ಮಾಸ್ಕ್ ಧರಿಸದವರಿಂದ ದ.ಕ. ಜಿಲ್ಲೆಯಲ್ಲಿ ಒಟ್ಟು 20 ಲಕ್ಷ ರೂ. ದಂಡ ವಸೂಲಿ!

Team Udayavani, Jan 5, 2021, 4:47 AM IST

ಮಾಸ್ಕ್ ಧರಿಸದವರಿಂದ ದ.ಕ. ಜಿಲ್ಲೆಯಲ್ಲಿ ಒಟ್ಟು 20 ಲಕ್ಷ ರೂ. ದಂಡ ವಸೂಲಿ!

ಮಹಾನಗರ: ಕೋವಿಡ್ ಹರಡದಂತೆ ಮುಂಜಾಗ್ರತೆ ವಹಿಸುವಲ್ಲಿ ಮಾಸ್ಕ್ ಧರಿಸುವಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಜನ ಮಾತ್ರ ಇನ್ನೂ ಜಾಗೃತಿಗೊಂಡಂತೆ ಕಂಡು ಬರುತ್ತಿಲ್ಲ. ನಗರದಲ್ಲಿ ಮಾಸ್ಕ್ ಧರಿಸದೆಯೇ ತಿರುಗಾಡುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಪೂರಕವೆಂಬಂತೆ ಮಾಸ್ಕ್ ಧರಿಸದವರಿಗೆ ಒಂಬತ್ತು ತಿಂಗಳುಗಳ ಅವಧಿಯಲ್ಲಿ ವಿಧಿಸಲಾದ ದಂಡದ ಮೊತ್ತ 20 ಲಕ್ಷ ರೂ. ದಾಟಿದೆ.

ಕೊರೊನಾ ನಿಯಂತ್ರಣಕ್ಕೆ ಬರಬೇಕಾದರೆ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿ ಸರಕಾರ ಆದೇಶ ಹೊರಡಿಸಿದೆ. ಅದರಂತೆ, ದ್ವಿಚಕ್ರ ವಾಹನಗಳಲ್ಲಿ ತೆರಳುವಾಗ, ನಡೆದಾಡುವಾಗ ಮಾಸ್ಕ್ ಧರಿಸದಿದ್ದರೆ ಅಂತಹವರಿಗ 200 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ. ದ.ಕ. ಜಿಲ್ಲೆಯೊಂದರಲ್ಲೇ ಈವರೆಗೆ 19,543 ಮಂದಿಗೆ ದಂಡ ವಿಧಿಸಲಾಗಿದ್ದು, ಒಟ್ಟು 20,73,928 ರೂ. ದಂಡ ವಿಧಿಸಲಾಗಿದೆ.

ಜ. 2: 498 ಮಂದಿ ಉಲ್ಲಂಘನೆ
ಹೊಸ ವರ್ಷ ಕಳೆದ ಮರುದಿನದಂದು ಅಂದರೆ ಜ. 2ರಂದು ಬರೋಬ್ಬರಿ 498 ಮಂದಿ ಕೊರೊನಾ ನಿಯಮಾವಳಿ ಉಲ್ಲಂಘನೆ ಮಾಡಿರುವುದು ಗಮನಾರ್ಹ. ಇಷ್ಟೂ ಮಂದಿ ಮಾಸ್ಕ್ ಧರಿಸದೇ ಸಂಚರಿಸಿದ ಕಾರಣಕ್ಕಾಗಿ ಒಟ್ಟು 49,800 ರೂ. ದಂಡ ವಿಧಿಸಿಕೊಂಡಿದ್ದಾರೆ.

ಮಾಸ್ಕ್ ಧರಿಸಿ ನಿಮ್ಮನ್ನು ರಕ್ಷಿಸಿಕೊಳ್ಳಿ
ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಕಡಿಮೆಯಾಗುತ್ತಿದ್ದರೂ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕಾಗಿ ನಿಯಮಾವಳಿಗಳ ನಿರ್ಲಕ್ಷ್ಯ ಸಲ್ಲದು. ಮಾಸ್ಕ್ ಧರಿಸದೆಯೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವುದು, ಸನಿಹ ನಿಂತು ಮಾತನಾಡುವುದು ಮುಂತಾದವುಗಳು ಅಪಾಯವನ್ನು ಆಹ್ವಾನಿಸಿದಂತೆ. ಹಾಗಾಗಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿ ನಡೆಯಬೇಕು ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಸ್ವಯಂ ಎಚ್ಚರಿಕೆ ಅಗತ್ಯ
ಮಾಸ್ಕ್ ಧರಿಸುವ ಅಭ್ಯಾಸ ನಗರದ ಜನತೆಯಲ್ಲಿ ಕಡಿಮೆಯಾಗುತ್ತಿದೆ. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲವಾದ್ದರಿಂದ ಮಾಸ್ಕ್ ಧರಿಸಿಯೇ ತೆರಳಬೇಕು. ದಂಡ ವಿಧಿಸುವುದೇ ನಮ್ಮ ಉದ್ದೇಶವಲ್ಲ. ಆದರೆ ಜನ ಎಚ್ಚರಿಕೆ ವಹಿಸಬೇಕೆಂಬ ಕಾರಣಕ್ಕಾಗಿ ದಂಡ ವಿಧಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಆಗಾಗ ಕೈ ತೊಳೆದು ಕೊಳ್ಳುವುದನ್ನು ಮರೆಯದಿರಿ.
-ಡಾ| ರಾಮಚಂದ್ರ ಬಾಯರಿ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಟಾಪ್ ನ್ಯೂಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

Bengaluru: ಹರಳು ಕೂರಿಸುವುದಾಗಿ 1 ಕೋಟಿ ರೂ. ಮೌಲ್ಯದ ಚಿನ್ನ ಕದ್ದ!

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

BBK11: ಯಾವ್ ಸೀಮೆ ಕ್ಯಾಪ್ಟನ್ ರೀ ನೀವು.. ಹಂಸಾ ಮೇಲೆ ನರಕ ವಾಸಿಗಳ ಕೂಗಾಟ

pramod madhwaraj

Pramod Madhwaraj;ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಆಸ್ಪತ್ರೆಗೆ ದಾಖಲು

1-koppala

Koppala: ಉದ್ಯಮಿ ಅರ್ಜುನ್ ಸಾ ಕಾಟ್ವಾ ಶವ ಪತ್ತೆ

1-aaaaa

Tunga River; ಬಂಡೆ ಮೇಲೆ ಸಿಲುಕಿ ಪರದಾಡುತ್ತಿದ್ದ ವ್ಯಕ್ತಿ ರಕ್ಷಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru University: 9ಕ್ಕೂ ಅಧಿಕ ಪಿ.ಜಿ. ಕೋರ್ಸ್‌ಗೆ ವಿದ್ಯಾರ್ಥಿಗಳಿಲ್ಲ !

Mangaluru University: 9ಕ್ಕೂ ಅಧಿಕ ಪಿ.ಜಿ. ಕೋರ್ಸ್‌ಗೆ ವಿದ್ಯಾರ್ಥಿಗಳಿಲ್ಲ !

Mangaluru: “ಐ ವಾಚ್‌’ ಗಿಫ್ಟ್‌ ಆಸೆಗೆ 1,10,028 ರೂ. ಕಳೆದುಕೊಂಡರು

Mangaluru: “ಐ ವಾಚ್‌’ ಗಿಫ್ಟ್‌ ಆಸೆಗೆ 1,10,028 ರೂ. ಕಳೆದುಕೊಂಡರು

Gangolli

Mangaluru: ಉಸಿರಾಟ ಸಮಸ್ಯೆ; ಎಂಟು ತಿಂಗಳ ಗರ್ಭಿಣಿ ಸಾವು

Mangaluru: ಹುಲಿ ವೇಷದ ಅಬ್ಬರ ಸವಿಯಲಿರುವ ತಾರೆಯರು

Mangaluru: ಹುಲಿ ವೇಷದ ಅಬ್ಬರ ಸವಿಯಲಿರುವ ತಾರೆಯರು

Election Result: ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ: ಬಿಜೆಪಿ ಸಂಭ್ರಮ

Election Result: ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ: ಬಿಜೆಪಿ ಸಂಭ್ರಮ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

Repo Rate: ಸತತ 10ನೇ ಬಾರಿಯೂ ರೆಪೋ ದರ ಯಥಾಸ್ಥಿತಿ: RBI ಗವರ್ನರ್‌ ಶಕ್ತಿಕಾಂತ್‌ ದಾಸ್

1-jin

Haryana; ಬಿಜೆಪಿಗೆ ಸೆಡ್ದು ಹೊಡೆದು ಪಕ್ಷೇತರರಾಗಿ ಗೆದ್ದ ದೇಶದ ಶ್ರೀಮಂತ ಮಹಿಳೆ !

3-ankola

Ankola:ಸಂಭವನೀಯ ರೈಲು ಅಪಘಾತ ತಪ್ಪಿಸಿದ ಟ್ರ್ಯಾಕ್‌ಮ್ಯಾನ್ ಗೆ ರೈಲ್ವೆಅಧಿಕಾರಿಗಳಿಂದ ಸನ್ಮಾನ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

High Court: ವಕೀಲರ ವಾಕ್‌ ಸ್ವಾತಂತ್ರ್ಯ ನಿರ್ಬಂಧಿಸುವ ಅಧಿಕಾರ ಬಾರ್‌ ಕೌನ್ಸಿಲ್‌ಗೆ ಇಲ್ಲ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Arrested: ತ.ನಾಡಿನಿಂದ ಬಂದು ಲ್ಯಾಪ್‌ಟಾಪ್‌ ಕಳ್ಳತನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.