ದತ್ತು ಶಾಲೆಗಳ ಅಭಿವೃದ್ಧಿಗೆ ಪಣ
ಮೂರು ಶಾಲೆಗಳನ್ನು ದತ್ತು ಪಡೆದ ಮಾಯಕೊಂಡ ಶಾಸಕ ಪ್ರೊ| ಲಿಂಗಣ್ಣ
Team Udayavani, Jan 3, 2021, 5:20 PM IST
ದಾವಣಗೆರೆ: ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಮಾಯಕೊಂಡ ವಿಧಾನಸಭೆ ಕ್ಷೇತ್ರದ ಮೂರು ಸರ್ಕಾರಿ ಶಾಲೆಗಳನ್ನು ಶಾಸಕ ಪ್ರೊ| ಲಿಂಗಣ್ಣ ದತ್ತು ಪಡೆದಿದ್ದಾರೆ.
ತಾಲೂಕಿನ ತ್ಯಾವಣಿಗೆಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಆನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮೆಳ್ಳೆಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಶಾಸಕರು ದತ್ತು ಪಡೆದುಕೊಂಡಿದ್ದಾರೆ. ದತ್ತು ಪಡೆದ ಈ ಮೂರು ಶಾಲೆಗಳ ಅಭಿವೃದ್ಧಿಗಾಗಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನ ಬಳಸಿಕೊಳ್ಳಲಾಗುತ್ತಿದ್ದು ಈ ಶಾಲೆಗಳಲ್ಲಿ ಕೈಗೊಳ್ಳ ಬಹುದಾದ ಅಗತ್ಯ ಸೌಲಭ್ಯಗಳಿಗೆ ಬೇಕಾಗಬಹುದಾದ ಅಂದಾಜುಪಟ್ಟಿ ತಯಾರಿಸಲಾಗಿದೆ. ತ್ಯಾವಣಿಗೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ 20ಲಕ್ಷ ರೂ., ಆನಗೋಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 20 ಲಕ್ಷ ರೂ. ಹಾಗೂ ಮೆಳ್ಳೆಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 20ಲಕ್ಷ ರೂ.ಗಳ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಒಟ್ಟು 60ಲಕ್ಷ ರೂ.ಗಳ ವೆಚ್ಚದಲ್ಲಿ ಶಾಸಕರುದತ್ತು ಪಡೆದ ಮೂರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದಾರೆ.
ತ್ಯಾವಣಿಗೆ ಕೆಪಿಎಸ್ -20 ಲಕ್ಷ ರೂ. :
ತ್ಯಾವಣಿಗೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 1-12 ತರಗತಿಯವರೆಗೆ 421 ವಿದ್ಯಾರ್ಥಿಗಳಿದ್ದಾರೆ. ಶಾಲೆಗೆ ಮೂರು ತರಗತಿ ಕೊಠಡಿ, ಕ್ರೀಡಾ ಸಾಮಗ್ರಿ ಕೊಠಡಿ, ವೃತ್ತಿಶಿಕ್ಷಣ ಕೊಠಡಿ, ಐದು ಹೊಲಿಗೆ ಯಂತ್ರಗಳು, ಲ್ಯಾಪ್‌ಟಾಪ್‌ಬೇಡಿಕೆ ಇದೆ. ಶಾಸಕರು ನಿಗದಿಪಡಿಸಿದ 20ಲಕ್ಷ ರೂ.ಗಳ ಅನುದಾನದಲ್ಲಿ ನಾಲ್ಕು ಹೆಚ್ಚುವರಿ ಕೊಠಡಿ, ಪ್ರಯೋಗಾಲಯ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದೆ.
ಶಾಲೆಯಲ್ಲಿ ಮುಖ್ಯವಾಗಿ ಕೊಠಡಿ ಸಮಸ್ಯೆ ಹೆಚ್ಚಾಗಿದೆ. ಎರಡು ಪ್ರಯೋಗಾಲಯ ಕೊಠಡಿ, ಝೆರಾಕ್ಸ್ ಯಂತ್ರ, ಗ್ರಂಥಾಲಯ ಕೊಠಡಿ ಸೇರಿದಂತೆ ಇನ್ನಿತರ ಅಗತ್ಯ ಉಪಕರಣಗಳ ಅವಶ್ಯಕತೆ ಇದೆ. –ಶರಣಪ್ಪ ಆರ್., ಉಪ ಪ್ರಾಚಾರ್ಯರು
ಆನಗೋಡು ಸ.ಹಿ.ಪ್ರಾ ಶಾಲೆ -20 ಲಕ್ಷ ರೂ. : ಆನಗೋಡು ಸ.ಹಿ.ಪ್ರಾ ಶಾಲೆಯಲ್ಲಿ 1-8ನೇ ತರಗತಿ ನಡೆಯುತ್ತಿದ್ದು 413 ಮಕ್ಕಳಿದ್ದಾರೆ. ಒಂದು ಹೊಸ ಕೊಠಡಿ, ನೂರು ಡೆಸ್ಕ್, 10 ಗ್ರೀನ್ ಬೋರ್ಡ್, ಒಂದು ಕುಡಿಯುವನೀರಿನ ಫಿಲ್ಟರ್, ಎರಡು ಹೈಟೆಕ್ ಶೌಚಾಲಯ ಹಾಗೂ ಶಾಲೆಗೆ ಸುಣ್ಣ-ಬಣ್ಣ ಸೇರಿ 20ಲಕ್ಷ ರೂ.ಗಳ ಶಾಸಕರ ಅನುದಾನದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗಿದೆ.
ಶಾಲೆಗೆ ಕೊಠಡಿ ಸಮಸ್ಯೆ ಬಹು ಮುಖ್ಯವಾಗಿ ಕಾಡುತ್ತಿದ್ದು ಮೂರು ಕೊಠಡಿಗಳ ಅವಶ್ಯಕತೆಇದೆ. ಅಕ್ಷರ ದಾಸೋಹ ಕಟ್ಟಡ,ಊಟದ ಹಾಲ್, ಸಭಾಭವನ ಆಗಬೇಕಾಗಿದೆ.ಆರು ವೈಟ್‌ಬೋರ್ಡ್, 10ಮೇಜುಗಳು ಶಾಲೆಗೆಅಗತ್ಯವಾಗಿವೆ. ಇದರ ಜತೆಗೆ ಶಾಲೆಯಆವರಣಗೋಡೆ ನಿರ್ಮಿಸುವ ಕೆಲಸವೂ ಆಗಬೇಕಾಗಿದೆ. – ಲೋಕಣ್ಣ ಮಾಗೋಡ, ಮುಖ್ಯ ಶಿಕ್ಷಕರು
ಮೆಳ್ಳೆಕಟ್ಟೆ ಸ.ಹಿ.ಪ್ರಾ ಶಾಲೆ- 20 ಲಕ್ಷ ರೂ. : ಮೆಳ್ಳೆಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1-7ನೇ ತರಗತಿ ನಡೆಯುತ್ತಿದ್ದು115 ಮಕ್ಕಳು ಇದ್ದಾರೆ. ಶಾಸಕರು ಸಭೆಮಾಡಿ ವಿಶೇಷ ಅನುದಾನದ ಭರವಸೆಯೂನೀಡಿದ್ದಾರೆ. ಪ್ರಸ್ತುತ ಶಾಸಕರು 20 ಲಕ್ಷರೂ.ಗಳ ಅನುದಾನ ನಿಗದಿಪಡಿಸಿದ್ದುಇದರಲ್ಲಿ ಒಂದು ಹೊಸ ಕೊಠಡಿ, 30ಡೆಸ್ಕ್, ಐದು ಗ್ರೀನ್ ಬೋರ್ಡ್, ಒಂದು ಕುಡಿಯುವ ನೀರಿನ μಲ್ಟರ್, ಹೈಟೆಕ್ ಶೌಚಾಲಯ, ಶಾಲೆಗೆ ಸುಣ್ಣ- ಬಣ್ಣ ಹಚ್ಚುವಕ್ರಿಯಾಯೋಜನೆ ತಯಾರಿಸಲಾಗಿದೆ.
ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಧಿಕವಾಗಿದೆ. ಕೊಳವೆ ಬಾವಿಯ ಅವಶ್ಯಕತೆ ಇದ್ದು,ಶಾಸಕರು ಅದನ್ನು ಈಡೇರಿಸುವದಾಗಿ ಭರವಸೆ ನೀಡಿದ್ದಾರೆ. ಈ ಭಾಗದಲ್ಲಿ ಫ್ಲೊರೈಡ್ ಅಂಶ ಹೆಚ್ಚಿರುವುದರಿಂದ ನೀರು ಶುದ್ಧೀಕರಣ ಘಟಕ ಸ್ಥಾಪನೆ ಬೇಡಿಕೆಯೂ ಇದೆ. ಆರು ಗಣಕಯಂತ್ರ, ನೀರಿನಫಿಲ್ಟರ್, ರಂಗ ಮಂದಿರದ ಬೇಡಿಕೆ ಇಡಲಾಗಿದೆ. -ಪರಮೇಶ್ವರ ಎಲ್., ಮುಖ್ಯ ಶಿಕ್ಷಕರು
ನನ್ನ ಕ್ಷೇತ್ರದಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲುದತ್ತು ಪಡೆದಿದ್ದೇನೆ. ಪ್ರಸ್ತುತ ದತ್ತು ಶಾಲೆಗಅಭಿವೃದ್ಧಿಗೆ 60 ಲಕ್ಷ ರೂ.ಗಳ ಅನುದಾನ ನಿಗದಿಪಡಿಸಿದ್ದು ಸರ್ಕಾರದಿಂದ ವಿಶೇಷ ಅನುದಾನ ಪಡೆಯುವ ಮೂಲಕ ಇನ್ನಷ್ಟು ಸೌಲಭ್ಯ ಕಲ್ಪಿಸಿ ದತ್ತು ಶಾಲೆಗಳನ್ನು ಮಾದರಿ ಮಾಡುವ ಗುರಿ ಇದೆ. – ಪ್ರೊ| ಲಿಂಗಣ್ಣ, ಶಾಸಕರು, ಮಾಯಕೊಂಡ ಕ್ಷೇತ್ರ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
MUST WATCH
ಹೊಸ ಸೇರ್ಪಡೆ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.