ಜ.13ಕ್ಕೆ ಲಸಿಕೆ ಸಂಕ್ರಾಂತಿ: ಆದ್ಯತಾ ವಲಯಕ್ಕೆ ವಿತರಣೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಘೋಷಣೆ


Team Udayavani, Jan 6, 2021, 6:40 AM IST

ಜ.13ಕ್ಕೆ ಲಸಿಕೆ ಸಂಕ್ರಾಂತಿ: ಆದ್ಯತಾ ವಲಯಕ್ಕೆ ವಿತರಣೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ಘೋಷಣೆ

ಹೊಸದಿಲ್ಲಿ: ಮಕರ ಸಂಕ್ರಮಣಕ್ಕೆ ಮುನ್ನವೇ ಲಸಿಕೆಯ “ಸಂಕ್ರಾಂತಿ’ ಆರಂಭವಾಗಲಿದೆ. ಕೊವ್ಯಾಕ್ಸಿನ್‌ ಮತ್ತು ಕೋವಿಶೀಲ್ಡ್‌ ಲಸಿಕೆಗಳ ನಿರ್ಬಂಧಿತ ತುರ್ತು ಬಳಕೆಗೆ ಅನುಮತಿ ಸಿಕ್ಕಿದ ಬೆನ್ನಲ್ಲೇ ಕೇಂದ್ರ ಸರಕಾರ ಈ ಸಿಹಿಸುದ್ದಿ ನೀಡಿದೆ.

ಜ.13ರಿಂದ ದೇಶಾ ದ್ಯಂತ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಮಂಗಳವಾರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಹೇಳಿದ್ದಾರೆ.
ಲಸಿಕೆ ವಿತರಣೆ ನಿರ್ವಹಣ ವ್ಯವಸ್ಥೆ ಯಲ್ಲಿ ಈಗಾಗಲೇ ಆರೋಗ್ಯಸೇವಾ ಮತ್ತು ಮುಂಚೂಣಿ ಕಾರ್ಯಕರ್ತರ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಇವರ್ಯಾರೂ ಹೊಸದಾಗಿ ಲಸಿಕೆಗೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಲಸಿಕೆ ಕಂಪೆನಿಗಳ ಸ್ಪಷ್ಟನೆ
ಸೀರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ ಮತ್ತು ಭಾರತ್‌ ಬಯೋಟೆಕ್‌ ಮಂಗಳವಾರ ಜಂಟಿ ಹೇಳಿಕೆ ನೀಡಿದ್ದು, ಲಸಿಕೆಯನ್ನು ಸುಸೂತ್ರವಾಗಿ ದೇಶಕ್ಕೆ ಮತ್ತು ಜಗತ್ತಿಗೆ ಹಂಚುವುದೇ ನಮ್ಮ ಗುರಿ ಎಂದಿವೆ.

ಲಸಿಕೆ ನಿಮ್ಮನ್ನು ಹೇಗೆ ತಲುಪುತ್ತದೆ?
01 . ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌, ಹೈದರಾಬಾದ್‌ನ ಭಾರತ್‌ ಬಯೋ ಟೆಕ್‌ನಲ್ಲಿ ಉತ್ಪಾದನೆ
02. ಮುಂಬಯಿ, ಚೆನ್ನೈ, ಕೋಲ್ಕತ್ತಾ, ಹರಿಯಾಣದ ಕರ್ನಾಲ್‌ನ ಸರಕಾರಿ ವೈದ್ಯಕೀಯ ಕೇಂದ್ರಗಳಿಗೆ ರವಾನೆ
03. ಅಲ್ಲಿಂದ 37 ರಾಜ್ಯ ಲಸಿಕೆ ಕೇಂದ್ರಗಳಿಗೆ ಪ್ರಯಾಣ
04. ರಾಜ್ಯ ಮಟ್ಟದ ಕೇಂದ್ರಗಳಿಂದ ಜಿಲ್ಲಾ ಲಸಿಕೆ ಕೇಂದ್ರಗಳಿಗೆ ಸಾಗಣೆ
05. ಜಿಲ್ಲಾ ಕೇಂದ್ರಗಳಿಂದ ಪ್ರಾ.ಆ. ಕೇಂದ್ರ/ ಕೋವಿಡ್‌ ಲಸಿಕೆ ಕೇಂದ್ರಕ್ಕೆ ರವಾನೆ

ಏನೇನು ಕ್ರಮಗಳು?
1- ಲಸಿಕೆ ಪಡೆಯುವವರು ಮತ್ತು ಲಸಿಕೆ ವಿತರಿಸುವ ಸಿಬಂದಿಗೆ 12 ಭಾಷೆಗಳಲ್ಲಿ ಎಸ್ಸೆಮ್ಮೆಸ್‌
2- ಪ್ರತೀ ಡೋಸ್‌ ನೀಡಿದ ಬಳಿಕ ಕ್ಯುಆರ್‌ ಕೋಡ್‌ ಆಧರಿತ ಲಸಿಕೆ ಪ್ರಮಾಣಪತ್ರ ವಿತರಣೆ
3- ಪ್ರಮಾಣಪತ್ರಗಳನ್ನು ಸಂಗ್ರಹಿಸಿಡಲು ಆ್ಯಪ್‌ ಡಿಜಿಲಾಕರ್‌ ಬಳಕೆ
4- ದುರ್ಬಳಕೆ ತಪ್ಪಿಸಲು ಆಧಾರ್‌ ದೃಢೀಕರಣ ಮತ್ತು ವಿಶಿಷ್ಟ ಆರೋಗ್ಯ ಐಡಿ ವ್ಯವಸ್ಥೆ
5- ಕೊವ್ಯಾಕ್ಸಿನ್‌, ಕೋವಿಶೀಲ್ಡ್‌ ಸುರಕ್ಷಿತವಾಗಿರಿಸಲು 29,000 ಕೋಲ್ಡ್‌ ಚೈನ್‌ ಪಾಯಿಂಟ್‌

75 ಲಕ್ಷ ಮಂದಿಯ ದತ್ತಾಂಶ
ಪ್ರಸ್ತುತ ಸಾರ್ವಜನಿಕರು ಕೋವಿನ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಆಗುವುದಿಲ್ಲ. ಸದ್ಯ ಅಧಿಕಾರಿಗಳಿಗೆ ಮಾತ್ರ ಇದರ ಆ್ಯಕ್ಸೆಸ್‌ ನೀಡಲಾಗಿದೆ. ಆರಂಭದಲ್ಲಿ ಲಸಿಕೆ ಪಡೆಯಲಿರುವ 75 ಲಕ್ಷ ಆರೋಗ್ಯ ಕಾರ್ಯಕರ್ತರ ದತ್ತಾಂಶವನ್ನು ಕೋವಿನ್‌ನಲ್ಲಿ ಸಂಗ್ರಹಿಸಿಡಲಾಗಿದೆ.

ಸರಕಾರದಿಂದ ಶಿಬಿರ?
ಕೋವಿನ್‌ ಆ್ಯಪ್‌ನಲ್ಲಿ ನೋಂದಣಿಗೆ 3 ಆಯ್ಕೆಗಳನ್ನು ನೀಡಲಾಗಿರುತ್ತದೆ. ಇವುಗಳ ಮೂಲಕ ಜನರು ಲಸಿಕೆಗೆ ನೋಂದಾಯಿಸಿಕೊಳ್ಳಬಹುದು. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸರಕಾರವೇ ವಿವಿಧ ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಸಾಧ್ಯತೆಯಿದ್ದು, ಜನರು ಅಂಥ ಶಿಬಿರಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಬಹುದು.

ಮೊದಲನೇ ಹಂತದಲ್ಲಿ 2,73,211 ಸರಕಾರಿ ಮತ್ತು 3,57,313 ಖಾಸಗಿ ಸಹಿತ ಒಟ್ಟು 6,30,524 ಅರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ.
-ಡಾ| ಕೆ. ಸುಧಾಕರ್‌,  ಆರೋಗ್ಯ ಮತ್ತು  ವೈದ್ಯಕೀಯ ಶಿಕ್ಷಣ ಸಚಿವ

ಟಾಪ್ ನ್ಯೂಸ್

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

1-bbbbb

Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

Adani

Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ

DCM-Fadnavis

Assembly Election: ಮಹಾರಾಷ್ಟ್ರಕ್ಕೆ ಫ‌ಡ್ನವೀಸ್‌ ಸಿಎಂ?: 2-3 ದಿನಗಳಲ್ಲೇ ಪ್ರಮಾಣವಚನ

Supriya-Sule

Maha Election: ಡಿಕೆಶಿ ಸೇರಿ ಕಾಂಗ್ರೆಸ್‌ ಜತೆ ಇವಿಎಂ ಬಗ್ಗೆ ಚರ್ಚೆ: ಸಂಸದೆ ಸುಪ್ರಿಯಾ

Ashwini-vaishnav

Cabinet Decision: 7 ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟ ಅನುಮತಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1

Sullia: ರಬ್ಬರ್‌ ಸ್ಮೋಕ್‌ ಹೌಸ್‌ಗೆ ಬೆಂಕಿ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ

Sambhal

Mosque survey: ಸಂಭಲ್‌ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು

car-parkala

ಕಾಸರಗೋಡು: ಬೈಕ್‌ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.