ ಹೆರಿಗೆ !
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 4 ಹೆರಿಗೆ ಗಳಾಗಿದ್ದು 3 ಗಂಡು, 1ಹೆಣ್ಣು ಮಗು ಜನಿಸಿದೆ. ಅದರಲ್ಲಿ ಸಿಸೇರಿಯನ್ 3 ಮತ್ತು 1 ನಾರ್ಮಲ್ ಹೆರಿಗೆ. ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಂದು ನಾರ್ಮಲ್ ಹಾಗೂ ಸಿಸೇರಿ ಯನ್ ಹೆರಿಗೆಯಲ್ಲಿ 1 ಗಂಡು, 1 ಹೆಣ್ಣು ಮಗುವಿನ ಜನನವಾಗಿದೆ. ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಒಂದು ಸಿಸೇರಿಯನ್ ಹೆರಿಗೆಯಾಗಿದ್ದು, ಇದು ಹೆಣ್ಣಾಗಿದೆ. ಮಿಶನ್ ಆಸ್ಪತ್ರೆಯಲ್ಲಿ 1 ಸಿಸೇರಿಯನ್ ಹಾಗೂ 3 ಸಹಜ ಹೆರಿಗೆ ಯಾಗಿದೆ. ಇದರಲ್ಲಿ ಒಂದು ಗಂಡು, 3 ಹೆಣ್ಣು ಮಗು ಜನನವಾಗಿದೆ.
ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಳ
ಜಿಲ್ಲೆಯಲ್ಲಿ ಒಟ್ಟು 30 ಹೆರಿಗೆಯಾಗಿದೆ. ಅದರಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ 11 ಸಹಜ ಹಾಗೂ 8 ಸಿಸೇರಿಯನ್ ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ 3 ಸಹಜ ಹಾಗೂ 8 ಸಿಸೇರಿಯನ್ ಹೆರಿಗೆಯಾಗಿದೆ. ಅದರಲ್ಲಿ 13 ಗಂಡು, 17 ಹೆಣ್ಣು ಮಕ್ಕಳು. 2020ರ ಜ.1ರಂದು 16 ಗಂಡು, 12 ಹೆಣ್ಣು ಮಕ್ಕಳು ಜನಿಸಿದ್ದರು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ನವಜಾತ ಶಿಶುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಗಂಡು ಮಗುವಿನ ಜನನ ಸಂಖ್ಯೆ ಕಡಿಮೆ ಇದೆ. ರಾತ್ರಿ 12 ಗಂಟೆಯೊಳಗೆ ಇನ್ನೂ ಹೆರಿಗೆಯಾಗುವ ಸಾಧ್ಯತೆಗಳಿವೆ.
ಫ್ಯಾನ್ಸಿ ನಂಬರ್
ವ್ಯಾಮೋಹಕ್ಕೊಳಗಾಗಿ ಜ. 1ರ ಹೊಸ ವರ್ಷದಂದೇ ಶಿಶು ಜನನವಾಗಬೇಕಂಬ ದೃಷ್ಟಿಯಿಂದ ಕೆಲವರು ಸಿಸೇರಿಯನ್ ಮೊರೆ ಹೋಗುವುದಿದೆ. ಆದರೆ, ಶುಕ್ರವಾರ ಜನಿಸಿದ ಶಿಶುಗಳ ಪೈಕಿ ಅಂತಹ ಒತ್ತಡಗಳಿರಲಿಲ್ಲ. ಬದಲಾಗಿ ಸಹಜ ಹೆರಿಗೆ ಸಾಧ್ಯವಾಗದ್ದನ್ನು ಸಿಸೇರಿಯನ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ ಉಡುಪಿಯಲ್ಲಿ ಸಿಸೇರಿಯನ್ ಸಂಖ್ಯೆ ಜಾಸ್ತಿ ಇದೆ. ಇದು ಹೊಸ ವರ್ಷದಂದು ಜನಿಸಬೇಕೆಂಬ ಒತ್ತಡ ಇರಬಹುದೇ ಎಂಬ ಸಂದೇಹಗಳಿವೆ.
ವಿಶೇಷ ದಿನವೆಂದು ಸಿಸೇರಿಯನ್ ಸಲ್ಲದು
ಸಿಸೇರಿಯನ್ ಹೆರಿಗೆ ಮಾಡಿಸಲೇಬೇಕಾದ ಸಂದರ್ಭ ಬಂದರೆ ಅದು ಅನಿವಾರ್ಯ. ಆದರೆ ದಿನ ಸರಿಯಾಗಿಲ್ಲ ಅಥವಾ ಹೊಸ ವರ್ಷ, ವಿಶೇಷ ದಿನಗಳಂದು ಶಿಶು ಜನನವಾಗಬೇಕೆಂದು ಅನಗತ್ಯವಾಗಿ ಸಿಸೇರಿಯನ್ ಮೊರೆ ಹೋಗುವುದು ಸರಿಯಲ್ಲ. ಇತ್ತೀಚೆಗೆ ಕೆಲವೆಡೆ ಇಂತಹದ್ದು ನಡೆಯುತ್ತಿದ್ದು, ಆತಂಕಕಾರಿ ಸಂಗತಿ. ಶಿಶು ಜನನ ಆಗಬೇಕಾದ ಅವಧಿಗೆ ಆಗಬೇಕೇ ವಿನಾ ಅವಧಿಪೂರ್ವಕವಾಗಿ ಮಾಡಿಸಿಕೊಳ್ಳುವುದು ತಪ್ಪು. ಈ ಬಗ್ಗೆ ಪೋಷಕರು ಅರಿತುಕೊಳ್ಳಬೇಕು.
-ದುರ್ಗಾಪ್ರಸಾದ್, ವೈದ್ಯಕೀಯ ಅಧೀಕ್ಷಕರು ಲೇಡಿಗೋಶನ್ ಸರಕಾರಿ ಆಸ್ಪತ್ರೆ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.