ಉಪನಗರ ರೈಲು ಸಂಚಾರಕ್ಕೆ ಕ್ಷಣಗಣನೆ
ನಾಳೆ ಬೆಳಗ್ಗೆ 4.45ಕ್ಕೆ ಮೆಜೆಸ್ಟಿಕ್‌ನಿಂದ ಏರ್‌ಪೋರ್ಟ್‌ಗೆ ಮೊದಲ ರೈಲು ಸಂಚಾರ
Team Udayavani, Jan 3, 2021, 1:03 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಕ್ಕೆ ರೈಲು ಸಂಪರ್ಕ ಕಲ್ಪಿಸುವ ದಶಕದ ಕನಸು ನನಸಾಗಲು ಈಗ ಕ್ಷಣಗಣನೆ ಆರಂಭವಾಗಿದೆ.
ಈ ಮಾರ್ಗದ ನಡುವೆ ರೈಲು ಸೇವೆಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಸೋಮ ವಾರಬೆಳಗಿನ ಜಾವ 4.45ಕ್ಕೆ ನಗರದ ಹೃದಯಭಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ(ಕೆಎಸ್‌ಆರ್)ದಿಂದ ಮೊದಲ ಉಪನಗರ ರೈಲುವಿಮಾನ ನಿಲ್ದಾಣದ ಕಡೆಗೆ ಹೊರಡಲಿದೆ. ಇದರೊಂದಿಗೆ ಅತ್ಯಂತ ಅಗ್ಗದ ದರದಲ್ಲಿಸಂಚಾರದಟ್ಟಣೆ ಇಲ್ಲದೆ, ಕೇವಲ 1 ಗಂಟೆಯಲ್ಲಿ ಮೆಜೆಸ್ಟಿಕ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣ ದೇವನಹಳ್ಳಿ (ಕೆಐಎಡಿ) ತಲುಪಲಿದ್ದಾರೆ.ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಂತೆ ತಡೆರಹಿತ ಸೇವೆ ಪರಿಚಯಿಸುವ ಚಿಂತನೆ ಇದ್ದು, ಪ್ರಯಾಣ ಅವಧಿ ಕೇವಲ ಅರ್ಧಗಂಟೆ ಆಗಲಿದೆ.
ವೇಳಾಪಟ್ಟಿ ಪ್ರಕಾರ ಬೆಂ.ನಗರ- ಏರ್‌ಪೋರ್ಟ್ ನಡುವೆಯೇ ವಿಶೇಷವಾಗಿ 3 ಜೋಡಿ ಡೆಮು ರೈಲು ಪರಿಚಯಿಸಲಾಗಿದೆ. ವಾರದಲ್ಲಿ 6 ದಿನ (ಭಾನುವಾರ ಹೊರತುಪಡಿಸಿ) ಈ ಸೇವೆ ಇರಲಿದೆ. 2 ಜೋಡಿ ರೈಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ-ಕೆಐಎಎಲ್,
ಮತ್ತೂಂದು ಜೋಡಿ ರೈಲು ಯಶವಂತ ಪುರ- ಕೆಐಎಎಲ್ ಮಧ್ಯೆ ಕಾರ್ಯಾಚರಣೆ ಮಾಡಲಿವೆ. ಜತೆಗೆ ಬಂಗಾರಪೇಟೆಗೆ ತೆರಳುವ 2 ಡೆಮು ರೈಲುಗಳೂ ಸೋಮವಾರದಿಂದ ಕಾರ್ಯಾರಂಭ ಮಾಡಲಿದ್ದು, ಇದೇ ಮಾರ್ಗದಿಂದ ಹಾದು ಹೋಗಲಿವೆ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಅಧಿಕಾರಿಗಳು ತಿಳಿಸಿದ್ದಾರೆ.
8 ಬೋಗಿ: ಒಟ್ಟಾರೆ 8 ಬೋಗಿಗಳ ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಇವು ಒಟ್ಟಾರೆ 2,402 ಪ್ರಯಾಣಿಕರನ್ನು ಕೊಂಡೊಯ್ಯಲಿವೆ. ರೈಲಿನಪ್ರತಿ ಬೋಗಿ 84 ಆಸನ ಸೇರಿ 325 ಪ್ರಯಾಣಿಕರಸಾಮರ್ಥ್ಯ ಹೊಂದಿವೆ. ಮೋಟಾರು ಕಾರುಗಳ ಸಾಮರ್ಥ್ಯ 55 ಆಸನ ಸೇರಿ 226 ಆಗಿರುತ್ತದೆ.
ಬಿಎಂಟಿಸಿ ಸೇವೆ ವೃದ್ಧಿಸಲು ಅವಕಾಶ :
ರೈಲು ಸೇವೆ ಬೆನ್ನಲ್ಲೇ ಬಿಎಂಟಿಸಿಗೂ ತನ್ನ ಬಸ್ ಸೇವೆ ವೃದ್ಧಿಸಲು ಅವಕಾಶ ತೆರೆದುಕೊಂಡಂತಾಗಿದೆ. ರೈಲು ನಿಲುಗಡೆ ಹಿನ್ನೆಲೆ ಸುತ್ತಲಿನಿಂದ ಹಾಲ್ಟ್ ಸ್ಟೇಷನ್‌ಗೆ ಬರುವಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಇದಕ್ಕೆ ಪೂರಕವಾಗಿಬಾಗಲೂರು, ಏರೋಸ್ಪೇಸ್ ಪಾರ್ಕ್, ಮೈಲನಹಳ್ಳಿ,ಕಾರ್ಗೊ ಏರ್‌ಪೋರ್ಟ್, ಹಾಲ್ಟ್ ಸ್ಟೇಷನ್ ಮಾರ್ಗಗಳಲ್ಲಿಬಿಎಂಟಿಸಿ ಪ್ರಯಾಣಿಕರ ಒತ್ತಡಕ್ಕೆ ಅನುಗುಣವಾಗಿ ಬಸ್‌ಪರಿಚಯಿಸಬಹುದು. ಸದ್ಯ ಬಸ್ ಸೇವೆಗಳು ಆಯಾಸೀಮಿತ ಪ್ರದೇಶದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಪ್ರಸ್ತುತ ಚಿಕ್ಕಬಳ್ಳಾಪುರ, ಕೋಲಾರಕ್ಕೆ ತೆರಳುವರುದೊಡ್ಡಜಾಲಕ್ಕೆ ತೆರಳಿ, ಅಲ್ಲಿಂದ ರೈಲು ಹತ್ತುತ್ತಿದ್ದಾರೆ. ಇದುದೂರ (ಬಾಗಲೂರು-ದೊಡ್ಡಜಾಲ 14 ಕಿ.ಮೀ.) ಹಾಗೂರಸ್ತೆಯೂ ಸರಿಯಾಗಿಲ್ಲ. ಬಸ್ ಸೇವೆ ಸಿಕ್ಕರೆ, ನೇರವಾಗಿಹಾಲ್ಟ್ಸ್ಟೇಷನ್‌ಗೆ ಬರಬಹುದು. ಅದೇ ರೀತಿ, ಕಾರ್ಗೊ ಏರ್‌ಪೋರ್ಟ್, ಏರೋಸ್ಪೇಸ್ ಪಾರ್ಕ್‌ಗೆ ಕೆಲಸಕ್ಕೆ ಬರುವಪ್ರಯಾಣಿಕರಿಗೂ ಅನುಕೂಲ ಆಗಲಿದೆ ಎಂದುಉಪನಗರ ರೈಲು ತಜ್ಞ ಸಂಜೀವ್ ದ್ಯಾಮಣ್ಣವರ ಅಭಿಪ್ರಾಯಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.