ಮಂಗಳೂರಿನ ಆರು ಪಾರ್ಕ್‌ಗಳ ಅಭಿವೃದ್ಧಿಗೆ ಮುಂದಾದ ಪಾಲಿಕೆ

ಸಾರ್ವಜನಿಕರ ವಾಯು ವಿಹಾರಕ್ಕೆ ಅನುಕೂಲ ಒದಗಿಸುವ ಉದ್ದೇಶ: 1.56 ಕೋಟಿ ರೂ. ವೆಚ್ಚದ ಕಾಮಗಾರಿ

Team Udayavani, Jan 4, 2021, 12:56 PM IST

ಮಂಗಳೂರಿನ ಆರು ಪಾರ್ಕ್‌ಗಳ ಅಭಿವೃದ್ಧಿಗೆ ಮುಂದಾದ ಪಾಲಿಕೆ

ಮಹಾನಗರ, ಜ. 3: ಮಂಗಳೂರು ನಗರದ ಸೌಂದರ್ಯದ ಜತೆಗೆ ಸಾರ್ವ ಜನಿಕರಿಗೆ ವಾಯು ವಿಹಾರಕ್ಕೆ ಅನುಕೂಲ ವಾಗಲಿ ಎಂಬ ಉದ್ದೇಶದಿಂದ 1.56 ಕೋಟಿ ರೂ. ವೆಚ್ಚದಲ್ಲಿ ನಗರದ 6 ಪಾರ್ಕ್‌ ಗಳನ್ನು ಅಭಿವೃದ್ಧಿಪಡಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

ಮಂಗಳೂರು ಮಹಾನಗರ ಪಾಲಿಕೆಗೆ ರಾಜ್ಯ ಸರಕಾರದ 2020-21ನೇ 15ನೇ ಹಣಕಾಸು ಯೋಜನೆಯಡಿ ಸಾಮಾನ್ಯ ಸಹಾಯ ಧನವಾಗಿ 23 ಕೋಟಿ ರೂ. ಬಿಡು ಗಡೆಯಾಗಿದ್ದು, ಇದರಲ್ಲಿ 1.56 ಕೋಟಿ ರೂ.ವನ್ನು ಪಾರ್ಕ್‌ ಅಭಿವೃದ್ಧಿಗೆ ಮೀಸಲಿಡಲು ನಿರ್ಧರಿಸಲಾಗಿದೆ. ಇದಕ್ಕೆಂದು ಈಗಾಗಲೇ ಅಂದಾಜು ವೆಚ್ಚ ತಯಾರು ಮಾಡಲಾಗಿದೆ.

ನಗರದ ಬಂಗ್ರಕೂಳೂರು ವಾರ್ಡ್‌ ಪಾರ್ಕ್‌, ಕಂಬ್ಳ ವಾರ್ಡ್‌ನ ಭಗವತಿ ದೇವಸ್ಥಾನ ಬಳಿಯ ಪಾರ್ಕ್‌, ಮಂಗಳಾ ದೇವಿ ವಾರ್ಡ್‌ನ ಮಂಗಳಾನಗರ ಮತ್ತು ಜೆಪ್ಪು ಪಾರ್ಕ್‌, ಪದವು ಪಶ್ಚಿಮ ವಾರ್ಡ್‌ ಪಾರ್ಕ್‌, ಕದ್ರಿ ಉತ್ತರ ವಾರ್ಡ್‌ ಪಾರ್ಕ್‌, ಮಣ್ಣಗುಡ್ಡೆ ವಾರ್ಡ್‌ನ ಮೇಯರ್‌ ಬಂಗ್ಲೆ ಬಳಿ ಪಾರ್ಕ್‌ ಅಭಿವೃದ್ಧಿ ಕಾಮಗಾರಿಯನ್ನು ಮನಪಾ ಕೈಗೆತ್ತಿಕೊಂಡಿದೆ.

ವಿಪಕ್ಷದಿಂದ ಅಪಸ್ವರ :

ಮಹಾನಗರ ಪಾಲಿಕೆ ವತಿಯಿಂದ ಪಾರ್ಕ್‌ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮನಪಾ ವಿರೋಧ ಪಕ್ಷದ ಸದಸ್ಯರಿಂದ ಅಪಸ್ವರ ಕೇಳಿಬಂದಿದೆ. ಮನಪಾ ಮಾಜಿ ಮೇಯರ್‌ ಭಾಸ್ಕರ್‌ ಕೆ. ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಅನುದಾನ ಬಿಡುಗಡೆಯಲ್ಲಿ ಮನಪಾ ತಾರತಮ್ಯ ಮಾಡಿದೆ. ಬಿಜೆಪಿ ಸದಸ್ಯರ ವಾರ್ಡ್‌ಗಳ ಪಾರ್ಕ್‌ ಅಭಿವೃದ್ಧಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದು.  ವಿಪಕ್ಷ ಸದಸ್ಯರ ವಾರ್ಡ್‌ಗಳ ಪಾರ್ಕ್‌ ಅಭಿವೃದ್ಧಿಗೆ ಹಣ ಮೀಸಲಿಟ್ಟಿಲ್ಲ. ಈ ರೀತಿಯ ತಾರತಮ್ಯ ಸರಿಯಲ್ಲ’ ಎಂದು ಹೇಳಿದ್ದಾರೆ.

ಪಾರ್ಕ್‌ ಅಭಿವೃದ್ಧಿಗೆ ಯೋಜನೆ :

ಪಾಲಿಕೆ ಅಭಿವೃದ್ಧಿಪಡಿಸಲು ಗುರುತಿಸಿದ ಕೆಲವೊಂದು ಪಾರ್ಕ್‌ ಈಗಾಗಲೇ ಪಾಳು ಬಿದ್ದಿದೆ. ಇನ್ನೂ ಕೆಲವು ಕಡೆಗಳಲ್ಲಿ ಪಾರ್ಕ್‌ ಕಾಮಗಾರಿ ಅರ್ಧಂಬರ್ಧ ನಡೆದಿದೆ. ಇದರಿಂದಾಗಿ ಸಾರ್ವಜನಿಕರ ಸಮರ್ಪಕ ಬಳಕೆಗೆ ಅನಾನುಕೂಲವಾಗುತ್ತಿತ್ತು. ಭಗವತಿ ದೇಗುಲದ ಬಳಿಯ ಪಾರ್ಕ್‌ ಪಾಳೂ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಮಕ್ಕಳ ಆಟಕ್ಕೆ ಜಾರು ಬಂಡಿ, ವಾಕಿಂಗ್‌ ಟ್ರಾಕ್‌ ನಿರ್ಮಾಣವಾಗಲಿದೆ. ಅದೇ ರೀತಿ ಕೋಡಿಕಲ್‌ ಬಳಿಯ ಕಲ್ಲಕಂಡದಲ್ಲಿರುವ ಬೃಹತ್‌ ಪಾರ್ಕ್‌ ಅಭಿವೃದ್ಧಿಗೆ ಈ ಹಿಂದೆ ಸುಮಾರು 70 ಲಕ್ಷ ರೂ. ಬಿಡುಗಡೆಗೊಂಡಿದ್ದರೂ ಅಭಿವೃದ್ಧಿಹೊಂದಿಲ್ಲ. ಇದೀಗ 63 ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಸದ್ಯದಲ್ಲೇ ಡಿಪಿಆರ್‌ ಆಗಲಿದೆ. ಅದೇ ರೀತಿ ಪದವು ಪಶ್ಚಿಮ ವಾರ್ಡ್‌ನ ಪೊಲೀಸ್‌ ಕ್ವಾಟ್ರìಸ್‌ ಬಳಿಯ ಕೆಬಿಎಚ್‌ ಪಾರ್ಕ್‌ ಅಭಿವೃದ್ಧಿಯಾಗಲಿದ್ದು, ಆವರಣಗೋಡೆ, ವಾಕಿಂಗ್‌ ಟ್ರಾಕ್‌ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಅದೇರೀತಿ, ಉಳಿದ ಕಡೆಗಳಲ್ಲಿಯೂ ಪಾರ್ಕ್‌ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದೆ.

 

ಪಾರ್ಕ್‌ಗಳ ಅಭಿವೃದ್ಧಿಗೆ ಯೋಜಿಸಲಾದ ಅನುದಾನ :

ಪಾರ್ಕ್‌ :                                        ಅಂದಾಜು ಮೊತ್ತ :

ಬಂಗ್ರಕೂಳೂರು ವಾರ್ಡ್‌                 63 ಲಕ್ಷ ರೂ.

ಕಂಬ್ಳ ವಾರ್ಡ್‌                               15 ಲಕ್ಷ ರೂ.

ಮಂಗಳಾನಗರ, ಜೆಪ್ಪು ಪಾರ್ಕ್‌        30 ಲಕ್ಷರೂ.

ಪದವು (ಪಶ್ಚಿಮ) ವಾರ್ಡ್‌              18 ಲಕ್ಷ ರೂ.

ಕದ್ರಿ (ಉತ್ತರ) ವಾರ್ಡ್‌                  10.30 ಲಕ್ಷ ರೂ.

ಮೇಯರ್‌ ಬಂಗ್ಲೆ ಬಳಿ ಪಾರ್ಕ್‌          20 ಲಕ್ಷರೂ.

ಒಟ್ಟು    1,56,30,000 ಕೋಟಿ

 

ನಗರದಲ್ಲಿ ಉದ್ಯಾನವನ ಮತ್ತು ಹಸುರು ಜಾಗ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಪ್ರಾಶಸ್ತÂ ನೀಡುತ್ತಿದೆ. ನಗರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಅದರಂತೆಯೇ ಹಸುರು ಉಳಿಸುವ ಕಾರ್ಯ ಕೂಡ ಸಾಗಬೇಕು. ಈ ಉದ್ದೇಶದಿಂದ ಮೊದಲ ಹಂತದಲ್ಲಿ ಪಾರ್ಕ್‌ ಅಭಿವೃದ್ಧಿ ಮಾಡುತ್ತಿದ್ದೇವೆ. ಅಭಿವೃದ್ಧಿಯ ಜತೆಗೆ ನಿರ್ವಹಣೆ ಕಡೆಗೂ ಗಮನ ನೀಡಲಾಗುತ್ತದೆ. -ಅಕ್ಷಯ್‌ ಶ್ರೀಧರ್‌,ಮನಪಾ ಆಯುಕ್ತ

 

 

-ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌

ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mannagudda: ಗುಜರಿ ಕಾರುಗಳ ಪಾರ್ಕಿಂಗ್‌; ಸಾರ್ವಜನಿಕರಿಗೆ ಸಮಸ್ಯೆ

9(1

Mangaluru: ರಸ್ತೆ, ಸರ್ಕಲ್‌ಗೆ ಸ್ಥಳೀಯ ನಾಮಕರಣ ಪ್ರಸ್ತಾವ

6

Mangaluru; ಕೆಲರೈ- ವಾಮಂಜೂರು ಸಂಪರ್ಕ ರಸ್ತೆ ಅವ್ಯವಸ್ಥೆ

5

Mangaluru: ವೆನ್ಲಾಕ್‌ನಲ್ಲಿ  ದೊರೆಯಲಿದೆ ಕಿಮೋಥೆರಪಿ

4(1

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.