ಮಾನಸಿಕ ಸುಭದ್ರತೆಯಲ್ಲಿ ಸಂವಹನದ ಪಾತ್ರ


Team Udayavani, Jan 6, 2021, 5:45 AM IST

Communication

ಅಭಿವ್ಯಕ್ತಿಸುವಿಕೆ ಮಾನಸಿಕ ಸುಭದ್ರತೆ ಯಲ್ಲಿನ ಸುಂದರ ಹೂರಣ. ಅಭಿವ್ಯಕ್ತಿ ಸುವಿಕೆಯೊಂದಿಗೆ ಜವಾಬ್ದಾರಿ ಸಮ್ಮಿಳಿತ ವಾಗಿರಬೇಕು. ಮಾನಸಿಕ ಭದ್ರತೆ ಹಾಗೂ ಜವಾಬ್ದಾರಿ ಸಮಾನವಾಗಿದ್ದರೆ ಉತ್ತಮ ಫ‌ಲಿತಾಂಶ ಕೊಡಬಲ್ಲುದು.

ಘಟನೆ 1: ಇತ್ತೀಚೆಗೆ ತೃಪ್ತಿ ಹೊಸ ವಿಭಾಗಕ್ಕೆ ವರ್ಗಾವಣೆಯಾಗಿದ್ದಳು. ಮೊದಲು ಕೆಲಸ ಮಾಡು ತ್ತಿರುವ ವಿಭಾಗದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಾ ಳೆಂದು ಹೆಸರು ಪಡೆದುಕೊಂಡವಳು. ಹೊಸ ವಿಭಾಗಕ್ಕೆ ವರ್ಗಾವಣೆಯಾದ ಕೆಲವೇ ದಿನಗಳಲ್ಲಿ ಟೀಮ್‌ ಮೀಟಿಂಗ್‌ ಏರ್ಪಡಿಸಲಾಗಿತ್ತು. ಆ ಮೀಟಿಂಗಿನಲ್ಲಿ ಹೊಸತೊಂದು ಪ್ರಾಜೆಕ್ಟನ್ನು ಕಾರ್ಯ ಗತ ಮಾಡುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು. ತೃಪ್ತಿಯು ಕೂಡ ಮೀಟಿಂಗಿನಲ್ಲಿ ಭಾಗವಹಿಸಿದ್ದಳು.

ತೃಪ್ತಿ ಸಹಜವಾಗಿ ಉತ್ಸಾಹಿ ಹಾಗೂ ಕೆಲಸದಲ್ಲಿ ಹೊಸತನವನ್ನು ಬಯಸುವಂತಹ ಉದ್ಯೋಗಿ. ಈ ಪ್ರಾಜೆಕ್ಟನ್ನು ಕಾರ್ಯ ಗತ ಮಾಡಲು ತೃಪ್ತಿ ವಿಭಿನ್ನವಾದ ಕಾರ್ಯವಿಧಾನವನ್ನು ಹಂಚಿಕೊಳ್ಳುತ್ತಾಳೆ. ಆದರೆ ಅವಳ ಮ್ಯಾನೇಜರ್‌ “ತೃಪ್ತಿ ನೀನು ಈ ವಿಭಾಗಕ್ಕೆ ಹೊಸಬಳು, ಇದು ನಿನ್ನ ಮೊದಲಿನ ವಿಭಾಗದಂತೆ ಅಲ್ಲ’ ಎಂದು ಏರುಧ್ವನಿಯಲ್ಲಿ ಹೇಳಿದಾಗ ಸಹೋದ್ಯೋಗಿಗಳ ಮುಖದಲ್ಲಿ ವ್ಯಂಗ್ಯ ನಗುವನ್ನು ತೃಪ್ತಿ ಗಮನಿಸುತ್ತಾಳೆ. ತೃಪ್ತಿಗೆ ಪದೇ ಪದೆ ಟೀಮ್‌ ಮೀಟಿಂಗ್‌ನಲ್ಲಿ ಈ ತೆರನಾದ ಅನುಭವಗಳು ಮರುಕಳಿಸಿದವು. ಅನಂತರದ ದಿನಗಳಲ್ಲಿ ಅವಳು ಅಭಿವ್ಯಕ್ತಿಸುವುದನ್ನು ಕಡಿಮೆ ಮಾಡಿದಳು ಮತ್ತು ಅವಳ ಕಾರ್ಯಕ್ಷಮತೆ ಮೊದಲಿನ ತರಹ ಇರಲಿಲ್ಲ .

ಘಟನೆ 2: ಧನ್ಯಾ ಪಿಯುಸಿಯಲ್ಲಿ ಶೇ.80ರಷ್ಟು ಅಂಕಗಳನ್ನು ಗಳಿಸಿದ್ದಳು. ಮನಃಶಾಸ್ತ್ರದಲ್ಲಿ ಉನ್ನತ ಶಿಕ್ಷಣವನ್ನು ಮಾಡಬೇಕೆಂದುಕೊಂಡಿದ್ದಳು. ಆದರೆ ಅವಳ ಹೆತ್ತವರ ಇಚ್ಛೆಯಂತೆ ಎಂಜಿನಿಯರಿಂಗ್‌ ಸೇರಿಕೊಂಡಳು. ತನ್ನ ಇಚ್ಛೆಯ ಬಗ್ಗೆ ಎಂದೂ ಹೆತ್ತವರಲ್ಲಿ ಹೇಳಿಕೊಂಡಿರಲಿಲ್ಲ .

ಈ ಮೇಲಿನ ಎರಡೂ ಘಟನೆಗಳನ್ನು ಅವಲೋಕಿ ಸಿದಾಗ ಮೇಲ್ನೋಟದಲ್ಲಿ ತೃಪ್ತಿಯು ಆತ್ಮವಿಶ್ವಾಸವನ್ನು ಕಳೆದುಕೊಂಡವಳಂತೆಯೂ ಮತ್ತು ಧನ್ಯಾ ಹೆತ್ತವ ರಿಗೆ ಹೆದರಿಕೊಂಡವಳಂತೆಯೂ ಕಾಣಿಸುತ್ತದೆ. ನಾವು ತೃಪ್ತಿಯ ಸನ್ನಿವೇಶವನ್ನು ತೆಗೆದುಕೊಂಡರೆ ಅವಳು ತನ್ನ ಅನಿಸಿಕೆಯನ್ನು ಹೇಳಲು ಪ್ರಯತ್ನಿಸಿದಾಗ ಅವಳ ಮ್ಯಾನೇಜರ್‌ ಮತ್ತು ಸಹೋದ್ಯೋಗಿಗಳು ಅಭಿವ್ಯಕ್ತಿಸಲು ಪ್ರೋತ್ಸಾಹಿಸಲಿಲ್ಲ. ತನ್ನ ಅನಿಸಿಕೆಗಳನ್ನು ಮತ್ತು ಯೋಚನೆಗಳನ್ನು ತಂಡ ಸ್ವೀಕರಿಸುವುದಿಲ್ಲ ಮತ್ತು ನಾನು ಯಥಾಸ್ಥಿತಿಯನ್ನು ಪ್ರಶ್ನಿಸದೆ ಸುಮ್ಮ ನಿದ್ದರೆ ತನ್ನ ಆತ್ಮಗೌರವಕ್ಕೆ ಪೆಟ್ಟು ಬೀಳುವುದಿಲ್ಲ ಹಾಗೂ ಅವಹೇಳನದಿಂದ ದೂರವಿರಬಹುದೆನ್ನುವ ಭಾವ ತೃಪ್ತಿಯಲ್ಲಿ ಬೆಳೆಯಲಾರಂಭಿಸಿತು. ಗುಂಪಿ ನಲ್ಲಿ ಒಂದಾಗಿ ಇರಬೇಕೆನ್ನುವ ಪ್ರಯತ್ನದಲ್ಲಿ ತೃಪ್ತಿಯ ಕಾರ್ಯವೈಖರಿಯ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ಆಕೆ ಸೃಜನಶೀಲ ವ್ಯಕ್ತಿ, ಕೆಲಸದಲ್ಲಿ ವಿಭಿನ್ನತೆಯನ್ನು ಪ್ರಯತ್ನಿಸುವಂಥವಳು. ಆದರೆ ಹೊಸ ವಿಭಾಗದಲ್ಲಿ ಅವಳಿಗೆ ಅಂತಹ ಪರಿಸರ ಸಿಗಲಿಲ್ಲ. ಇದರ ಪರಿಣಾಮ ಮೊದಲಿನ ತರಹ ಅವಳಿಗೆ ಉತ್ಸಾಹವಿರಲಿಲ್ಲ. ಸಹಜ ವಾಗಿಯೇ ಇದು ಅವಳ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿತು. ಎಚ್‌ಆರ್‌ ಅವಳ ಇಳಿಮುಖವಾದ ಕಾರ್ಯಕ್ಷಮತೆ ಬಗ್ಗೆ ಸಮಾ ಲೋಚನೆ ಮಾಡಿದಾಗ ಹೊಸ ವಿಭಾಗದಲ್ಲಿ ಆಕೆಗೆ ಮಾನಸಿಕ ಸುಭದ್ರತೆ ಸಿಗದೇ ಇರುವುದು ಕಂಡು ಬಂತು. ಇನ್ನು ಧನ್ಯಾಳ ವಿಚಾರದಲ್ಲೂ ಇದೇ ಸಮಸ್ಯೆ. ತನ್ನ ಇಚ್ಛೆಗೆ ವಿರುದ್ಧವಾದ ವಿಷಯವನ್ನು ಉನ್ನತ ವ್ಯಾಸಂಗಕ್ಕೆ ಆಯ್ದುಕೊಂಡಿದ್ದರಿಂದ ಆಕೆಗೆ ಅಧ್ಯಯನದಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲ.

ಕಾರ್ಪೋರೆಟ್‌ ಲೋಕದಲ್ಲಿ ಇತ್ತೀಚೆಗೆ ಬಹಳ ಚರ್ಚೆಯಲ್ಲಿರುವ ವಿಷಯ ಮಾನಸಿಕ ಸುಭದ್ರತೆ (ಸೈಕಾಲಾಜಿಕಲ್‌ ಸೇಫ್ಟಿ). ಮನಃಶಾಸ್ತ್ರದಲ್ಲಿ ಇದೇನು ಹೊಸ ವಿಷಯವಲ್ಲ. 1960ರಲ್ಲಿ ಹಾರ್ವರ್ಡ್‌ ಯುನಿವರ್ಸಿಟಿ ಮೊದಲ ಬಾರಿಗೆ ಈ ವಿಷಯವನ್ನು ಪರಿಚಯಿಸಿತ್ತು. 1990ರಿಂದ ಈವರೆಗೂ “ನಡವಳಿಕೆ ನಿರ್ವಹಣೆ’ ವಿಷಯದ ಮೇಲೆ ಅನ್ವೇಷಣೆ ನಡೆಯುತ್ತಲೇ ಇದೆ. ಮಾನಸಿಕ ಸುಭದ್ರತೆ ಅಂದರೆ, ವ್ಯಕ್ತಿಯೋರ್ವ ಕೆಲಸದ ಸ್ಥಳದಲ್ಲಿ ಋಣಾತ್ಮಕ ಪರಿಣಾಮಗಳ ಭಯವಿಲ್ಲದೆ ತನ್ನ ವ್ಯಕ್ತಿತ್ವವನ್ನು ಪ್ರಸ್ತುತ ಪಡಿಸುವುದು ಮತ್ತು ಪರಿಸ್ಥಿತಿಯನ್ನು ಎದುರಿಸುವುದು. ಸಾಮಾನ್ಯ ಭಾಷೆಯಲ್ಲಿ ಹೇಳು ವುದಾದರೆ ಹಿಂಜರಿಕೆ ಇಲ್ಲದೆ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ಮತ್ತು ಕೆಲಸದಲ್ಲಿ ರಿಸ್ಕ್ ತೆಗೆದುಕೊಳ್ಳುವಾಗ ಋಣಾತ್ಮಕ ಪರಿಣಾಮಗಳ ಬಗ್ಗೆ ಹಾಗೂ ಸುತ್ತಮುತ್ತಲಿನವರ ತಿರಸ್ಕಾರದ ಬಗ್ಗೆ ಭಯ ಹೊಂದದೇ ಇರುವುದು.

ಮಾನಸಿಕ ಸುಭದ್ರತೆಯ ಮನಃಸ್ಥಿತಿ ಸೃಷ್ಟಿಸುವಲ್ಲಿ ಸಂವಹನ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ವ್ಯಕ್ತಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಪರಿಸ್ಥಿತಿಗೆ ವ್ಯತಿರಿಕ್ತವಾಗಿದ್ದರೂ ಅದನ್ನು ಗೌರವ ದಿಂದ ಸ್ವೀಕರಿಸುವುದು ಹಾಗೂ ಅದರ ಅನು ಕೂಲ-ಅನನುಕೂಲದ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡುವುದು ಅತ್ಯವಶ್ಯ. ಇಂತಹ ವಾತಾವ ರಣದಲ್ಲಿ ಕಲಿಯುವ ಅವಕಾಶ, ಕೆಲಸದಲ್ಲಿ ಹೊಸತನದ ಪ್ರಯತ್ನ, ಯಥಾಸ್ಥಿತಿಯನ್ನು ಪ್ರಶ್ನಿಸುವ ಮನೋಭಾವ ಹೆಚ್ಚುತ್ತದೆ. ಮಾನಸಿಕ ಸುಭದ್ರತೆಯು ವೈಯಕ್ತಿಕ ಮತ್ತು ಗುಂಪಿನ ಕಾರ್ಯಕ್ಷಮತೆಯ ವೃದ್ಧಿಗೆ ಹಾಗೂ ಸೃಜನಶೀಲ ಕೆಲಸಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿಕೊಡುತ್ತದೆ.

ಎಷ್ಟೋ ಬಾರಿ ಮಕ್ಕಳು ತಮ್ಮ ಇಷ್ಟವಾದ ಹವ್ಯಾಸ ಅಥವಾ ಕ್ಷೇತ್ರವನ್ನು ಪೋಷಕರ ಹತ್ತಿರ ಹೇಳಲು ಹಿಂಜರಿಯುವುದರಿಂದ ಪ್ರತಿಭೆ ಅರಳುವ ಮೊದಲೇ ಕಮರಿ ಹೋಗುತ್ತದೆ. ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯದೇ ಫೇಲಾದರೆ ಪೋಷಕರು ನನ್ನನ್ನು ಹೇಗೆ ಸ್ವೀಕರಿಸುತ್ತಾರೋ ಅನ್ನುವ ಭಯ ಮಕ್ಕಳನ್ನು ಕಾಡುತ್ತಿರುತ್ತದೆ. ನದಿಯ ಹರಿವಿನ ನೈಜ ಪಥವನ್ನು ಕೃತಕವಾಗಿ ಬದಲಿಸಿದಾಗ ನೀರಿನ ಹರಿವು ತನ್ನ ನೈಜತೆಯನ್ನು ಹೇಗೆ ಕಳೆದುಕೊಳ್ಳುತ್ತದೆಯೋ ಹಾಗೆಯೇ ಪೋಷಕರ ಒತ್ತಡ ಅಥವಾ ಹೇರಿ ಕೆಯ ಮನೋಭಾವ ಮಕ್ಕಳ ನೈಜ ಪ್ರತಿಭೆ ಮೊಳಕೆಯೊಡೆಯದಂತೆ ಮಾಡಬಹುದು.

ವೈಯಕ್ತಿಕವಾಗಿರಲಿ ಅಥವಾ ವೃತ್ತಿಗೆ ಸಂಬಂಧ ಪಟ್ಟದ್ದೇ ಆಗಿರಲಿ ಜತೆಯಲ್ಲಿರುವವರ ವಿಭಿನ್ನತೆ ಯನ್ನು ಸಹಜವಾಗಿ ಸ್ವೀಕರಿಸಿ, ಅವರನ್ನು ಹಾಗೂ ಅವರ ಯೋಚನೆಯನ್ನು ಗೌರವಿಸಿ ತಪ್ಪೆನಿಸಿದರೆ ಅದನ್ನು ಅವರಿಗೆ ವಿವರಿಸಿ ಅವರ ಆತ್ಮಗೌರವಕ್ಕೆ ಪೆಟ್ಟಾಗದಂತೆ ಜಾಗ್ರತೆ ವಹಿಸಿ ಚರ್ಚೆ ನಡೆಸುವುದು ಅವಶ್ಯ. ಮಾನಸಿಕ ಭದ್ರತೆ ಇಲ್ಲದ ಸಂದರ್ಭದಲ್ಲಿ ಅದನ್ನು ಸಹಜವಾಗಿ ಸ್ವೀಕರಿಸಿ, ನಮ್ಮ ಆತ್ಮವಿಶ್ವಾಸ, ಕೆಲಸಕಾರ್ಯದ ಮೇಲೆ ಪ್ರಭಾವ ಬೀರದಂತೆ ಎಚ್ಚರಿಕೆ ವಹಿಸುವುದು ಅಗತ್ಯ.

ಶಂಕರಿ ಎಸ್‌. ಹೆಗ್ಡೆ , ಕುಂದಾಪುರ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.