ಧಾರ್ಮಿಕ ಚಿಹ್ನೆಗಳ ವಸ್ತ್ರಧಾರಣೆ ಎಷ್ಟು ಸರಿ?


Team Udayavani, Jan 7, 2021, 5:58 AM IST

ಧಾರ್ಮಿಕ ಚಿಹ್ನೆಗಳ ವಸ್ತ್ರಧಾರಣೆ ಎಷ್ಟು ಸರಿ?

ಸಾಂದರ್ಭಿಕ ಚಿತ್ರ

ಆಧ್ಯಾತ್ಮಿಕ ಮನಸ್ಸುಗಳಿಗೆ “ಓಂ’ ಎಂದಾಕ್ಷಣ ಒಂದು ಅವರ್ಣನೀಯ ಆನಂದ ಮೈ ಮನಸ್ಸುಗಳಲ್ಲಿ ಆವರಿಸಿಕೊಳ್ಳುವುದು ಸಹಜ. ಓಂ ಎನ್ನುವುದು ಹಿಂದೂ, ಬೌದ್ಧ, ಸಿಕ್ಖ್ ಮತ್ತು ಜೈನ ಧರ್ಮಗಳಲ್ಲಿ ತನ್ನದೇ ಆದ ಮಹತ್ವವನ್ನು ಪಡೆದಿರುವುದು ಸುಸ್ಪಷ್ಟ. ವೇದದ ಸಾರವೇ ಓಂ. ಓಂ ಕೇವಲ ಒಂದು ಬೀಜಾಕ್ಷರ ಮಂತ್ರವಷ್ಟೇ ಅಲ್ಲ, ಅದು ಒಬ್ಬ ಮನುಷ್ಯನಲ್ಲಿ ಆಧ್ಯಾತ್ಮವನ್ನು ದಿವ್ಯ ಔನ್ನತ್ಯಕ್ಕೇರಿಸುವ ಅದ್ಭುತವಾದ ಶಕ್ತಿಯಾಗಿ ಗುರುತಿಸಿಕೊಂಡಿದೆ. ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿರಲಿ, ಓಂಕಾರದ ಪಠಣವಿಲ್ಲದೆ ಮುಗಿಯುವ ಮಾತಂತಿರಲಿ ಆರಂಭಗೊಳ್ಳುವುದೇ ಇಲ್ಲ.

ಇಂತಹ ಓಂಕಾರದ ಸಂಕೇತ ರೂಪವಾಗಿ ನಾವು ಒಂದು ಚಿಹ್ನೆಯನ್ನು ಬಳಸುತ್ತೇವೆ. ಆ ಓಂ ನ ಸಂಕೇತವನ್ನು ಕೂಡ ಧರ್ಮ ಗಳಲ್ಲಿ ಅಷ್ಟೇ ಪವಿತ್ರ ಎಂದು ಕರೆಯಲಾಗಿದೆ. ನಕಾರಾತ್ಮಕ ಅಂಶಗಳನ್ನು ಸಕಾರಾತ್ಮಕ ಅಂಶಗಳನ್ನಾಗಿ ಬದಲಾ ಯಿಸುತ್ತದೆ ಎಂದು ನಂಬಲಾಗಿರುವ ಸ್ವಸ್ತಿಕಾ ಚಿಹ್ನೆಗೂ ಹಿಂದೂ ಧಾರ್ಮಿಕ ನಂಬಿಕೆಗಳಲ್ಲಿ ಮಹತ್ತರ ಸ್ಥಾನವಿದೆ. ಹಾಗಾಗಿ ಈ ಎರಡೂ ಧಾರ್ಮಿಕ ಸಂಕೇತಗಳನ್ನು ಗೌರವ ದಿಂದ ಕಾಣಬೇಕಾಗಿರುವುದು ನಮ್ಮ ಕರ್ತವ್ಯ ಕೂಡ. ಆದರೆ ಇಂತಹ ಧಾರ್ಮಿಕ ವಿಚಾರಗಳ ಬಗೆಗೆ ನಮ್ಮಲ್ಲಿ ಪ್ರಜ್ಞೆ ಮತ್ತು ಗೌರವ ಕಡಿಮೆಯಾಗುತ್ತಿದೆಯಾ ಎನ್ನುವ ವಿಚಾರ ದ ಬಗೆಗೆ ನಾವು ಚಿಂತಿಸಬೇಕಾದ ಅಗತ್ಯವಿದೆ.

ಈ ಹಿಂದೆ ಆನ್‌ಲೈನ್‌ ಮಾರಾಟ ತಾಣಗಳಲ್ಲಿ ಭಾರತದ ರಾಷ್ಟ್ರಧ್ವಜವನ್ನು, ಗಾಂಧೀಜಿಯವರ ಭಾವಚಿತ್ರಗಳನ್ನು ಚಪ್ಪಲಿ, ನೆಲಹಾಸು ಇತ್ಯಾದಿಗಳ ಮೇಲೆಲ್ಲ ಮುದ್ರಿಸಿ ಮಾರಾಟಕ್ಕೆ ಇರಿಸಿದ್ದನ್ನು ಭಾರತೀಯರಾದ ನಾವೆಲ್ಲ ಕಂಡಿದ್ದೇವೆ, ಕೇಳಿದ್ದೇವೆ, ಆಕ್ರೋಶಗೊಂಡು ವಿರೋಧಿಸಿದ್ದೇವೆ. ಕೆಲ ವೊಂದು ಕಂಪೆನಿಗಳು ಹಿಂದೂ ದೇವರ ಚಿತ್ರಗಳನ್ನು, ಧಾರ್ಮಿಕ ಸಂಕೇತಗಳನ್ನು ಕೂಡ ಅವಮಾನಕರ ರೀತಿಯಲ್ಲಿ ವಸ್ತುಗಳ ಮಾರಾಟಕ್ಕಾಗಿ ಬಳಸಿಕೊಂಡಿದ್ದನ್ನು ನಾವೆಲ್ಲ ಗಮನಿಸಿದ್ದೇವೆ ಮತ್ತು ಅದನ್ನು ಸದಾ ವಿರೋಧಿಸುತ್ತ ಬಂದಿದ್ದೇವೆ.

ಬೇರೆ ಬೇರೆ ದೇಶಗಳಲ್ಲಿ ಭಾರತೀಯರ ಭಾವನೆಗೆ ಧಕ್ಕೆ ತರುವಂಥ ಇಂತಹ ಹಲವಾರು ವಸ್ತುಗಳ ಮಾರಾಟ ನಡೆ ಯು ತ್ತಿರುತ್ತದೆ. ಅವೆಲ್ಲವೂ ಖಂಡನಾರ್ಹವೇ ಸರಿ. ಸನಾತನ ಸಂಸ್ಕೃತಿಗಳನ್ನು ಗೌರವಿಸದ, ಅಂತಹ ಎಲ್ಲ ಸಂಸ್ಥೆಗಳನ್ನು ನಾವು ನೇರ ವಾಗಿ ಧಿಕ್ಕರಿಸಬೇಕಿದೆ. ಇವೆಲ್ಲದರ ನಡುವೆ ಇಲ್ಲೊಂದು ಬಹು ದೊಡ್ಡ ವಿಪರ್ಯಾಸವನ್ನು ನಾವು ಗಮನಿಸುವುದು ಆವಶ್ಯಕವಾಗಿದೆ.

ನಮ್ಮ ಧಾರ್ಮಿಕ ಅಥವಾ ಇನ್ನಿತರ ಕಾರ್ಯಕ್ರಮಗಳ ಸಂದರ್ಭದಲ್ಲಿ ಕೆಲವೊಂದಷ್ಟು ಮಂದಿ ಧರಿಸುವ ಬಟ್ಟೆಗಳ ವಿನ್ಯಾಸದತ್ತ ನಾವೊಮ್ಮೆ ಗಮನಹರಿಸೋಣ. ಕೆಲವು ಜನರು ದೇವ ದೇವತೆಯರ ಚಿತ್ರಗಳನ್ನು ಓಂ, ಸ್ವಸ್ತಿಕಾದಂತಹ ಧಾರ್ಮಿಕ ಚಿಹ್ನೆಗಳನ್ನು, ದೇವರ ಸ್ತುತಿ ಬರಹಗಳನ್ನು, ಭಾರತ ಮಾತೆಯ ಚಿತ್ರಗಳನ್ನು ಮುದ್ರಿಸಿದ ವಿವಿಧ ತೆರನಾದ ಆಕ ರ್ಷಕ ವರ್ಣದ ಶಾಲುಗಳನ್ನು, ಪಂಚೆಗಳನ್ನು ಮೇಲು ಹೊದಿ ಕೆ ಯಾಗಿ, ಮುಂಡಾಸಿನ ರೂಪದಲ್ಲಿ ಮತ್ತು ಸೊಂಟಕ್ಕೆ ಕಟ್ಟಿಕೊ ಳ್ಳಲು ಬಳಸುತ್ತಿರುವುದು ನಿಜಕ್ಕೂ ಬೇಸರದ ಮತ್ತು ಖಂಡ  ನಿಧೀಯ ಸಂಗತಿ. ಕೆಲವು ಕಡೆಗಳಲ್ಲಂತೂ ಅಂತಹ ವಸ್ತ್ರಗಳನ್ನು ತೀರಾ ಚಿಂದಿಯಾಗುವವರೆಗೆ ಬೇರೆ ಬೇರೆ ಕಾರ್ಯಗಳಿಗೆ ಬಳಸಿ ನಮ್ಮ ಸಂಸ್ಕೃತಿಯ ಗೌರವವನ್ನು ನಾವೇ ಕಡಿಮೆ ಮಾಡುತ್ತಿದ್ದೇವೆ ಎನ್ನುವುದು ಸತ್ಯ. ಇಂತಹ ಧಾರ್ಮಿಕ ಚಿಹ್ನೆಗಳ ವಸ್ತ್ರಧಾರಣೆ ಎಷ್ಟು ಸರಿ? ಎನ್ನುವುದನ್ನು ಪ್ರತಿಯೊಬ್ಬರೂ ಗಂಭೀರವಾಗಿ ಆಲೋಚಿಸಿಬೇಕಿದೆ?

ಈ ಬಗೆಗೆ ಎಲ್ಲರೂ ಎಚ್ಚೆತ್ತುಕೊಂಡು ಧಾರ್ಮಿಕ ಸಂಕೇತ ಗಳ ಮೌಲ್ಯಗಳನ್ನು ಉಳಿಸಿಕೊಳ್ಳುವುದರ ಜತೆಗೆ ಅಂತಹ ಯಾವುದೇ ಮುದ್ರಿತ ವಸ್ತ್ರಧಾರಣೆಗಳನ್ನು ವಿರೋಧಿಸಬೇಕಾ ದುದು ಅವಶ್ಯವಾಗಿದೆ. ನಮ್ಮ ಧಾರ್ಮಿಕತೆಯ ದಿವ್ಯ ಶಕ್ತಿ ಮತ್ತು ಅಪ್ಪಟ ದೇಶ ಭಕ್ತಿಯನ್ನು ಇಲ್ಲಿನ ಯಾರೊಬ್ಬರಿಗೂ ಇಂತಹ ಮುದ್ರಿತ ವಸ್ತ್ರ ಸಂಕೇತಗಳ ಮೂಲಕ ತಿಳಿಸಿ ಕೊಡಬೇಕಾದ ಅಗತ್ಯ ಖಂಡಿತ ಇಲ್ಲ. ಇನ್ನು ಮುದ್ರಣದ ಅನಿ ವಾರ್ಯ ಇದ್ದಲ್ಲಿ ಅದನ್ನು ಹಾಗೆಯೇ ಜೋಪಾನವಾಗಿಡುವ ಮತ್ತು ಗೌರವಿಸುವ ಕೆಲಸವೂ ಆಗಬೇಕಿದೆ. ಪ್ರತಿಷ್ಠೆಗಾಗಿ ಅನಾ ವ ಶ್ಯಕವಾಗಿ ಧಾರ್ಮಿಕ ಸಂಕೇತಗಳನ್ನು ಈ ಪರಿಯಾಗಿ ಬಳಸಿ ಕೊಳ್ಳುವುದು ಕೂಡ ತರವಲ್ಲ ಎನ್ನುವುದು ಗಮನದಲ್ಲಿರಲಿ. ಬಳಸಿ ಎಸೆಯುವಂತಹ ಉತ್ಪನ್ನಗಳ ಮೇಲೂ ದೇವರ ಚಿತ್ರಗಳನ್ನು ಮುದ್ರಿಸುವುದನ್ನು ತಡೆಹಿಡಿಯಬೇಕಿದೆ.

ಅಂತರಂಗದ ಜ್ಞಾನಸತ್ವ ಧೀಶಕ್ತಿಯಾಗಿ ನಮ್ಮೊಡನಿದ್ದರೆ ಅದೆಂತಹುದೇ ಬಲಾಡ್ಯ ಸವಾಲುಗಳಿದ್ದರೂ ಎದುರಿಸಬಲ್ಲೆವು ಎನ್ನುವಾಗ ಇಂತಹ ಉಡುಪುಗಳ ಧಾರಣೆ ಬೇಕಿಲ್ಲ ಎನ್ನುವುದು ನನ್ನ ಅನಿಸಿಕೆ. ಧಾರ್ಮಿಕ ಸಂಕೇತಗಳು ಒಂದು ಧರ್ಮವನ್ನು ಉಳಿಸಿ, ಬೆಳೆಸುವಲ್ಲಿ ತಮ್ಮದೇ ಆದ ಪಾತ್ರ ವಹಿಸುತ್ತವೆ. ಹಾಗಾಗಿ ಅವುಗಳನ್ನು ಗೌರವಿಸಿ ಜತನದಿಂದ ಬಳಸಬೇಕಾಗಿರುವುದು ಎಲ್ಲರ ಕರ್ತವ್ಯವೂ ಕೂಡ.

ನರೇಂದ್ರ ಎಸ್‌., ಗಂಗೊಳ್ಳಿ

ಟಾಪ್ ನ್ಯೂಸ್

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್‌ ನೇತೃತ್ವ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.