ಇನ್‌ಸ್ಟಾಗ್ರಾಂ ಖಾತೆ ಎಚ್ಚರವಿರಲಿ


Team Udayavani, Jan 8, 2021, 6:17 AM IST

ಇನ್‌ಸ್ಟಾಗ್ರಾಂ ಖಾತೆ ಎಚ್ಚರವಿರಲಿ

ಫೇಸ್‌ಬುಕ್‌ ಒಡೆತನದ ಇನ್‌ಸ್ಟಾಗ್ರಾಂ ಇಂದು ಜಗತ್ತಿನೆಲ್ಲೆಡೆ ಹೆಸರುವಾಸಿಯಾಗಿದೆ. ಫೋಟೋ ಶೇರಿಂಗ್‌ ಪ್ಲಾಟ್‌ಫಾರ್ಮ್ ಆಗಿ ಆರಂಭವಾದ ಇನ್‌ಸ್ಟಾಗ್ರಾಂ ಇಂದು ಸಾವಿರಾರು ಕೋಟಿ ಬಳಕೆದಾರರನ್ನು ಹೊಂದುವ ಮೂಲಕ ಬಳಕೆದಾರ ಸ್ನೇಹಿಯಾಗಿ ರೂಪುಗೊಳ್ಳುತ್ತಿದೆ. ಆದರೆ ಕಳೆದ ಕೆಲವು ದಿನಗಳಲ್ಲಿ ಸಾಕಷ್ಟು ಮಂದಿ ಇನ್‌ಸ್ಟಾಗ್ರಾಂನ ಹಕ್ಕು ಸ್ವಾಮ್ಯ ಉಲ್ಲಂಘನೆ ಆರೋಪದಡಿಯಲ್ಲಿ ಮೋಸದ ಜಾಲವೊಂದಕ್ಕೆ ಸಿಲುಕುತ್ತಿದ್ದಾರೆ. ಈ ವಂಚಕ ಜಾಲದ ಮೂಲಕ ಮಾಹಿತಿಯನ್ನು ಕಲೆಹಾಕಿ ನಿಮ್ಮ ಖಾತೆಗೆ ಕನ್ನ ಹಾಕಲಾಗುತ್ತದೆ. ಈ ಹೊಸ ಅಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದು ಹೇಗೆ ನಡೆಯುತ್ತದೆ?
ನಿಮ್ಮ ಇನ್‌ಸ್ಟಾಗ್ರಾಂ ಖಾತೆಗೆ “ಸಹಾಯವಾಣಿ ಕೇಂದ್ರ’ (help center)ಎನ್ನುವ ಐಡಿಯಿಂದ ಸಂದೇಶ (DM) ಬರುತ್ತದೆ. ಇವರು ತಾವು “ಇನ್‌ಸ್ಟಾಗ್ರಾಂ ಹಕ್ಕುಸ್ವಾಮ್ಯ ಉಲ್ಲಂಘನೆ ಕೇಂದ್ರ’ (nstagram/Copyright infringement Center)ಕ್ಕೆ ಸಂಬಂಧಿಸಿದವರು ಎಂದು ಪರಿಚಯಿಸಿಕೊಳ್ಳುತ್ತಾರೆ.

ಏನಿರುತ್ತದೆ ಮೆಸೇಜ್‌ನಲ್ಲಿ?
“ಹಲೋ ಇನ್‌ಸ್ಟಾಗ್ರಾಂ ಬಳಕೆದಾರರೇ, ನಿಮ್ಮ ಖಾತೆಯ ಬಗ್ಗೆ ನಾವು ಬಹಳ ಸಮಯಗಳಿಂದ ದೂರುಗಳನ್ನು ಸ್ವೀಕರಿಸಿದ್ದೇವೆ. ಈ ಬಗ್ಗೆ ನಿಮಗೆ ತಿಳಿಸಲು ನಾವು ಬಯಸಿದ್ದೇವೆ. ನಿಮ್ಮ ಖಾತೆಯನ್ನು ಅಳಿಸುವ ಮೊದಲು, ನೀವು ಪೋಸ್ಟ್‌ ಮಾಡಿದ ಕೆಲವು ಪೋಸ್ಟ್‌ ಗಳು ನಮ್ಮ ಸಮುದಾಯ ಮಾರ್ಗಸೂಚಿ (community guidelines)ಗಳಿಗೆ ವಿರುದ್ಧವಾಗಿವೆ. ಈಗ ನಾವು ನಿಮ್ಮನ್ನು ಸಂಪರ್ಕಿಸಿ ಹೇಳುತ್ತಿರುವ ಮಾಹಿತಿ ಸುಳ್ಳು ಎಂದು ನೀವು ಪರಿಭಾವಿಸುತ್ತೀರಿ ಎಂದಾದರೆ, ನೀವು ನಮಗೆ ಪ್ರತಿಕ್ರಿಯೆ (ಫೀಡ್‌ಬ್ಯಾಕ್‌ )ಯನ್ನು ನೀಡಲೇಬೇಕು. ಇಲ್ಲದಿದ್ದರೆ ನಿಮ್ಮ ಖಾತೆಯನ್ನು 72 ಗಂಟೆಗಳ ಒಳಗೆ ಶಾಶ್ವತವಾಗಿ ಅಳಿಸಲಾಗುತ್ತದೆ’ ಎಂಬ ಮಾಹಿತಿ “ಹೆಲ್ಪ್ ಸೆಂಟರ್‌’ ನಿಂದ ಬರುತ್ತದೆ.

ನಿಮ್ಮ ಇನ್‌ಸ್ಟಾಗ್ರಾಂ ಖಾತೆ ಹೀಗೂ ಹ್ಯಾಕ್‌ ಆಗಬಹುದು!
ಏನೆಲ್ಲ ಮಾಹಿತಿ ಪಡೆಯುತ್ತಾರೆ?

ಹಕ್ಕುಸ್ವಾಮ್ಯ ಮನವಿ ಅರ್ಜಿ (Copyright Appeal Form))ಯನ್ನು ಲಿಂಕ್‌ ರೂಪದಲ್ಲಿ ಸಂದೇಶದೊಂದಿಗೆ ಕಳುಹಿಸಲಾಗುತ್ತದೆ. ಅಸಲಿಗೆ ಇದೊಂದು ಫಿಶಿಂಗ್‌ (ಟಜಜಿsಜಜಿnಜ) ಲಿಂಕ್‌. ಫಿಶಿಂಗ್‌ ಲಿಂಕ್‌ನಲ್ಲಿ ವಿವರಗಳನ್ನು ನೀಡುವಾಗ ನಿಮಗೆ ಸುರಕ್ಷಿತ ವೆಬ್‌ಸೈಟ್‌ಗೆ ನೀಡುತ್ತಿರುವಂತೆ ತೋರುತ್ತದೆ. ಆದರೆ ಅಲ್ಲಿ ನೀಡುವ ವಿವರಗಳು ನೇರವಾಗಿ ಆ ಲಿಂಕ್‌ ರಚಿಸಿದವರ ಅರ್ಥಾತ್‌ ವಂಚಕರ ಬಳಿ ಹೋಗುತ್ತವೆ. ಇನ್‌ಸ್ಟಾಗ್ರಾಂನಲ್ಲಿ ಅವರು ಕಳಿಸುವ ಲಿಂಕ್‌ ನಿಮ್ಮ ಪಾಸ್‌ವರ್ಡ್‌, ಹುಟ್ಟಿದ ದಿನಾಂಕ ಮೊದಲಾದ ವಿವರಗಳನ್ನು ನಮೂದಿಸಲು ಕೇಳುತ್ತದೆ.

ಈ ಮಾಹಿತಿಗಳನ್ನು ಏನು ಮಾಡಲಾಗುತ್ತದೆ?
ಈ ವಿವರಗಳನ್ನು ಬಳಸಿ ಅವರು ನಿಮ್ಮ ಖಾತೆಗೆ ಲಾಗ್‌ ಇನ್‌ ಆಗಿ, ನೀವು ರಚಿಸಿದ ಮೂಲ ಪಾಸ್‌ವರ್ಡ್‌ ಅನ್ನು ಬದಲಿ ಸುತ್ತಾರೆ. ಅಲ್ಲಿಗೆ ನಿಮ್ಮ ಖಾತೆ ಕೈತಪ್ಪಿ ಹೋಗುತ್ತದೆ. ಖಾತೆಯ ಸಂಪೂರ್ಣ ಹಕ್ಕು ವಂಚಕರ ಕೈಯಲ್ಲಿರುತ್ತದೆ. ಇದ ರಿಂದ ಅವರು ನಿಮ್ಮ ಖಾತೆಯ ಹೆಸರನ್ನೂ ಬದಲಾಯಿಸಬಹುದು. ಅಥವಾ ನಿಮ್ಮ ಹೆಸರನ್ನು ದುರ್ಬಳಕೆ ಮಾಡಿ ನಿಮ್ಮ ಖಾತೆ ಯಲ್ಲಿರುವ ಫಾಲೋವರ್ಸ್‌ ಬಳಿ ನಿಮ್ಮ ಹೆಸರಲ್ಲಿ ಹಣಕ್ಕೂ ಬೇಡಿಕೆ ಇಡಬಹುದು. ಇಂತಹ ಪ್ರಕರಣಗಳೂ ಹೆಚ್ಚುತ್ತಿವೆ.

ಯಾರು ಇವರ ಟಾರ್ಗೆಟ್‌
ಸಾಮಾನ್ಯವಾಗಿ ಇವರು ಸಾಮಾಜಿಕ ಜಾಲತಾಣಗಳಲ್ಲಿ ಅತಿಯಾಗಿ ಚಟುವಟಿ ಕೆಯಿಂದ ಕೂಡಿರುವವರನ್ನು ಈ ಕಾರ್ಯ ಗಳಿಗೆ ಬಳಸಿಕೊಳ್ಳುತ್ತಾರೆ. ಹೆಚ್ಚಾಗಿ ಸೆಲೆಬ್ರೆಟಿಗಳು, ಮಾಧ್ಯಮಗಳ ಖಾತೆಗಳ ಮೇಲೆ ಇವರ ಕಣ್ಣಿರುತ್ತದೆ. ಹಾಗೆಂದು ಇತರರ ಖಾತೆಗಳ ಮೇಲೆ ಕಣ್ಣಿಡಲ್ಲ ಎಂದರ್ಥವಲ್ಲ.

ಫಿಶಿಂಗ್‌ ಲಿಂಕ್‌ ಎಂದರೇನು?
ಫಿಶಿಂಗ್‌ ಲಿಂಕ್‌ ಎಂಬುದು ಮೋಸಗಾರರು ತಮ್ಮ ಕೈಚಳಕ ತೋರಿಸಲು ರಚಿಸುವ ಲಿಂಕ್‌. ಈ ಲಿಂಕ್‌ಗಳು ನಮ್ಮ ವೈಯಕ್ತಿಕ ವಿವರ ಗಳನ್ನು ಸುರಕ್ಷಿತ ವೆಬ್‌ಸೈಟ್‌ನಲ್ಲಿ ನಮೂದಿಸುತ್ತಿದ್ದೀರಿ ಎಂದು ಪರಿಭಾವಿ ಸುವಂತೆ ಮಾಡುತ್ತದೆ. ಇಲ್ಲಿ ನಾವು ನೋಂದಾಯಿಸುವ ಪ್ರತೀ ಅಕ್ಷರಗಳು ಬಳಿಕ ಅವರ ಸೊತ್ತು. ಯುಆರ್‌ಎಲ್‌ ವಿಳಾಸವು ‘ಜಠಿಠಿಟs’ ಅನ್ನು ಹೊಂದಿದೆ ಎಂದು ವಂಚಕರು ಖಚಿತಪಡಿಸಿ,ಇದು ಸುರಕ್ಷಿತ ತಾಣ ಎಂದು ನಂಬಿಸುತ್ತಾರೆ.

ಏನು ಮಾಡಬೇಕು?
ಈ ರೀತಿಯ ಮೋಸಗಳಿಂದ ತಪ್ಪಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ ಇಂತಹ ವಂಚನೆಗಳ ಬಗ್ಗೆ ತಿಳಿದಿರುವುದು ಉತ್ತಮ. ನಿಮಗೆ ಈ ರೀತಿಯ ಸಂದೇಶ ಗಳು ಬಂದಲ್ಲಿ ಅದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಬೇಡಿ. ಆ ಸಂದೇಶವನ್ನು ಡಿಲೀಟ್‌ ಮಾಡಿ. ನೀವು ಈಗಾಗಲೇ ಲಿಂಕ್‌ ಒತ್ತಿ ನಿಮ್ಮ ಖಾತೆಗೆ ಪ್ರವೇಶ ಕಳೆದುಕೊಂಡಿದ್ದಲ್ಲಿ ಇನ್‌ಸ್ಟಾಗ್ರಾಂಗೆ ದೂರು ನೀಡಬಹುದು. ಸೈಬರ್‌ ಪೊಲೀಸ್‌ಗೂ ಮಾಹಿತಿ ನೀಡಿ, ಪಾಸ್‌ವರ್ಡ್‌ ಬದಲಿಸಿ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.