ಡ್ರಗ್ಸ್ ಹಾವಳಿ ಮಟ್ಟ ಹಾಕಲು ಕ್ರಮ: ಪೊಲೀಸ್ ಆಯುಕ್ತ ಶಶಿಕುಮಾರ್
ಮಾದಕ ವಸ್ತು ಪ್ರಕರಣ ಆರೋಪಿಗಳ ಪರೇಡ್
Team Udayavani, Jan 6, 2021, 11:02 PM IST
ಡ್ರಗ್ಸ್ ಪ್ರಕರಣ ಆರೋಪಿಗಳ ಪರೇಡ್ ಸಂದರ್ಭ ಆಯುಕ್ತರು ವಿಚಾರಣೆ ನಡೆಸಿದರು.
ಮಹಾನಗರ: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಡ್ರಗ್ಸ್ ಹಾವಳಿಯನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಅಧಿಕಾರಿ, ಸಿಬಂದಿಗೆ ಸೂಚನೆ ನೀಡಲಾಗಿದ್ದು ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಬುಧವಾರದಂದು ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳ ಪರೇಡ್ ನಡೆಸಿದ ಸಂದರ್ಭ ಅವರು ಮಾತನಾಡಿದರು. ಕಮಿಷನರೆಟ್ ವ್ಯಾಪ್ತಿಯಲ್ಲಿ ಮೂರು ವರ್ಷಗಳಲ್ಲಿ 150ಕ್ಕೂ ಅಧಿಕ ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಮಾರಾಟ, ಪೂರೈಕೆ ಚಟುವಟಿಕೆಗಳು ಸೇರಿವೆ. ಅಲ್ಲದೆ 3 ವರ್ಷಗಳಲ್ಲಿ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ 350ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ, ಕೇರಳ ರಾಜ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿರುವುದರಿಂದ ಮತ್ತು ಸಮುದ್ರ ಮುಖಾಂತರ ವ್ಯವಹಾರಗಳು ನಡೆಯುತ್ತಿರುವುದರಿಂದ ಇಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚು ಎಂಬ ಮಾಹಿತಿ ಲಭ್ಯವಾಗಿದೆ ಎಂದು ಆಯುಕ್ತರು ತಿಳಿಸಿದರು.
ಗೂಂಡಾ ಕಾಯ್ದೆಗೂ ಸಿದ್ಧ
ಡ್ರಗ್ಸ್ ಮಾರಾಟ, ಪೂರೈಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬುಧವಾರ 140ಕ್ಕೂ ಅಧಿಕ ಮಂದಿಯ ಪರೇಡ್ ನಡೆಸಲಾಯಿತು. ಇಂತಹ ಆರೋಪಿಗಳು ಈಗ ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಪೊಲೀಸರು ತಿಳಿದುಕೊಳ್ಳಲು ಪರೇಡ್ ಸಹಾಯಕವಾಗುತ್ತದೆ. ಅಲ್ಲದೆ ಆರೋಪಿಗಳ ಮನಃಪರಿವರ್ತನೆಗೂ ಇಂತಹ ಪರೇಡ್‌ಗಳಿಂದ ಅವಕಾಶ ಸಿಗುತ್ತದೆ. ಈಗ ಆರೋಪಿಗಳಾಗಿರುವವರ ಪೈಕಿ ಕೆಲವರ ಮೇಲೆ 3ರಿಂದ 4, ಇನ್ನು ಕೆಲವರ ಮೇಲೆ 15ಕ್ಕೂ ಅಧಿಕ ಪ್ರಕರಣಗಳಿವೆ. ಒಂದು ವೇಳೆ ತಮ್ಮ ದಂಧೆಯನ್ನು ಪುನರಾವರ್ತಿಸಿದರೆ ಅಂತವರ ವಿರುದ್ಧ ಗೂಂಡಾ ಕಾಯ್ದೆಗಳನ್ನು ಹಾಕುವುದಕ್ಕೂ ಇಲಾಖೆ ಸಿದ್ಧವಿದೆ ಎಂದರು.
ವೆಬ್‌ಸೈಟ್ ಮೇಲೆಯೂ ನಿಗಾ
ಡಾರ್ಕ್ ವೆಬ್‌ನಂತಹ ಹೆಸರಿನ ವೆಬ್‌ಸೈಟ್‌ಗಳಲ್ಲಿ ಡ್ರಗ್ಸ್ ಮಾರಾಟ, ಡ್ರಗ್ಸ್ ಸೇವನೆಗೆ ಪ್ರಚೋದನೆ ಮೊದಲಾದವು ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಅಲ್ಲದೆ ಕೊರಿಯರ್ ಮೂಲಕವೂ ಡ್ರಗ್ಸ್ ಸಾಗಾಟ ನಡೆಯುವ ಮಾಹಿತಿ ಇದೆ. ಕೆಲವು ಔಷಧ ಅಂಗಡಿಗಳಲ್ಲಿಯೂ ನಿಷೇಧಿತ ಡ್ರಗ್ಸ್‌ಗಳ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಇದ್ದು ಸಂಬಂಧಿಸದ ಇಲಾಖೆಗಳ ಜತೆ ಸೇರಿ ಇದರ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.
ಸಾರ್ವಜನಿಕರು ಮಾಹಿತಿ ನೀಡಿ
ಮುಂದಿನ ದಿನಗಳಲ್ಲಿ ರೌಡಿಗಳ ಪರೇಡ್ ನಡೆಸಿ ಅವರನ್ನು ನಿಯಂತ್ರಿಸಲು, ಸರಿದಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಪೊಲೀಸರಂತೆ ಕಾರ್ಯನಿರ್ವಹಿಸಬೇಕು. ಡ್ರಗ್ಸ್ ವಿಚಾರಗಳಿಗೆ ಸಂಬಂಧಿಸಿಯೂ 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡಬಹುದು ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
CT Ravi ಬಂಧನ ಪ್ರಕರಣ; ಗ್ರಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.