ಪುಷ್ಪಾರ್ಚನೆ, ಚಪ್ಪಾಳೆ ತಟ್ಟಿ ಮಕ್ಕಳಿಗೆ ಸ್ವಾಗತ
Team Udayavani, Jan 2, 2021, 3:19 PM IST
ಬೀದರ: ಕೋವಿಡ್-19 ವೈರಸ್‌ನಿಂದಾಗಿ ಗಡಿ ಜಿಲ್ಲೆ ಬೀದರನಲ್ಲಿಯೂ ಕಳೆದ ಕೆಲವು ತಿಂಗಳಿಂದ ಮುಚ್ಚಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯು ದ್ವಿತೀಯ ವರ್ಷದ ಕೊಠಡಿ ಬಾಗಿಲುಗಳು ಸಕಲ ಮುಂಜಾಗ್ರತಾ ಕ್ರಮಗಳೊಂದಿಗೆ ಶುಕ್ರವಾರ ತೆರೆದಿದ್ದು, ಬೋಧನಾ ಚಟುವಟಿಕೆಗಳು ಆರಂಭಗೊಂಡಿವೆ. ಆತಂಕದ ನಡುವೆಯೇವಿದ್ಯಾರ್ಥಿಗಳು ಶಾಲಾ- ಕಾಲೇಜಿನತ್ತ ಹೆಜ್ಜೆ ಹಾಕಿದ್ದಾರೆ.
ರಾಜ್ಯದಲ್ಲಿ ಕೋವಿಡ್ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಕಾರ್ಯಾರಂಭಕ್ಕೆ ಸರ್ಕಾರ ಮುಂದಾಗಿದ್ದು,ಆರಂಭಿಕ ಹಂತದಲ್ಲಿ 10ನೇ ಮತ್ತು ದ್ವಿತೀಯಪಿಯುಸಿ ತರಗತಿ ಸುರಕ್ಷತಾ ಕ್ರಮಗಳೊಂದಿಗೆಶುರು ಮಾಡಲು ಮಾರ್ಗಸೂಚಿ ಪ್ರಕಟಿಸಿದೆಮೊದಲ ದಿನ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆಯೂ ದೊರಕಿದೆ.
ಇನ್ನೂ ಹಲವು ತಿಂಗಳ ಬಳಿಕ ಶಾಲೆ ಆರಂಭ ಹಿನ್ನೆಲೆ ಕಲರವ ಹೆಚ್ಚಿತ್ತು. ಶಾಲೆಗಳಲ್ಲಿಸ್ಯಾನಿಟೈಸರ್ ಸಿಂಪಡಣೆ ಜತೆಗೆ ತೋರಣ ಕಟ್ಟಿ, ರಂಗೋಲಿ ಬಿಡಿಸಿ ವಿಭಿನ್ನವಾಗಿ ಮಕ್ಕಳನ್ನುಬರಮಾಡಿಕೊಳ್ಳಲಾಯಿತು. ಕೆಲವೆಡೆಪುಷ್ಪಾರ್ಚನೆ ಮತ್ತು ಚಪ್ಪಾಳೆ ತಟ್ಟುವ ಮೂಲಕಮಕ್ಕಳನ್ನು ಸ್ವಾಗತಿಸಿರುವುದು ವಿಶೇಷವಾಗಿತ್ತು.ಮಾಸ್ಕ್ ಧರಿಸಿದ್ದ ಮಕ್ಕಳು ಶಾಲೆಗೆ ಬಂದಕೂಡಲೇ ಸ್ಯಾನಿಟೈಸ್ ಬಳಕೆ ಮಾಡಿದರು. ಸಾಮಾಜಿಕ ಅಂತರದಲ್ಲಿ ಕುಳಿತು ಪಾಠ ಆಲಿಸಿದರು. ಶಾಲಾ ಆವರಣದಲ್ಲಿ ವಿದ್ಯಾಗಮನಡೆದರೆ, ಶಾಲೆಯೊಳಗೆ ಸಾಮಾಜಿಕ ಅಂತರದಡಿಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪಾಠಗಳು ನಿರ್ವಿಘ್ನವಾಗಿ ಜರುಗಿದವು.
ಸರ್ಕಾರದ ಆದೇಶದಂತೆ ಪಾಲಕರ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬರಬೇಕೆಂದುವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಸುಮಾರು 10ತಿಂಗಳ ಬಳಿಕ ತರಗತಿಗಳು ಶುರುವಾದ ಪ್ರಯುಕ್ತ ವಿದ್ಯಾರ್ಥಿಗಳಲ್ಲಿ ಸಂತಸ ಮನೆ ಮಾಡಿತ್ತು.
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಆಗಬೇಕಾದರೆ ಮಕ್ಕಳು ಮತ್ತವಿದ್ಯಾರ್ಥಿಗಳ ನಡುವೆ ಸಂಪರ್ಕ ಬಹಳ ಮುಖ್ಯ. ಆದರೆ, ಕೋವಿಡ್‌ನಿಂದಾಗಿ ಕಳೆದಕೆಲ ತಿಂಗಳಿಂದ ಇಬ್ಬರ ನಡುವೆ ಅಂತರ ಆಗಿತ್ತು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಾಲೆ ಆರಂಭಿಸಿರುವ ಸರ್ಕಾರದ ನಿರ್ಣಯಸರಿಯಾಗಿದೆ. ಸಾಕಷ್ಟು ಮುಂಜಾಗ್ರತೆ ಕ್ರಮ ವಹಿಸಲಾಗಿದೆ. –ಬಸವರಾಜ ಬಿರಾದಾರ, ಶಿಕ್ಷಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.