ನಿರಾಶ್ರಿತ ಕುಟುಂಬಗಳಿಗೆ ಬೆಳಕು ಕಲ್ಪಿಸಿದ ಎಎಸ್‌ಐ ದೊರೆಸ್ವಾಮಿ
Team Udayavani, Jan 7, 2021, 2:39 PM IST
ಎಚ್.ಡಿ.ಕೋಟೆ: ಜೀವನೋ ಪಾಯಕ್ಕಾಗಿ ನೆರೆಯ ಆಂಧ್ರಪ್ರದೇಶದಿಂದ ಆಗಮಿಸಿ ಬಯಲಿನಲ್ಲಿ ಟೆಂಟ್ ಹಾಕಿಕೊಂಡು
ಕಗ್ಗತ್ತಲಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತ ಕುಟುಂಬಗಳಿಗೆ ಸೋಲಾರ್ ಲೈಟ್ ಕಲ್ಪಿಸುವ ಮೂಲಕ ಎಎಸ್‌ಐ ದೊರೆಸ್ವಾಮಿ
ಮಾನವೀಯತೆ ಮೆರೆದಿದ್ದಾರೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆ ಎಎಸ್‌ಐ ದೊರೆಸ್ವಾಮಿ, 10 ಸಾವಿರ ರೂ. ಮೌಲ್ಯದ 3 ಸೋಲಾರ್ ದೀಪಗಳನ್ನು ಕೊಡುಗೆಯಾಗಿ ನೀಡಿ, ನಿರಾಶ್ರಿತರ ಕುಟುಂಬಗಳಿಗೆ ಬೆಳಕು ಮೂಡಿಸಿದ್ದಾರೆ. ಪಟ್ಟಣದಲ್ಲಿ ಒಂದು ವರ್ಷದ ಹಿಂದೆ
ಆಂಧ್ರಪ್ರದೇಶದಿಂದ ಸುಮಾರು 6-7 ಬಡ ಕುಟುಂಬಗಳು 25ಕ್ಕೂ ಅಧಿಕ ಮಂದಿ ಪುಟಾಣಿಗಳೊಟ್ಟಿಗೆ ಟೆಂಟ್ ನಿರ್ಮಿಸಿಕೊಂಡು ನೆಲೆಯೂರಿದ್ದಾರೆ. ತಲೆ ಕೂದಲು ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಈ ಟೆಂಟ್ ಸಮೀಪ ಭಾರೀ ಗಾತ್ರದ ವಿಷ ಪೂರಿತ ಹಾವು ಕಾಣಿಸಿಕೊಂಡಿತ್ತು. ಅಲ್ಲದೇ ಈ ಟೆಂಟ್‌ಗಳು ಬಟಬಯಲಿನಲ್ಲಿ ಹಾಕಿ ರುವುದರಿಂದ ಹುಳಗಳು, ಹಾವು, ಚೇಳುಗಳು ಬರುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ:ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದ ಸಾರಿಗೆ ಸಂಸ್ಥೆ ಚಾಲಕ ಅತ್ಮಹತ್ಯೆ ಯತ್ನ
ಈ ವಿಷಯ ತಿಳಿಯುತ್ತಿದ್ದಂತೆ ಎಎಸ್‌ಐ ದೊರೆ ಸ್ವಾಮಿ ಅವರು ಸ್ಥಳಕ್ಕೆ ಆಗಮಿಸಿ, ನಿರಾಶ್ರಿತ ಕುಟುಂಬಗಳ ದುಸ್ಥಿತಿಯನ್ನು
ಕಂಡು, ತಮ್ಮ ಸ್ವಂತ ಹಣದಿಂದ ಸೋಲಾರ್ ದೀಪ ಹಾಕಿಸಿಕೊಟ್ಟಿದ್ದಾರೆ. ಸಮಾಜಮುಖೀ ಕೆಲಸಗಳ ಮೂಲಕ ಜನ ಮನ್ನಣೆ ಪಡೆದಿರುವ ಎಎಸ್‌ಐ ದೊರೆಸ್ವಾಮಿ ಅವರು ಈ ಹಿಂದೆ ನಾಲ್ಕೈದು ಕಿ.ಮೀ. ಹದಗೆಟ್ಟಿದ್ದ ರಸ್ತೆಯನ್ನು ಸ್ವಂತ ಹಣ ವ್ಯಯಿಸಿ ದುರಸ್ತಿಪಡಿಸಿದ್ದರು.
ಜೊತೆಗೆ ಇಬ್ಬರು ಅನಾಥ ಬಾಲಕಿಯರನ್ನು ದತ್ತು ಪಡೆದು ಅವರ ಶಿಕ್ಷಣವನ್ನು ಸಂಪೂರ್ಣ ಹೊಣೆಯನ್ನು ಹೊತ್ತಿದ್ದಾರೆ.
ಅಲ್ಲದೇ ಈ ಅವರಿಗೆ ಮನೆಯನ್ನು ನವೀಕರಣಗೊಳಿಸಿ, ಆಸರೆಯಾಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಬಡವರಿಗೆ ಆಹಾರ ಕಿಟ್, ಮಾಸ್ಕ್ಗಳನ್ನು ದೊರೆಸ್ವಾಮಿ ಉಚಿತವಾಗಿ ವಿತರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.