ವಿವೇಚನೆಯ ಬೆಳಕಿನಲ್ಲಿ ಮುನ್ನಡೆಯೋಣ


Team Udayavani, Jan 6, 2021, 5:38 AM IST

ವಿವೇಚನೆಯ ಬೆಳಕಿನಲ್ಲಿ ಮುನ್ನಡೆಯೋಣ

ಲೋಕ ನೂರು ಹೇಳುತ್ತದೆ. ಎಲ್ಲ ವನ್ನೂ ಕೇಳಿಸಿಕೊಳ್ಳಬೇಕು. ಉಳಿಸ ಬೇಕಾದ್ದನ್ನು ಮಾತ್ರ ಉಳಿಸಿಕೊಳ್ಳಬೇಕು, ಬಾಕಿ ಉಳಿದ ಎಲ್ಲವನ್ನೂ ಇನ್ನೊಂದು ಕಿವಿ ಯಿಂದ ಆಚೆಗೆ ಬಿಟ್ಟು ಬಿಡಬೇಕು ಮತ್ತು ನಮ್ಮ ನಮ್ಮ ವಿವೇಚನೆಯ ಬೆಳಕಿನಲ್ಲಿ ಮುಂದುವರಿಯಬೇಕು. ಇದು ಸಕಾರಾತ್ಮಕ ಬದುಕಿನ ಅತ್ಯಂತ ದೊಡ್ಡ ತಣ್ತೀ , ಅತ್ಯಂತ ದೊಡ್ಡ ಸತ್ಯ.

ಅವರು ಹೇಳುವುದನ್ನು ಗಮನ ವಿಟ್ಟು ಕೇಳಬೇಕು. ನಿಜವಾಗಿಯೂ ಅದರಲ್ಲಿ ಹುರುಳಿದೆಯೇ ಎಂಬುದನ್ನು ವಿವೇಚನೆಯ ತಕ್ಕಡಿ ಯಲ್ಲಿ ತೂಗಬೇಕು. ಹೇಳುವವರು ನಿಜ ವಾಗಿ ನಮ್ಮ ಹಿತೈಷಿಗಳೇ ಆಗಿರಬಹುದು. ಅವರ ಸಲಹೆಯಲ್ಲಿ ತಥ್ಯವಿರ ಬಹುದು. ಅದನ್ನು ಮಾತ್ರ ಸ್ವೀಕರಿಸೋಣ. ಅದು ಬಿಟ್ಟು ಎಲ್ಲರೂ ಹೇಳಿದ ಎಲ್ಲವನ್ನೂ ಅನುಸರಿಸಿದರೆ ನಮ್ಮ ಬದುಕು ಮೂರಾಬಟ್ಟೆ ಯಾಗಬಲ್ಲುದು.

ಒಬ್ಟಾತ ಒಂದು ಹೊಸ ಅಂಗಡಿ ತೆರೆದ. ಅದು ಮೀನು ಮಾರಾಟ ಮಾಡುವ ಅಂಗಡಿ. ನಾಮ ಫ‌ಲಕದ ಕೆಳಗೆ “ಇಲ್ಲಿ ತಾಜಾ ಮೀನನ್ನು ಮಾರಾಟ ಮಾಡಲಾಗುತ್ತದೆ’ ಎಂದು ಬರೆದಿತ್ತು. ಅಂಗಡಿ ತೆರೆದ ಮರುದಿನ ಅಂಗಡಿ ಯಾತನ ಗೆಳೆಯನೊಬ್ಬ ಬಂದ. “ನಾಮಫ‌ಲಕದಲ್ಲಿ ಇದೆಂಥದ್ದು ಬರೆ ದದ್ದು ಮಾರಾಯಾ! ಇಲ್ಲಿ ಅಲ್ಲದೆ

ಅಲ್ಲಿ ಮೀನು ಮಾರಾಟ ಮಾಡುತ್ತೀಯಾ? ಇಲ್ಲಿ ಎಂಬುದು ಅಗತ್ಯವೇ ಇಲ್ಲ’ ಎಂದ. ಅಂಗಡಿಯಾತನಿಗೆ ಅದು ಸರಿ ಅನ್ನಿಸಿತು. “ಇಲ್ಲಿ’ ಎಂಬುದನ್ನು ಅಳಿಸಿದ. ಕೊಂಚ ಹೊತ್ತಿನ ಬಳಿಕ ಇನ್ನೊಬ್ಬ ಬಂದ. ಆತ, “ತಾಜಾ ಮೀನುಗಳನ್ನಲ್ಲದೆ ಹಳೆಯ ಮೀನು ಮಾರುತ್ತೀಯೇ ನಯ್ಯ! ತೆಗೆದು ಬಿಡು ಅದನ್ನು’ ಎಂದ. ಸರಿ, ಅದನ್ನೂ ಅಳಿಸಲಾಯಿತು.

ಮಧ್ಯಾಹ್ನದ ಹೊತ್ತಿಗೆ ಬಂದ ಇನ್ನೊಬ್ಬ “ಅಂಗಡಿಯಲ್ಲಿ ಮಾರಾಟ ವನ್ನಲ್ಲದೆ ಇನ್ನೇನು ಮಾಡುತ್ತಾರೆ! ಆ ಪದ ಬೇಕಾಗಿಲ್ಲ’ ಎಂದ. ಅಂಗಡಿಯಾತ ಅದನ್ನೂ ತೆಗೆದ. ಉಳಿದದ್ದು “ಮೀನು’ ಮತ್ತು “ಮಾಡಲಾಗುತ್ತದೆ’ ಮಾತ್ರ. ಸಂಜೆಯ ಹೊತ್ತಿಗೆ ಬಂದ ಇನ್ನೊಬ್ಬ ಗೆಳೆಯ “ಮಾಡಲಾಗುತ್ತದೆ’ ಎಂಬು ದಕ್ಕೆ ಹಿಂದುಮುಂದಿಲ್ಲ ಎಂದುದು ಸರಿ ಎನ್ನಿಸಿ ಅದನ್ನೂ ತೆಗೆ ಯಲಾಯಿತು. . ಮತ್ತೂಬ್ಬ “ಹರದಾರಿ ದೂರದಿಂದ ಇದು ಮೀನಿನಂಗಡಿಯೇ . ಎಂಬುದು ಗೊತ್ತಾಗು ತ್ತದೆ’ ಎಂದ. ಅದನ್ನೂ ಅಳಿಸಿ ಖಾಲಿ ಫ‌ಲಕ ಮಾತ್ರ ಉಳಿಯಿತು. ರಾತ್ರಿ ಅಂಗಡಿ ಮುಚ್ಚುವಷ್ಟರಲ್ಲಿ ಮತ್ತೂಬ್ಬ ಹೇಳಿದಂತೆ ಖಾಲಿ ಫ‌ಲಕ ಇರುವುದು ಸರಿಯಲ್ಲ ಅನ್ನಿಸಿದ್ದರಿಂದ ಅದನ್ನೂ ಕೆಳಗಿಳಿಸಲಾಯಿತು.

ಮರುದಿನ ಬೆಳಗ್ಗೆ ಮೀನು ಖರೀದಿ ಸಲಿಕ್ಕಾಗಿ ಬಂದ ಒಬ್ಬರು, “ಸ್ವಾಮೀ ಇಷ್ಟು ದೊಡ್ಡ ಅಂಗಡಿ ತೆರೆದಿದ್ದೀರಿ, ಒಂದು ನಾಮಫ‌ಲಕ ಬೇಡವೇ’ ಎಂದು ಕೇಳಿದರು. “ಇಲ್ಲಿ ತಾಜಾ ಮೀನು ಮಾರಾಟ ಮಾಡಲಾಗುತ್ತದೆ’ ಎಂದು ಬರೆದ ಫ‌ಲಕ ಮತ್ತೆ ಮೇಲೇರಿತು.

ಲೋಕದ ಮಾತುಗಳನ್ನು ಅನುಸರಿಸಿ ನಡೆದರೆ ನಮ್ಮ ಬದುಕು ಕೂಡ ಹೀಗೆಯೇ ಆಗಬಹುದು. ಒಬ್ಬರು ಒಂದು ಹೇಳುತ್ತಾರೆ, ಇನ್ನೊಬ್ಬರು ಅದರ ತದ್ವಿರುದ್ಧ ಸಲಹೆ ನೀಡುತ್ತಾರೆ. ಕತ್ತೆಯ ಜತೆಗೆ ಪೇಟೆಗೆ ಹೊರಟ ರೈತನ ಕಥೆ ನಿಮಗೂ ಗೊತ್ತಿರಬಹುದು. ನಮ್ಮ ಜೀವನ ಅವರು -ಇವರು ಹೇಳಿದಂತೆ ರೂಪುಗೊಳ್ಳಬೇಕಾದದ್ದಲ್ಲ. ಸಲಹೆ, ಟೀಕೆ-ಟಪ್ಪಣಿಗಳಲ್ಲಿ ಯಾವುದು ಯುಕ್ತವೋ, ಯಾವುದು ಸಾಧುವೋ ಅದನ್ನು ಮಾತ್ರ ಸ್ವೀಕರಿಸಬೇಕು, ಅನುಸರಿಸಬೇಕು. ಲೋಕ ಇರುವುದು ನಿಂದೆಗಾಗಿಯೇ ಎಂಬ ಎಚ್ಚರವಿರಲಿ.

ನಮ್ಮೊಳಗಿನ ವಿವೇಚನೆಯ ಬೆಳ ಕನ್ನು ಅನುಸರಿಸಿ ನಡೆಯೋಣ.

(ಸಾರ ಸಂಗ್ರಹ)

ಟಾಪ್ ನ್ಯೂಸ್

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನನ್ನೊಳಗಿನ “ನಾನು’ ಹೋದರೆ ಹೋದೇನು

ನನ್ನೊಳಗಿನ “ನಾನು’ ಹೋದರೆ ಹೋದೇನು

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

ಮಾನವ ಜನ್ಮವನ್ನು ವ್ಯರ್ಥಗೊಳಿಸದಿರೋಣ

achivement

ಗೆಲುವಿನ ದಾರಿ ದೂರ… ಪ್ರಯತ್ನ ನಿರಂತರವಾಗಿರಲಿ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ಆತ್ಮತೃಪ್ತಿ, ಹೃದಯ ಶ್ರೀಮಂತಿಕೆಯೇ ಶ್ರೇಷ್ಠ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

ನಾವೆಲ್ಲರೂ ಸ್ನೇಹಜೀವಿಗಳಾಗೋಣ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.