ಹಲವು ವೈಶಿಷ್ಟ್ಯಗಳನ್ನು ಹೊತ್ತು ಬರಲಿದೆ ಸ್ಯಾಮ್ಸಂಗ್ Galaxy S21: ಹೇಗಿದೆ ಕಾರ್ಯಕ್ಷಮತೆ ?
Team Udayavani, Jan 5, 2021, 8:40 PM IST
ನವದೆಹಲಿ: ಸ್ಮಾರ್ಟ್ ಫೋನ್ ದೈತ್ಯ ಸ್ಯಾಮ್ ಸಂಗ್ ನ ನೂತನ ಗ್ಯಾಲಕ್ಸಿ S21 ಸರಣಿಯ ಮೊಬೈಲ್ ಗಳು ಜನವರಿ 14ರಂದು ಲೋಕಾರ್ಪಣೆಗೊಳ್ಳಲಿದೆ. ಇದು ಮುಂಬರುವ ಐಫೋನ್ 13ನ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲ್ಪಟ್ಟಿದ್ದು, ಗ್ಯಾಲಕ್ಷಿ S21 ಜತೆಗೆ, ಗ್ಯಾಲಕ್ಸಿ S21 ಪ್ಲಸ್, ಗ್ಯಾಲಕ್ಷಿ S21 ಅಲ್ಟ್ರಾ ಸ್ಮಾರ್ಟ್ ಫೋನ್ ಗಳು ಕೂಡ ಬಿಡುಗಡೆಗೊಳ್ಳಲಿವೆ ಎಂದು ಅಂದಾಜಿಸಲಾಗಿದೆ.
ಇದೀಗ ಸ್ಯಾಮ್ ಸಂಗ್ ಗ್ಯಾಲಕ್ಸಿ S21 ಸ್ಮಾರ್ಟ್ ಫೋನ್ ಸರಣಿಯ ಕೆಲವೊಂದು ಫೀಚರ್ ಗಳು ಸೋರಿಕೆಯಾಗಿದ್ದು, ಕಾರ್ಯಕ್ಷಮತೆ, ಕ್ಯಾಮರಾ ವಿಭಾಗ, ವಿನ್ಯಾಸ ಎಲ್ಲವೂ ಆಕರ್ಷಕವಾಗಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಗ್ಯಾಲಕ್ಸಿ S21 6.2 ಇಂಚಿನ ಡೈನಾಮಿಕ್ ಅಮೋಲ್ಡ್ 2x ಡಿಸ್ ಪ್ಲೇಯನ್ನು ಹೊಂದಿದೆ. S21ಪ್ಲಸ್ ಸ್ಮಾರ್ಟ್ ಫೋನ್ 6.7 ಇಂಚಿನ ಡಿಸ್ ಪ್ಲೇ ಹಾಗೂ 120Hz ರಿಫ್ರೆಶ್ ರೇಟ್ ಒಳಗೊಂಡಿದೆ.
ಈ ಮೊಬೈಲ್ ಗಳು 8GB RAM ಮತ್ತು 256 GB ಸ್ಟೋರೇಜ್ ಸಾಮರ್ಥ್ಯವಿರುವ ಹೊಸ ಎಕ್ಸಿನೋಸ್ ಪ್ರೊಸೆಸ್ಸರ್ ಹೊಂದಿದೆ. ಇದರ ಜೊತೆಗೆ ಆ್ಯಂಡ್ರಾಯ್ಡ್ 11 UI 3.1 ಬೆಂಬಲವನ್ನು ಪಡೆದಿದೆ.
ಗ್ಯಾಲಕ್ಸಿ S21 4000 mAh ಬ್ಯಾಟರಿ ಹಾಗೂ ಗ್ಯಾಲಕ್ಸಿ S21 ಪ್ಲಸ್ 4,800 mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. ವರದಿಗಳ ಪ್ರಕಾರ ಈ ಫೋನ್ 25W ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.
ಕಲರ್: 1) ಗ್ಯಾಲಕ್ಸಿ S21 ಸ್ಮಾರ್ಟ್ ಫೋನ್ ಬೂದು, ಬಿಳಿ, ಪಿಂಕ್ ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿದೆ. 2) ಗ್ಯಾಲಕ್ಸಿ S21ಪ್ಲಸ್ ಸ್ಮಾರ್ಟ್ ಫೋನ್ ಸಿಲ್ವರ್, ಬ್ಲ್ಯಾಕ್, ಪರ್ಪಲ್ ಕಲರ್ ಅನ್ನು ಹೊಂದಿದೆ.
3) ಸ್ಯಾಮ್ ಸಂಗ್ ಸರಣಿಗಳಲ್ಲೇ ದುಬಾರಿಯಾದ ಗ್ಯಾಲಕ್ಸಿ S21 ಅಲ್ಟ್ರಾ, ಸಿಲ್ವರ್ ಮತ್ತು ಕಪ್ಪು ಬಣ್ಣಗಳಲ್ಲಿ ಗ್ರಾಹಕರ ಕೈಸೇರಲಿದೆ.
ಕ್ಯಾಮರಾ ವಿಭಾಗ: ಗ್ಯಾಲಕ್ಸಿ S21 ಮತ್ತು ಗ್ಯಾಲಕ್ಸಿ S21 ಪ್ಲಸ್ ಮೊಬೈಲ್ ಗಳಲ್ಲಿ 12 ಎಂಪಿ ಅಲ್ಟ್ರಾ ವೈಡ್ ಕ್ಯಾಮರಾ, 12 ಎಂಪಿ ಪ್ರಾಥಮಿಕ ಕ್ಯಾಮರಾ, 64 ಎಂಪಿ ಟೆಲಿಫೋಟೋ ಲೆನ್ಸ್, ಹಾಗೂ ಸೆಲ್ಫಿಗಾಗಿ 10 ಎಂಪಿ ಕ್ಯಾಮರಾ ಅಳವಡಿಸಲಾಗಿದೆ.
ಗ್ಯಾಲಕ್ಸಿ S21 ಅಲ್ಟ್ರಾ ಮೊಬೈಲ್ ನಲ್ಲಿ ಟೆಲಿಫೋಟೋ ಲೆನ್ಸ್ ನೊಂದಿಗೆ ಕ್ವಾಡ್ ಕ್ಯಾಮರಾ ಸೆಟಪ್, ಮಾತ್ರವಲ್ಲದೆ 108 ಎಂಪಿ ಪ್ರಾಥಮಿಕ ಕ್ಯಾಮರಾ, 12 ಎಂಪಿ ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್, ಮುಂಭಾಗದಲ್ಲಿ 40 ಎಂಪಿ ಕ್ಯಾಮರಾ ಹೊಂದಿದೆ. ಇದರ ಜೊತೆಗೆ ಲೇಸರ್ ಆಟೋ ಫೋಕಸ್ ಸೌಲಭ್ಯವನ್ನು ಪಡೆದಿರುವುದು ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.