ಮುಂಬಯಿ: ವ್ಯಕ್ತಿಯ ಪ್ರಾಣ ಉಳಿಸಿದ ಫೇಸ್‌ಬುಕ್‌ನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ!
Team Udayavani, Jan 6, 2021, 6:25 AM IST
ಮುಂಬಯಿ: ಮಹಾರಾಷ್ಟ್ರದ ಧುಲೆ ಪ್ರದೇಶದ ಒಬ್ಬ ಯುವಕ ನಾಲ್ಕು ಗೋಡೆಗಳ ಒಳಗೆ ಕುಳಿತು ಆತ್ಮಹತ್ಯೆ ಮಾಡಲು ಮುಂದಾದ. ಆದರೆ ಅದನ್ನು ಫೇಸ್‌ಬುಕ್‌ನಲ್ಲಿ ಲೈವ್ ಮಾಡಲು ಮುಂದಾದ ಕಾರಣ ಈಗ ಬದುಕುಳಿದಿದ್ದಾನೆ. ಈ ಘಟನೆಯೇ ರೋಚಕವಾಗಿದೆ.
ಆತ್ಮಹತ್ಯೆಗೆ ಮುಂದಾದವನು ಜ್ಞಾನೇಶ್ವರ ಪಾಟೀಲ್ ಎಂಬ 23 ವರ್ಷದ ವ್ಯಕ್ತಿ. ತನ್ನ ಯತ್ನವನ್ನು ಫೇಸ್‌ಬುಕ್ ಲೈವ್ ಮಾಡಿದ್ದ. ಇದನ್ನು 7,695 ಕಿ.ಮೀ. ದೂರದ ಐರ್ಲೆಂಡ್‌ನಲ್ಲಿ ಗಮನಿಸುತ್ತಿದ್ದ ಅಧಿಕಾರಿಗಳು ಮುಂಬಯಿ ಪೊಲೀಸರಿಗೆ ಮಾಹಿತಿ ನೀಡಿ ಅವನ ಜೀವ ಉಳಿಸಿದ್ದಾರೆ.
ನಡೆದ್ದೇನು?
ಜ್ಞಾನೇಶ್ವರ ಫೇಸ್‌ಬುಕ್ ಲೈವ್‌ಗೆ ಹೋಗಿ ಪದೇ ಪದೆ ಗಂಟ ಲನ್ನು ಬ್ಲೇಡ್‌ನಿಂದ ಕತ್ತರಿಸುತ್ತಿದ್ದ. ಇದರ ಸೂಚನೆ ಪಡೆದ ಐರ್ಲೆಂಡ್‌ನ ಸೈಬರ್ ಅಧಿಕಾರಿಗಳು ಮುಂಬಯಿ ಪೊಲೀ ಸರಿಗೆ ಮಾಹಿತಿ ನೀಡಿದರು. ಇದರಿಂದ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ತೆರಳಿ ಯುವಕನನ್ನು ಸಾವಿನಿಂದ ರಕ್ಷಿಸಿದ್ದಾರೆ.
ಎಲ್ಲಿದೆ ಈ ಪ್ರದೇಶ?
ಮುಂಬಯಿಯಿಂದ 323 ಕಿ.ಮೀ. ದೂರದಲ್ಲಿರುವ ಭೋಯಿ ಸೊಸೈಟಿ ಆಫ್ ಧುಲೇಯಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ. ರವಿವಾರ ರಾತ್ರಿ 8 ಗಂಟೆಗೆ ಐರ್ಲೆಂಡ್‌ನಿಂದ ಮುಂಬಯಿ ಪೊಲೀಸರಿಗೆ ಘಟನೆ ಮಾಹಿತಿ ಬಂದಿತ್ತು. ಜ್ಞಾನೇಶ್ವರ ಪಾಟೀಲ್ ಮನೆಯಲ್ಲಿ ಒಂಟಿಯಾಗಿದ್ದರು.
8.30ಕ್ಕೆ ಕರೆ, 9ಕ್ಕೆ ರಕ್ಷಣೆ
“ನಿಮ್ಮ ಪ್ರದೇಶದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ’ ಎಂದು ಐರ್ಲೆಂಡ್‌ನ ಫೇಸ್‌ಬುಕ್ ಪ್ರಧಾನ ಕಚೇರಿ ಯಿಂದ ಮುಂಬಯಿ ಸೈಬರ್ ಸೆಲ್‌ನ ಡಿಸಿಪಿ ರಶ್ಮಿ ಕರಂಡಿಕರ್ ಅವರಿಗೆ ರವಿವಾರ ರಾತ್ರಿ 8ರ ಸುಮಾರಿಗೆ ಕರೆ ಬಂದಿದೆ. “ಅವರ ಕೈ ಮತ್ತು ಗಂಟಲಿನಿಂದ ರಕ್ತಸ್ರಾವವಾಗುತ್ತಿದೆ. ದಯ ವಿಟ್ಟು ತತ್‌ಕ್ಷಣ ಸಹಾಯ ಮಾಡಿ’ ಎಂದು ಮಾಹಿತಿಯಲ್ಲಿ ಉಲ್ಲೇಖೀಸಲಾಗಿತ್ತು. ಪೊಲೀಸರು ತತ್‌ಕ್ಷಣ ಕಾರ್ಯ ಪ್ರವೃತ್ತ ರಾಗಿದ್ದರು. 9 ಗಂಟೆಗೆ ಧುಲೆಗೆ ತಲುಪಿ ಜ್ಞಾನೇಶ್ವರನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಆತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೇಸ್‌ಬುಕ್ ಹೇಗೆ ಪತ್ತೆ ಮಾಡುತ್ತದೆ?
2017ರಲ್ಲಿ ಫೇಸ್‌ಬುಕ್ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನವನ್ನು ಪರಿಚಯಿಸಿತು. ಬಳಕೆದಾರರ ಮನಸ್ಸಿನ ಸ್ಥಿತಿ ಹೇಗಿದೆ ಎಂಬುದನ್ನು ಇದು ತೋರಿಸುತ್ತದೆ. ವ್ಯಕ್ತಿಗೆ ಆತ್ಮಹತ್ಯೆ ಯಂತಹ ವರ್ತನೆ ಇದೆಯೋ ಇಲ್ಲವೋ ಎಂಬುದನ್ನು ಅರ್ಥೈಸಿಕೊಳ್ಳುತ್ತದೆ. ಇದು ರಕ್ತ ಅಥವಾ ಹಿಂಸೆ ಕಂಡುಬಂದಲ್ಲಿ ಎಚ್ಚರಿಕೆಯನ್ನು ರವಾನಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.