ನಿಮ್ಮ ಗ್ರಹಬಲ: ಹಿತಶತ್ರುಗಳಿಂದ ಆಗಾಗ ಏಕಾಗ್ರತೆಗೆ ಭಂಗ ಬಂದೀತು!
Team Udayavani, Jan 4, 2021, 7:47 AM IST
04-01-2021
ಮೇಷ: ಆರ್ಥಿಕವಾಗಿ ಭಾಗ್ಯ, ಸಂಪತ್ತುಗಳು ವೃದ್ಧಿಸುವುದು. ಸಾಂಸಾರಿಕವಾಗಿ ವಿವಾಹಾದಿ, ಶುಭ ಮಂಗಲ- ಕಾರ್ಯಗಳ ಚಿಂತನೆ ಸದ್ಯದಲ್ಲೇ ಅನುಕೂಲಕರವಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಾರರಿಗೆ ಅನುಕೂಲವಿದೆ.
ವೃಷಭ: ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚಾದೀತು. ಆಕಸ್ಮಿಕವಾಗಿ ಧನ ಸಂಪತ್ತು ಕೈಗೂಡಲಿದೆ. ಅಲ್ಲದೆ ಆರೋಗ್ಯ ಉತ್ತಮವಾದರೂ ಉದಾಸೀನತೆಯು ಸಲ್ಲದು. ಕೃಷಿ ಹಾಗೂ ಕೂಲಿ ಕಾರ್ಮಿಕರಿಗೆ ಲಾಭಾಂಶ ಹೆಚ್ಚಲಿದೆ.
ಮಿಥುನ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಕೃಪೆಯು ನಿಮ್ಮ ಮೇಲಿರುತ್ತದೆ. ಧನಾಗಮನವು ಸುಸೂತ್ರವಾಗಿದ್ದರೂ ಖರ್ಚಿಗೆ ಅನೇಕ ಮಾರ್ಗಗಳಿವೆ. ಸರಕಾರಿ ಕೆಲಸ ಕಾರ್ಯಗಳು ಅನಾವಶ್ಯಕ ಧನವ್ಯಯಕ್ಕೆ ಕಾರಣವಾದೀತು.
ಕರ್ಕ: ಗುರಿ ಮುಟ್ಟುವ ನಿಮ್ಮ ಛಲದ ಮುಂದೆ ಯಾವ ತಡೆಯೂ ನಿಲ್ಲಲಾರದು. ನಿಮ್ಮ ತಾಕತ್ತು ನಿಮ್ಮನ್ನು ಗುರಿ ಮುಟ್ಟಿಸಲಿದೆ. ನಿಮ್ಮ ಚಂಚಲ ಮನಸ್ಸು ನಿಮ್ಮನ್ನು ಗುರಿಯತ್ತ ವಿಚಲಿತಗೊಳಿಸಲಿದೆ.
ಸಿಂಹ: ಧನಾಗಮನದಲ್ಲಿ ತೊಂದರೆ ಇಲ್ಲದಿದ್ದರೂ ವ್ಯಾಪಾರ, ವ್ಯವಹಾರದಲ್ಲಿ ಹೂಡಿಕೆಯನ್ನು ಮಾಡಿರಿ. ಬದಲಾವಣೆಗೆ ಇದು ಸರಿಯಾದ ಸಮಯವಲ್ಲ. ವಾಹನ ಚಾಲನೆಯಲ್ಲಿ ಬಹಳ ಜಾಗ್ರತೆ ಮಾಡುವುದು.
ಕನ್ಯಾ: ವೃತ್ತಿರಂಗದಲ್ಲಿ ನಿಮ್ಮ ಗುರಿ ಮುಟ್ಟುವ ಛಲ ನಿಮ್ಮ ಮುಂದೆ ಯಾವ ತಡೆಯೂ ನಿಲ್ಲಲಾರದು. ಧನಾಗಮನಕ್ಕೆ ತೊಂದರೆ ಇಲ್ಲವಾದರೂ ಖರ್ಚುವೆಚ್ಚಗಳಲ್ಲಿ ಹಿಡಿತವಿರಲಿ. ಆರೋಗ್ಯದಲ್ಲಿ ಏರುಪೇರಾದೀತು.
ತುಲಾ: ನಿಮ್ಮ ತಾಕತ್ತು ನಿಮ್ಮನ್ನು ಯಶಸ್ಸು ಕೊಡುತ್ತದೆ. ಖನ್ನತೆಗೆ ಒಳಗಾಗ ಬೇಡಿರಿ. ಕೌಟುಂಬಿಕವಾಗಿ ಸಣ್ಣ ಸಣ್ಣ ಭಿನ್ನಾಭಿಪ್ರಾಯ ಮೂಡಿಬಂದೀತು. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟಕ್ಕೆ ಪ್ರಯತ್ನಬಲ ಪ್ರಾಪ್ತಿಯಾಗಲಾರದು.
ವೃಶ್ಚಿಕ: ವೃತ್ತಿರಂಗದಲ್ಲಿ ಹೊಸತನ ರೂಡಿಸಿಕೊಳ್ಳಿರಿ. ಕಾರ್ಯಸಾಧನೆಗೆ ಸಾಧಕವಾಗಲಿದೆ. ಸಾಂಸಾರಿಕವಾಗಿ ಸಮಸ್ಯೆಗಳು, ವಿವಾದಗಳು ತನ್ನಿಂತಾನೇ ಮರೆಯಾಗಲಿವೆ. ಭಾವೋದ್ವೇಗಕ್ಕೆ ಗುರಿಯಾಗದಂತೆ ಎಚ್ಚರವಿರಲಿ.
ಧನು: ನಿಮಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ತಲೆ ಬಿಸಿ ಮಾಡಿಕೊಳ್ಳಬೇಡಿ. ಹೊಸ ಜವಾಬ್ದಾರಿ ನಿಮ್ಮ ತಲೆ ಮೇಲೆ ಬೀಳಲಿದೆ. ಗೃಹದಲ್ಲಿ ಶುಭಮಂಗಲ ಕಾರ್ಯದ ತಯಾರಿ ಬಗ್ಗೆ ಮಾತುಕತೆ ನಡೆದೀತು. ಶುಭವಿದೆ.
ಮಕರ: ನೀವೀಗ ಮಾನಸಿಕ ಹಾಗೂ ದೈಹಿಕ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ನಿಮ್ಮ ಜೀವನವು ನಿಧಾನವಾಗಿ ಪ್ರಗತಿ ಪಥದಲ್ಲಿ ಸಾಗಲಿದೆ. ನೀವು ಆಯ್ದುಕೊಂಡ ರೀತಿಯು ತುಂಬಾ ಉತ್ತಮವಿದೆ.
ಕುಂಭ: ವೃತ್ತಿರಂಗದಲ್ಲಿ ತುಸು ಬದಲಾವಣೆಗೆ ನೀವು ಸಿದ್ಧರಾಗದಿದ್ದರೂ ನಿಮ್ಮನ್ನು ಅತ್ತ ಒಯ್ಯಲಿರುವುದು. ವಿವಾದಗಳು ತನ್ನಿಂತಾನೇ ಮರೆಯಾಗಲಿದೆ. ಮನೆಯಲ್ಲಿ ಪತ್ನಿಯ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ಮಾಡಿರಿ.
ಮೀನ: ವೃತ್ತಿರಂಗದಲ್ಲಿ ಸದ್ಯದಲ್ಲೇ ಮರುಚೈತನ್ಯ ಪಡೆಯುವ ಸೂಚನೆ ತೋರಿ ಬರಲಿದೆ. ಮುನ್ನಡೆಯಿಂದ ಯಶಸ್ಸು ತೋರಿಬರಲಿದೆ. ಹಿತಶತ್ರುಗಳಿಂದ ಆಗಾಗ ಏಕಾಗ್ರತೆಗೆ ಭಂಗ ಬಂದೀತು. ಶುಭವಿದೆ.
ಎನ್.ಎಸ್. ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.