2 ನಿಮಿಷಗಳಲ್ಲಿ 2 ಲಕ್ಷ ರೂ. ಸಾಲ!
Team Udayavani, Jan 7, 2021, 1:21 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆನ್‌ಲೈನ್ ಮೂಲಕ ಹಣಪಾವತಿ ಮಾಡುವ ಆ್ಯಪ್ ಪೇಟಿಎಂ ಇತ್ತೀಚೆಗಿನ ದಿನಗಳಲ್ಲಿ ತನ್ನ ಜನಪ್ರಿಯತೆಯನ್ನು ತುಸು ಕಳೆದು ಕೊಂಡಿದೆ. ಇದಕ್ಕೆ ಕಾರಣ ಗೂಗಲ್ ಪೇ, ಭೀಮ್, ಮೊಬಿಕ್ವಿಕ್, ಫೋನ್ ಪೇಗಳ ಅಬ್ಬರ. ಇದೀಗ ಪೇಟಿಎಂ ತನ್ನ ಕಳೆದುಕೊಂಡ ಜನಪ್ರಿಯತೆಯನ್ನು ಮರಳಿ ಗಳಿಸಲು ಹೊಸ ಯೋಜನೆಯೊಂದಕ್ಕೆ ಕೈಹಾಕಿದೆ.
ಪೇಟಿಎಂನ 10 ಲಕ್ಷ ಗ್ರಾಹಕರು ಕೇವಲ ಎರಡೇ ನಿಮಿಷದಲ್ಲಿ 2 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದು. ಅಂತಹದ್ದೊಂದು ವ್ಯವಸ್ಥೆಯೊಂದನ್ನು ಆ್ಯಪ್‌ನಲ್ಲಿ ಸೃಷ್ಟಿಸಲಾಗಿದೆ. ಇದಕ್ಕಾಗಿ ಪೇಟಿಎಂ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್ಸಿ) ಮತ್ತು ಬ್ಯಾಂಕ್‌ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಅರ್ಹ ಗ್ರಾಹಕರು ಯಾವುದೇ ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲದೇ ಆ್ಯಪ್ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್‌ಗಳಿಂದ ತತ್‌ಕ್ಷಣ ಹಣ ಪಾವತಿಯಾಗಲಿದೆ. ಅದನ್ನು ಮರಳಿ ಸಲು 18ರಿಂದ 36 ತಿಂಗಳವರೆಗೆ ಸಮಯವಿರುತ್ತದೆ. ಕಂತುಗಳನ್ನು ಎಷ್ಟು ಅವಧಿಗೆ ಸಾಲ ತೆಗೆದುಕೊಳ್ಳಲಾಗಿದೆ ಎನ್ನುವುದನ್ನು ನೋಡಿ ನಿರ್ಧರಿಸಲಾಗುತ್ತದೆ. ಆದರೆ ಸಾಲ ಪಡೆಯಲು ಯಾವೆಲ್ಲ ಅರ್ಹತೆ ಇರಬೇಕು ಎನ್ನುವುದು ಗೊತ್ತಾಗಿಲ್ಲ.
ಸ್ವ ಉದ್ಯೋಗಿಗಳು, ವೇತನದಾರರು, ಹೊಸತಾಗಿ ಸಾಲ ಪಡೆಯುವವರಿಗೆ ನೆರವಾಗುವುದು ಪೇಟಿಎಂ ಉದ್ದೇಶ. ಹಾಗೆಯೇ ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಗೆ ಹೋಲಿಸಿ ದರೆ ಇದೊಂದು ಹೊಸ ಪರಿವರ್ತನೆ ಎನ್ನುವುದು ಅದರ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ
ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ
MUST WATCH
ಹೊಸ ಸೇರ್ಪಡೆ
Arrested: ರೌಡಿಯ ಕೊಂದು ಸುಟ್ಟು ಹಾಕಿದ್ದ ರೌಡಿಶೀಟರ್ ಸೆರೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ