ಅಧ್ಯಕ್ಷಗಾದಿಗಾಗಿ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!

ಮೀಸಲು ನಿಗದಿಗೂ ಮುನ್ನವೇ ತಂತ್ರಗಾರಿಕೆ , ಪಕ್ಷಗಳ ಬೆಂಬಲಿತರ ಮೇಲೆ ಹದ್ದಿನ ಕಣ್ಣು

Team Udayavani, Jan 3, 2021, 4:03 PM IST

ಅಧ್ಯಕ್ಷಗಾದಿಗಾಗಿ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!

ಜೇವರ್ಗಿ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆಮುಗಿಯುತ್ತಿದ್ದಂತೆ, ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಬೆಂಬಲಿತ ಸದಸ್ಯರುಹಾಗೂ ಯಾರ ಬೆಂಬಲವೂ ಇಲ್ಲದೇ ಆರಿಸಿ ಬಂದವರಿಗೂ ಡಿಮ್ಯಾಂಡ್‌ ಹೆಚ್ಚಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷಸ್ಥಾನಗಳಿಗೆ ಚುನಾವಣೆ ಅಧಿಕಾರಿಗಳಾದಜಿಲ್ಲಾಧಿ ಕಾರಿಗಳು ಮೀಸಲು ನಿಗದಿಪಡಿಸಲುಇನ್ನು ಕಾಲಾವಕಾಶ ಹಿಡಿಯುತ್ತದೆ.ಆದರೂ ಪಂಚಾಯಿತಿಯಲ್ಲಿ ತಮ್ಮ ಪಕ್ಷದಬೆಂಬಲಿತರೇ ಗದ್ದುಗೆ ಹಿಡಿಯುವಂತೆಮಾಡಲು ರಾಜಕೀಯ ನಾಯಕರು ತಂತ್ರಗಾರಿಕೆ ಶುರು ಮಾಡಿದ್ದಾರೆ.ಚುನಾವಣೆಯಲ್ಲಿ ವಿವಿಧ ಪಕ್ಷಗಳಬೆಂಬಲದಿಂದ ಗೆಲುವು ಸಾಧಿ ಸಿರುವಸದಸ್ಯರು ಯಾವ್ಯಾವ ವರ್ಗಕ್ಕೆ ಸೇರಿದವರುಎನ್ನುವ ಪಟ್ಟಿಯನ್ನು ರಾಜಕೀಯಪಕ್ಷಗಳು ಸಿದ್ಧಪಡಿಸಿಕೊಂಡಿವೆ. ಯಾವ ವರ್ಗದ ಸದಸ್ಯರು ಪಕ್ಷಗಳೊಂದಿಗೆಗುರುತಿಸಿಕೊಂಡಿಲ್ಲವೋ ಅಂತಹವರನ್ನುಸೆಳೆಯುವ ಪ್ರಯತ್ನ ನಡೆಯುತ್ತಿದೆ.

ಚುನಾವಣೆಯಲ್ಲಿ ಇಂತಹದೇ ಪಕ್ಷದ ಬೆಂಬಲಿಗರು ಎಂದು ಹೇಳಿಕೊಂಡುಗೆದ್ದವರ ಮೇಲೂ ರಾಜಕೀಯ ನಾಯಕರಿಗೆ ವಿಶ್ವಾಸವಿಲ್ಲ. ಹಣ, ಅಧಿಕಾರದಂತಹ ಆಮಿಷಕ್ಕೆ ಒಳಗಾಗಿ ಎಲ್ಲಿ ಕೈ ಕೊಡುತ್ತಾರೋ ಎನ್ನುವ ಆತಂಕವೂ ಕಾಡುತ್ತಿದೆ. ಈಗಾಗಲೇ ತಾಲೂಕಿನ ಕೆಲವು ಕಡೆ ಒಂದು ಪಕ್ಷದ ಬೆಂಬಲ ಪಡೆದು ಜಯ ಸಾಧಿಸಿ ಮತ್ತೂಂದು ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಬೆಂಬಲಿತ ಸದಸ್ಯರ ಮೇಲೆ ಹದ್ದಿನ ಕಣ್ಣು ಇಡುತ್ತಿದ್ದಾರೆ.

ಪಂಚಾಯಿತಿ ವರಿಷ್ಠ ಸ್ಥಾನಗಳಿಗೆ ಯಾವುದೇ ಮೀಸಲಾತಿ ನಿಗದಿಯಾದರೂಆ ವರ್ಗದ ಸದಸ್ಯರು ಪಕ್ಷದೊಂದಿಗೆಇರುವಂತೆ ನೋಡಿಕೊಳ್ಳಲಾಗುತ್ತಿದೆ.ಇದಕ್ಕಾಗಿ ಅವರ ಇಷ್ಟಾರ್ಥ ಈಡೇರಿಸುವಕಾರ್ಯವೂ ನಡೆದಿದೆ. ಒಟ್ಟಿನಲ್ಲಿ ಸದಸ್ಯರಿಗೆ ಫುಲ್‌ ಡಿಮ್ಯಾಂಡ್‌ ಬಂದಿದೆ.ತಾಲೂಕಿನ 23 ಗ್ರಾಪಂಗಳಲ್ಲಿಬಿಜೆಪಿ, ಕಾಂಗ್ರೆಸ್‌ ಬೆಂಬಲಿಗರು ಪಾರುಪತ್ಯ ಮೆರೆದಿದ್ದಾರೆ. ಮೂರ್‍ನಾಲ್ಕು ಪಂಚಾಯಿತಿಗಳಲ್ಲಿ ಜೆಡಿಎಸ್‌ ಬೆಂಬಲಿಗರುಚುನಾಯಿತರಾಗಿದ್ದಾರೆ. ಕೆಲ ಮೂಲಗಳಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್‌ ಅಧಿಕಾರಹಿಡಿಯಲು ಸಮಬಲ ಸಾ ಧಿಸಬಹುದು ಎಂದು ಅಂದಾಜಿಸಲಾಗಿದೆ.

ಆಡಳಿತಾರೂಢ ಬಿಜೆಪಿ ಮೀಸಲಾತಿ ರಾಜಕೀಯ ಮಾಡಿದಲ್ಲಿ ಕಾಂಗ್ರೆಸ್‌ ಹಾಗೂಜೆಡಿಎಸ್‌ ಬೆಂಬಲಿಗರು ಸುಲಭವಾಗಿ ಸಿಗುವ ಅಧಿಕಾರ ಪಡೆಯಲು ಸಾಕಷ್ಟುಕಸರತ್ತು ನಡೆಸಬೇಕಾಗುತ್ತದೆ. ಮೀಸಲುನಿಗದಿ ನಂತರವಷ್ಟೇ ಗ್ರಾಮ ಪಂಚಾಯಿತಿಗಳ ರಾಜಕೀಯ ಮೇಲಾಟ ನಡೆಯಲಿದೆ.

 

ವಿಜಯಕುಮಾರ ಎಸ್‌.ಕಲ್ಲಾ

ಟಾಪ್ ನ್ಯೂಸ್

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Jammu-Vaishnodevi

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

court

Manipal: ಲಂಚ ಸ್ವೀಕಾರ ಆರೋಪದಲ್ಲಿ ಬಂಧಿತರಿಗೆ ಜಾಮೀನು

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

1-kateel

Yakshagana; ಕಟೀಲು ದೇಗುಲದ ಆರು ಮೇಳಗಳ ತಿರುಗಾಟ ಆರಂಭ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Winter session: ವರ್ಷದ ಕೊನೆಯ ಸಂಸತ್‌ ಅಧಿವೇಶನ ಫ‌ಲಪ್ರದವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.