ಅಂಗನವಾಡಿ ಮಕ್ಕಳಲ್ಲಿ ಶೌಚಾಲಯ ಜಾಗೃತಿ ಮೂಡಿಸಿ


Team Udayavani, Jan 6, 2021, 5:16 PM IST

ಅಂಗನವಾಡಿ ಮಕ್ಕಳಲ್ಲಿ ಶೌಚಾಲಯ ಜಾಗೃತಿ ಮೂಡಿಸಿ

ಚಿತ್ರದುರ್ಗ: ಅಂಗನವಾಡಿ ಮಕ್ಕಳು ಅಲ್ಲಿರುವ ಶೌಚಾಲಯ ಬಳಸದೆ ಹೊರಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ನಿಟ್ಟಿನಲ್ಲಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರು ಅರಿವು ಮೂಡಿಸಬೇಕುಎಂದು ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಕ್ಕಳರಕ್ಷಣಾ ಘಟಕದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳು ಅಂಗನವಾಡಿಕೇಂದ್ರಗಳಿಗೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಬೇಕು ಎಂದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಲೋಕೇಶಪ್ಪ ಮಾತನಾಡಿ, 2020-21ನೇ ಸಾಲಿನ ವಿಶೇಷ ಪಾಲನೆಯೋಜನೆಯಡಿ ಎಚ್‌ಐವಿ, ಏಡ್ಸ್‌ ಸೋಂಕಿತ ಹಾಗೂ ಬಾಧಿತ ಅನಾಥ ಹಾಗೂ ಸಂಕಷ್ಟ ಸ್ಥಿತಿಯಲ್ಲಿರುವ ಮಕ್ಕಳಿಗಾಗಿ ವಿಶೇಷ ಪಾಲನಾ ಯೋಜನೆ ಜಾರಿಗೆಬಂದಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ 419ಫಲಾನುಭವಿಗಳಿದ್ದು, ಮಾಸಿಕ 1 ಸಾವಿರದಂತೆಮೂರು ತಿಂಗಳಿಗೊಮ್ಮೆ ಅವರ ಖಾತೆಗೆ ಅನುದಾನಭರಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ 17.8 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, 16,91,567 ರೂ. ಖರ್ಚು ಮಾಡಲಾಗಿದೆ. 2013-14ನೇ ಸಾಲಿನಿಂದಈವರೆಗೆ 1.63 ಕೋಟಿ ರೂ. ಅನುದಾನವನ್ನು ಮಕ್ಕಳಖಾತೆಗೆ ಜಮಾ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಅನಾಥ, ಏಕ ಪೋಷಕ, ವಿಧವೆಯರ ಮಕ್ಕಳು,ಕುಷ್ಠರೋಗ, ಎಚ್‌ಐವಿ ಸೋಂಕಿತ ಪೋಷಕರಮಕ್ಕಳು, ಕುಟುಂಬಕ್ಕೆ ಆಧಾರವಾಗಿದ್ದ ಪೋಷಕರು ಬಂಧಿಖಾನೆಯಲ್ಲಿದ್ದರೆ ಅಂತಹ ಕುಟುಂಬದ ಮಕ್ಕಳಿಗೆಪ್ರತಿ ಮಗುವಿಗೆ ಮಾಸಿಕ 1 ಸಾವಿರದಂತೆ ಕುಟುಂಬದಗರಿಷ್ಠ 2 ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ಯೋಜನೆಯಡಿ 140 ಫಲಾನುಭವಿಗಳಿದ್ದು, ರೂ.6.59 ಲಕ್ಷ ಅನುದಾನ ಬಿಡುಗಡೆಯಾಗಿದ್ದು,84 ಫಲಾನುಭವಿಗಳಿಗೆ ಮಾತ್ರ ಅನುದಾನ ಖರ್ಚು ಮಾಡಲಾಗಿದೆ ಎಂದರು.

ಸರ್ಕಾರಿ ಬಾಲಕರ ಮಂದಿರದಲ್ಲಿ ಒಟ್ಟು 42ಮಕ್ಕಳಿದ್ದಾರೆ. ಈ ಮಕ್ಕಳಿಗೆ 3ನೇ ತ್ತೈಮಾಸಿಕದವರೆಗೆ32.82 ಲಕ್ಷ ರೂ.ಅನುದಾನ ಬಂದಿದ್ದು, 19.17 ಲಕ್ಷರೂ. ಖರ್ಚು ಮಾಡಲಾಗಿದೆ. ಸರ್ಕಾರಿ ಬಾಲಕಿಯರಬಾಲಮಂದಿರಲ್ಲಿ ಒಟ್ಟು 25 ಮಕ್ಕಳಿದ್ದು, 27.96ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, 17.78ಲಕ್ಷ ರೂ. ಖರ್ಚು ಮಾಡಲಾಗಿದೆ. ಸರ್ಕಾರಿವೀಕ್ಷಣಾಲಯದಲ್ಲಿ ಒಟ್ಟು 7 ಮಕ್ಕಳಿದ್ದು, 14.51 ಲಕ್ಷರೂ. ಅನುದಾನ ಬಿಡುಗಡೆಯಾಗಿದ್ದು, 12.38 ಲಕ್ಷರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.6 ವರ್ಷದೊಳಗಿನ ನಿರ್ಲಕ್ಷéಕ್ಕೊಳಗಾದ ಅನಾಥ,ನಿರ್ಗತಿಕ, ತ್ಯಜಿಸಲ್ಪಟ್ಟ ಮಕ್ಕಳಿಗೆ ಕುಟುಂಬದವಾತಾವರಣವನ್ನು ಕಲ್ಪಿಸಿ ಅವರಿಗೆ ಪ್ರೀತಿ, ವಾತ್ಸಲ್ಯ,ಪೋಷಣೆ ಮತ್ತು ರಕ್ಷಣೆಯನ್ನು ಒದಗಿಸುವಸಲುವಾಗಿ ಜಿಲ್ಲೆಯಲ್ಲಿ ನಗರದ ಮುರುಘಾ ರಾಜೇಂದ್ರಬೃಹನ್ಮಠದಲ್ಲಿ ಮಡಿಲು ದತ್ತು ಕೇಂದ್ರ ತೆರೆಯಲಾಗಿದೆ.ಏಪ್ರಿಲ್‌ನಿಂದ ಡಿಸೆಂಬರ್‌ ವರೆಗೆ ದತ್ತು ಸಂಸ್ಥೆಗೆ ಒಟ್ಟು16 ಮಕ್ಕಳು ದಾಖಲಾಗಿದ್ದು, ಇದರಲ್ಲಿ 4 ಮಕ್ಕಳುರಕ್ಷಣೆ ಮತು ಪೋಷಣೆಯಲಿದ್ದಾರೆ. 12 ಮಕ್ಕಳು ದತ್ತು ಪ್ರಕ್ರಿಯೆಗೆ ಒಳಪಟ್ಟಿದ್ದಾರೆ ಎಂದರು.

ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ಜಿಪಂ ಉಪಕಾರ್ಯದರ್ಶಿ ಮಹಮ್ಮದ್‌ಮುಬೀನ್‌, ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ. ಗಿರೀಶ್‌, ಡಿಎಚ್‌ಒ ಡಾ| ಪಾಲಾಕ್ಷ, ನ್ಯಾಯವಾದಿ ಡಿ.ಕೆ. ಶೀಲಾ ಮತ್ತಿತರೆ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

2020ರ ಏಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ ಪೋಕ್ಸೋ ಕಾಯ್ದೆಯಡಿ ಜಿಲ್ಲೆಯಲ್ಲಿ 42 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 40 ಪ್ರಕರಣಗಳುಖುಲಾಸೆಯಾಗಿದ್ದು, 2 ಪ್ರಕರಣಗಳು ಬಾಕಿ ಇವೆ. ಮಕ್ಕಳ ನಿಧಿ  (ಅಭಯ ನಿ ಧಿ) ಯಿಂದ 11 ಮಕ್ಕಳಿಗೆ 65 ಸಾವಿರ ರೂ. ಪರಿಹಾರ ವಿತರಿಸಲಾಗಿದೆ.  -ಲೋಕೇಶಪ್ಪ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-chitradurga

Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್‌

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

4-bharamasagara

Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್‌ ಆದ ಯುವಕನ ಹತ್ಯೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.