400ರಷ್ಟು ಉಗ್ರರು ಒಳನುಸುಳಲು ಸಿದ್ಧ
Team Udayavani, Jan 6, 2021, 9:10 PM IST
ಸಾಂದರ್ಭಿಕ ಚಿತ್ರ
ಜಮ್ಮು: ಗಡಿ ನಿಯಂತ್ರಣ ರೇಖೆಯ ಬಳಿ ಸುಮಾರು 400 ಉಗ್ರರು ಲಾಂಚ್ ಪ್ಯಾಡ್ಗಳಲ್ಲಿ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಭಾರೀ ಚಳಿಯ ದುರ್ಲಾಭ ಪಡೆದು ಭಾರತದೊಳಕ್ಕೆ ನುಸುಳಲು ಕಾದು ನಿಂತಿದ್ದಾರೆ ಎಂಬುದಾಗಿ ಭದ್ರತ ಮೂಲಗಳು ತಿಳಿಸಿವೆ.
ಜಮ್ಮು- ಕಾಶ್ಮೀರದ ಕಣಿವೆಗಳು ಮತ್ತು ಬೆಟ್ಟಗಳು ಹಿಮದಲ್ಲಿ ಆಚ್ಛಾದಿತವಾಗಿರುವಾಗ ಉಗ್ರರನ್ನು ಗಡಿಯಾಚೆಗೆ ಕಳುಹಿಸಲು ಪಾಕಿಸ್ಥಾನ ಪ್ರಯತ್ನಿಸುತ್ತಿದೆ ಎಂದು ಅಲ್ಲಿನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ವರ್ಷ 44 ಉಗ್ರರು ಒಳನುಸುಳಿದ್ದರೆ 2019ರಲ್ಲಿ 141 ಉಗ್ರರು ಬಂದಿದ್ದರು. 2018ರಲ್ಲಿ ಈ ಸಂಖ್ಯೆ 143 ಆಗಿತ್ತು. ಬಿಗಿಯಾದ ಗಡಿ ಕಾವಲಿನಿಂದಾಗಿ ವರ್ಷದಿಂದ ವರ್ಷಕ್ಕೆ ಒಳನುಸುಳುವಿಕೆ ಕಡಿಮೆಯಾಗಿದ್ದು, ಇದರಿಂದ ಪಾಕ್ ಹತಾಶವಾಗಿದೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ. ಈ ಹತಾಶೆಯಿಂದಲೇ ಪಾಕ್ 2020ರಲ್ಲಿ 5,100 ಬಾರಿ ಕದನ ವಿರಾಮ ಉಲ್ಲಂ ಸಿತ್ತು. 2003ರಲ್ಲಿ ಕದನ ವಿರಾಮ ಜಾರಿಗೆ ಬಂದ ಬಳಿಕ ಇದು ಅತೀ ಹೆಚ್ಚು ಉಲ್ಲಂಘನೆಯಾಗಿದೆ.
175-210 ಉಗ್ರರು ಪೀರ್ ಪಂಜಾಲ್ನ ಉತ್ತರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಸಿದ್ಧವಾಗಿದ್ದರೆ, 119-216 ಮಂದಿ ಪೀರ್ ಪಂಜಾಲ್ನ ದಕ್ಷಿಣದ ಜಮ್ಮು ಪ್ರದೇಶದಲ್ಲಿದ್ದಾರೆ ಎಂದು ಭದ್ರತ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.