![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 7, 2021, 1:14 PM IST
ತುಮಕೂರು: “ಜಾಡ್ಸಿ ಒದ್ದರೆ ನೀನು ಎಲ್ಲಿಗೆ ಹೋಗಿ ಬೀಳ್ತಿಯಾ ಗೊತ್ತಾ? ಕೆಲಸ ಮಾಡದೆ ಹೆಂಡ್ತಿ ಸೀರೆ ತೆಗೆದುಕೊಳ್ಳೋಕೆ ಹೋಗಿದ್ಯಾ? ಮೊದಲು ಇವನನ್ನು ಕೆಲಸದಿಂದ ವಜಾ ಮಾಡಿ” ಎಂದು ಗುಬ್ಬಿ ಎಇಇ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ಗುಡುಗಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ 2020-21ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದ ಸಚಿವರು, ಕೆಲಸ ಮಾಡದೆ ಅಧಿಕಾರಿಗಳು ಜಿಲ್ಲೆಯನ್ನೇ ಸಾಯಿಸುತ್ತಿದ್ದಾರೆ. ಕೊರೊನಾ, ನೀತಿ ಸಂಹಿತೆ ಹೆಸರಲ್ಲಿ ಜಡಗಟ್ಟಿದ್ದಾರೆ ಎಂದು ಸಿಡಿಮಿಡಿಗೊಂಡರು.
ಕೆ.ಡಿ.ಪಿ ಸಭೆ ನಡೆಯುವುದಿಲ್ಲ ಎಂಬ ಉದಾಸೀನತೆ ತಾಳಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿ ಸಮರ್ಪಕವಾಗಿ ಮಾಡಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ಪೆಟ್ರೋಲ್ ದರ ಸಾರ್ವಕಾಲಿಕ ದಾಖಲೆ: ಜನವರಿ 7ರಂದು ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ ಎಷ್ಟು?
ಜಿಲ್ಲೆಯ ಪಿಆರ್ ಐಡಿ ವಿಭಾಗದ ಅಧಿಕಾರಿಗಳು ಕೆಲಸ ಮಾಡುವ ಮನೋಭಾವವನ್ನೇ ಮರೆತಿದ್ದಾರೆ. ಯಾರು ಕೆಲಸ ಮಾಡುವುದಿಲ್ಲವೋ ಅಂತಹ ಅಧಿಕಾರಿಗಳ ಸಂಬಳ ನಿಲ್ಲಿಸಿ, ನಾನು ಹೇಳುವವರೆಗೂ ಸಂಬಳ ಕೊಡಬೇಡಿ. ಯಾರಿಗೂ ಇಡಿ ಜೀವಮಾನ ಪ್ರಮೋಷನ್ ಸಿಗದಂತೆ ಮಾಡಿ ಎಂದು ಸಿಇಒ ಶುಭಕಲ್ಯಾಣ್ ಅವರಿಗೆ ಸೂಚಿಸಿದರು.
ತುಮಕೂರು ವಿಭಾಗದ ಪಿಆರ್ ಇಡಿಯ ಎಇಇ ಹರೀಶ್ ಬಾಬು ಅವರಿಗೆ ತರಾಟೆ ತೆಗೆದುಕೊಂಡ ಅವರು, ನೀನು ಕೆಲಸ ಮಾಡದಿದ್ದರೂ ‘ನಿನ್ನ ರಕ್ಷಣೆಗೆ ಸೀರೆ ಸುತ್ತುವ ಆ ಕೃಷ್ಣ ಯಾರು?’ ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗಕ್ಕೆ 2.96 ಕೋಟೆಯಲ್ಲಿ 87 ಲಕ್ಷ ಖರ್ಚಾಗಿದೆ ಉಳಿದ ಹಣ ಯಾವಾಗ ಖರ್ಚು ಮಾಡುತ್ತೀರಿ ಎಂದು ಪ್ರಶ್ನಿಸಿದರು. ನೀರಾವರಿ ಇಲಾಖೆ ಅಧಿಕಾರಿಗಳ ಉತ್ತರಕ್ಕೆ ಸಚಿವರು ಸಿಡಿಮಿಡಿಗೊಂಡರು.
ನಮ್ಮ ತಾಲ್ಲೂಕಿಗೆ ಹೇಮಾವತಿ ನೀರು ಹರಿಸುವಲ್ಲಿ ವಂಚನೆ ಯಾಗಿದೆ ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಸಚಿವರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ ನಿಮ್ಮ ತಾಲ್ಲೂಕಿಗೆ ಸಾಕಷ್ಟು ಹೇಮಾವತಿ ನೀರು ಹರಿಸಿದ್ದೇವೆ. ಈ ಬಗ್ಗೆ ಮುಂದಿನ ದಿನದಲ್ಲಿ ಚರ್ಚೆಯನ್ನು ಮಾಡೋಣ ಎಂದು ಮಾತಿಗೆ ವಿರಾಮ ಎಳೆದು ಮುಂದಿನ ವಿಷಯದ ಬಗ್ಗೆ ಚರ್ಚೆ ಆರಂಭಿಸಿದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.