ಸರ್ಕಾರಿ ಯೋಜನೆ ಪ್ರತಿ ಗ್ರಾಮದ ವ್ಯಕ್ತಿಗೂ ತಲುಪಲಿ


Team Udayavani, Jan 2, 2021, 3:54 PM IST

ಸರ್ಕಾರಿ ಯೋಜನೆ ಪ್ರತಿ ಗ್ರಾಮದ ವ್ಯಕ್ತಿಗೂ ತಲುಪಲಿ

ಮುದ್ದೇಬಿಹಾಳ: ಸೋಲು ಗೆಲುವು ಶಾಶ್ವತವಲ್ಲ, ಎಲ್ಲರೂ ಒಂದೇ ಎನ್ನುವ ಭಾವ ಎಲ್ಲರಲ್ಲಿ ಬರಬೇಕು. ಚುನಾವಣೆಯಲ್ಲಿ ಭಿನ್ನವಾಗಿದ್ದರೂ ಅದು ಮುಗಿದ ಮೇಲೆ ಎಲ್ಲರೂ ಅಭಿವೃದ್ಧಿಗಾಗಿ ಒಂದಾಗಿ ಇರಬೇಕು. ನಿಮ್ಮಿಂದ ಯಾರಿಗೂ ಕೆಡುಕಾಗದಂತೆ ನಡೆದುಕೊಳ್ಳಬೇಕು ಎಂದು ಚನ್ನವೀರ ಸ್ವಾಮೀಜಿ ಗ್ರಾಪಂ ನೂತನ ಸದಸ್ಯರಿಗೆ ಸಲಹೆ ನೀಡಿದ್ದಾರೆ.

ಕುಂಟೋಜಿ ಗ್ರಾಮದ ಸಂಸ್ಥಾನ ಹಿರೇಮಠದಲ್ಲಿ ಶುಕ್ರವಾರ ಶ್ರೀಮಠ, ಸ್ವಾಮೀಜಿ ಹಾಗೂ ಗ್ರಾಮಸ್ಥರವತಿಯಿಂದ ಏರ್ಪಡಿಸಿದ್ದ ಸ್ಥಳೀಯವಾಗಿಗ್ರಾಪಂಗೆ ಆಯ್ಕೆಗೊಂಡ ನೂತನ ಸದಸ್ಯರ ಸನ್ಮಾನಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು  ಮಾತನಾಡಿದರು. ಗ್ರಾಪಂ ನೂತನ ಚುನಾಯಿತ ಜನ ಪ್ರತಿನಿ ಧಿಗಳು ಸರ್ಕಾರದ ಯೋಜನೆಗಳನ್ನುಗ್ರಾಮದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಕೆಲಸ ಮಾಡಬೇಕು. ಮಠಮಾನ್ಯಗಳ ಏಳ್ಗೆಗೆಶ್ರಮಿಸಿ. ಎಲ್ಲರೊಂದಿಗೂ ಪ್ರೀತಿ, ವಿಶ್ವಾಸದಿಂದನಡೆದುಕೊಳ್ಳಬೇಕು. ಚುನಾವಣೆ ಸಂದರ್ಭ ತಲೆದೋರಿರಬಹುದಾದ ಸಣ್ಣ ಪುಟ್ಟ ಕಹಿಘಟನೆಗಳನ್ನು ಮರೆತು ಸೌಹಾರ್ದದಿಂದ ಬದುಕು ಸಾಗಿಸಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಕೊಪ್ಪಳ ಗವಿಮಠದ ಸಿದ್ಧಲಿಂಗ ದೇವರು ಮಾತನಾಡಿ, ನಿಜವಾದ ಭಾರತಹಳ್ಳಿಗಳಲ್ಲಿದೆ ಎನ್ನುವುದನ್ನು ಕುಂಟೋಜಿ ಶ್ರೀಮಠ ಸಾಧಿಸಿ ತೋರಿಸಿದೆ. ಕಾಯಕವೇ ನಮ್ಮ ನಾಯಕ ಆಗಬೇಕೇ ಹೊರತು ನಮ್ಮ ಕುರ್ಚಿ, ಹುದ್ದೆಗಳಲ್ಲ. ಜನರ ಹೃದಯದಲ್ಲಿರುವುದು ಬಹು ದೊಡ್ಡ ಕುರ್ಚಿ. ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಸೇವೆಯ ಸುಯೋಗ ದೊರೆತಿದ್ದು ಮಾತ್ರವಲ್ಲದೆ ಮೊದಲನೇ ಸನ್ಮಾನ ಗುರುಗಳಿಂದಲೇ ಆರಂಭವಾಗಿರುವುದು ಶುಭದ ಸಂಕೇತ.ಊರಿನ ಎಲ್ಲ ಸಮಸ್ಯೆಗಳನ್ನು ಹೊಡೆದೋಡಿಸಿಗ್ರಾಮವನ್ನು ಸುರಾಜ್ಯ ಮಾಡಲು ಶ್ರಮಿಸಬೇಕು.ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಿಮ್ಮ ಸೇವೆ ಇತರರಿಗೆ ಗೊತ್ತಾಗದಂತೆ ಇರಬೇಕು ಎಂದರು.

ಇದೇ ವೇಳೆ ಸ್ಥಳೀಯ ಗ್ರಾಪಂಗೆ ಆಯ್ಕೆಗೊಂಡಕುಂಟೋಜಿಯ ಜನ ಪ್ರತಿನಿಧಿ ಗಳಾದ ಶಿವಬಸಪ್ಪ ಸಜ್ಜನ, ಚಂದ್ರಶೇಖರ ಒಣರೊಟ್ಟಿ, ಮಹಿಬೂಸಾನಿಡಗುಂದಿ, ಜಗದೀಶ ಲಮಾಣಿ, ಶೋಭಾಬಿರಾದಾರ, ನಂದಾ ಬಾಗೇವಾಡಿ, ಗುರುಬಾಯಿಹುಲಗಣ್ಣಿ, ಮಂಜುಳಾ ಹುಲಗಣ್ಣಿ, ಸುಮಂಗಲಾ ಬಿರಾದಾರ, ಭೀಮವ್ವ ಭಜಂತ್ರಿ ಹಾಗೂ ಸ್ಥಳೀಯಧುರೀಣ ಮಹಿಬೂಬ ದಖನಿ ಅವರನ್ನು ಚನ್ನವೀರಸ್ವಾಮೀಜಿ, ಸಿದ್ದಲಿಂಗ ದೇವರು, ಸಂಗನಗೌಡಪಾಟೀಲ ಎಲ್ಲರ ಪರವಾಗಿ ಸನ್ಮಾನಿಸಿದರು.ಪ್ರಮುಖರಾದ ಸುರೇಶ ಸಜ್ಜನ, ಲಿಂಗಪ್ಪಉಣ್ಣಿಭಾವಿ, ಸಂಗನಗೌಡ ಬಿರಾದಾರ, ಶಿವಲಿಂಗಪ್ಪ ಗಸ್ತಿಗಾರ, ತಿಪ್ಪಣ್ಣ ರಾಮೋಡಗಿ, ಸಂಗಪ್ಪ ಸಜ್ಜನ,ಮಲ್ಲನಗೌಡ ಬಿರಾದಾರ, ಶ್ರೀಶೈಲ ಸಜ್ಜನ, ಶೇಖು ಬಿಳೇಬಾವಿ, ಎಸ್‌.ಎಂ. ಪಾಟೀಲ ವಕೀಲರು,ಬಸನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಚಂದ್ರಶೇಖರ ಪಾಟೀಲ, ಯಮನಪ್ಪ ಹುಲಗಣ್ಣಿ, ಬಸವರಾಜ ಹುಲಗಣ್ಣಿ, ಗುರುಪಾದ ಹೆಬ್ಟಾಳ,

ತಿಪ್ಪಣ್ಣ ರಾಮೋಡಗಿ, ಗುರು ಅಗಸರ, ಮುತ್ತುಮದರಿ ಇದ್ದರು. ಸಿದ್ದು ಹೆಬ್ಟಾಳ ನಿರೂಪಿಸಿದರು.ಕಾರ್ಯಕ್ರಮಕ್ಕೂ ಮುನ್ನ ಎಲ್ಲರೂ ಹಿರಿಯಶ್ರೀಗಳ ಗದ್ದುಗೆಗೆ ಹಾಗೂ ಇರ್ವರೂ ಶ್ರೀಗಳಿಗೆ ನಮಿಸಿ ಶಭಾಶೀರ್ವಾದ ಪಡೆದುಕೊಂಡರು.

ಟಾಪ್ ನ್ಯೂಸ್

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.