ಆಮದು ನಿಯಂತ್ರಣ; ಅಡಿಕೆ ಧಾರಣೆ ನಾಗಾಲೋಟ
ಮಾರ್ಚ್ ವೇಳೆಗೆ ಕೆಜಿಗೆ 500 ನಿರೀಕ್ಷೆ
Team Udayavani, Jan 7, 2021, 6:22 AM IST
ಸಾಂದರ್ಭಿಕ ಚಿತ್ರ
ಪುತ್ತೂರು: ಬರ್ಮಾ ಸಹಿತ ವಿದೇಶಗಳಿಂದ ಅಡಿಕೆ ಆಮದು ನಿಯಂತ್ರಣಕ್ಕಾಗಿ ಸರಕಾರವು ಬಿಗಿ ಕ್ರಮಗಳಿಗೆ ಮುಂದಾಗಿರುವ ಬೆನ್ನಲ್ಲೇ ಅಡಿಕೆ ಧಾರಣೆ ಏರಿಕೆ ಕಂಡಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಹೊಸ ಅಡಿಕೆ, ಸಿಂಗಲ್, ಡಬ್ಬಲ್ ಚೋಲ್ ಧಾರಣೆ ದಾಖಲೆಯ ಹಂತಕ್ಕೆ ತಲುಪಿದೆ. ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಈಗ ಧಾರಣೆ ಏರುಗತಿಯಲ್ಲಿದೆ.
ವಿದೇಶದಲ್ಲೂ ಕೊರತೆ
ವಿದೇಶಗಳಿಂದ ಅಡಿಕೆ ಆಮದು ಹೆಚ್ಚಾಗಿ ಧಾರಣೆ ಕುಸಿತ ಕಾಣಲಿದೆ ಎಂಬ ಆತಂಕ ಸೃಷ್ಟಿಸಿ ಬೆಳೆಗಾರರು ಉತ್ಪನ್ನವನ್ನು ಮಾರುಕಟ್ಟೆಗೆ ಇಳಿಸುವಂತೆ ಮಾಡುವ ಮಾರುಕಟ್ಟೆ ತಂತ್ರಗಾರಿಕೆಯ ಬಗ್ಗೆ ಬೆಳೆಗಾರರು ಜಾಗೃತರಾಗಿದ್ದಾರೆ. ವಾಸ್ತವವಾಗಿ ಅಡಿಕೆ ಬೆಳೆಯುವ ವಿದೇಶಗಳಲ್ಲಿ ಉತ್ಪಾದನೆ ಕೊರತೆ ಇದೆ. 2018ಕ್ಕೆ ಹೋಲಿಸಿದರೆ ಅಲ್ಲಿ ಶೇ. 60ರಷ್ಟು ಬೆಳೆ ಕಡಿಮೆ ಇದ್ದು, ಅಲ್ಲಿಂದಲೂ ಬೇಡಿಕೆಗೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ನಿರ್ಬಂಧವೂ ಬಿಗಿಯಾಗಿದೆ. ದೇಶೀಯ ಅಡಿಕೆ ಧಾರಣೆ ಇನ್ನಷ್ಟು ಏರುವ ಆಶಾವಾದಕ್ಕೆ ಇವೆರಡು ಅಂಶಗಳು ಪೂರಕ.
ದಾಸ್ತಾನು ಕೊರತೆ ಇದೆ
ಉತ್ತರ ಭಾರತದಲ್ಲಿ ಪಾನ್ ಮಸಾಲಕ್ಕಾಗಿ ಮಂಗಳೂರು ಚಾಲಿ ಅಡಿಕೆಯನ್ನೇ ನೆಚ್ಚಿಕೊಳ್ಳುತ್ತಾರೆ. ಮೂರು ವರ್ಷಗಳಿಂದ ಕೊಳೆ ರೋಗ, ಪ್ರತಿಕೂಲ ವಾತಾವರಣಗಳಿಂದಾಗಿ ದಕ್ಷಿಣ ಭಾರತದಲ್ಲಿ ಅಡಿಕೆ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಹೀಗಾಗಿ ಕಾನ್ಪುರ, ಕಟಕ್, ರಾಜಕೋಟ್, ಅಹಮದಾಬಾದ್ ಸಹಿತ ಉತ್ತರ ಭಾರತದ ದಾಸ್ತಾನು ಕೋಠಿಗಳಲ್ಲಿ ಅಡಿಕೆ ದಾಸ್ತಾನು ಕುಸಿದಿದ್ದು, ಶೇ. 70ರಷ್ಟು ಕೊರತೆ ಇದೆ.
500 ರೂ.ನತ್ತ ಲಕ್ಷ್ಯ
ಮಾರುಕಟ್ಟೆ ತಜ್ಞರ ಪ್ರಕಾರ ಮಾರ್ಚ್ ವೇಳೆಗೆ ಧಾರಣೆ 500 ರೂ. ತಲುಪಿದರೂ ಅಚ್ಚರಿಯಿಲ್ಲ. ಮಾರುಕಟ್ಟೆಯಲ್ಲಿ ಇಂತಹ ಸಾಧ್ಯತೆ ಕಂಡು ಬಂದಿದೆ.
ಅಡಿಕೆಯ ಧಾರಣೆಯ ನೋಟ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಜ. 6ರಂದು ಹೊಸ ಅಡಿಕೆ ಕೆಜಿಗೆ 350 ರೂ., ಸಿಂಗಲ್ ಚೋಲ್‌ಗೆ 410 ರೂ., ಡಬ್ಬಲ್ ಚೋಲ್‌ಗೆ 410 ರೂ. ಇತ್ತು. ಈ ಕೊಯಿಲಿನ ಅಡಿಕೆ (ಹೊಸ)ಗೆ ಈ ಪ್ರಮಾಣದ ಧಾರಣೆ ಇದೇ ಮೊದಲು.
ಉದಯವಾಣಿ ಟೀಮ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.