![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 2, 2021, 3:00 PM IST
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಯರು ಪ್ರಾಣಿ ಪಕ್ಷಿಗಳನ್ನು ದತ್ತುಪಡೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ಆ ಸಾಲಿನಲ್ಲಿ ಇದೀಗ ನಟ ವಸಿಷ್ಠ ಸಿಂಹ ಕೂಡಾ ಸೇರಿಕೊಂಡಿದ್ದು, ಹೊಸ ವರ್ಷದ ಹಿನ್ನೆಯಲ್ಲಿ ಸಿಂಹದ ಮರಿಯೊಂದನ್ನು ದತ್ತು ಪಡೆದುಕೊಂಡು, ಆ ಸಿಂಹದ ಮರಿಗೆ ತನ್ನ ತಂದೆಯ ಹೆಸರಿಟ್ಟಿದ್ದಾರೆ.
ಬನ್ನೇರುಘಟ್ಟ ರಾಷ್ಟೀಯ ಉದ್ಯಾನವನದಲ್ಲಿರುವ ಮೂರು ತಿಂಗಳ ಸಿಂಹದ ಮರಿಯೊಂದನ್ನು ದತ್ತು ಪಡೆದಿರುವ ನಟ, ಈ ಸಿಂಹದ ಮರಿಗೆ ತನ್ನ ತಂದೆಯಾದ ‘ವಿಜಯ ನರಸಿಂಹ’ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ.
ಇವರ ಈ ಪ್ರಾಣಿ ಪ್ರೇಮಕ್ಕೆ ಅಭಿಮಾನಿಗಳನ್ನು ಒಳಗೊಂಡಂತೆ ಹಲವಾರು ಪ್ರಾಣಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ನಟ ವಸಿಷ್ಠ ಸಿಂಹ ಹೊಸ ವರ್ಷದ ಮೊದಲ ದಿನವನ್ನು ವಿಭಿನ್ನವಾಗಿ ಆಚರಿಸುವ ಆಸೆ ನನ್ನದು. ಮುಂಬರುವ ದಿನಗಳಲ್ಲಿಯೂ ಇಂತಹ ಹಲವಾರು ಉತ್ತಮ ಕಾರ್ಯಗಳನ್ನು ಮಾಡುವ ಗುರಿ ಹೊಂದಿದ್ದೇನೆ. ಇದರ ಮೊದಲ ಹೆಜ್ಜೆಯಾಗಿ ಈ ಸಿಂಹದ ಮರಿಯನ್ನು ದತ್ತುಪಡೆದಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ:ನಾಟಿ ಕೋಳಿ ಸಾಕಾಣಿಕೆ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಸ್ಯಾಂಡಲ್ ವುಡ್ ನಲ್ಲಿ ಭಾರಿ ಹೆಸರು ಮಾಡುತ್ತಿರುವ ನಟ ವಸಿಷ್ಠ ಸಿಂಹ, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಕೂಡಾ ಮೈಸೂರಿನ ಮೃಗಾಲಯದಲ್ಲಿರುವ ಆನೆಯೊಂದನ್ನು ದತ್ತುಪಡೆದು ‘ಪಾರ್ವತಿ’ ಎಂದು ಹೆಸರಿಟ್ಟಿದ್ದರು ಎಂದು ವರದಿಯಾಗಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.