ಡಕರ್ ರೇಸ್: ಗಂಭೀರ ಅಪಘಾತ, ಕೋಮಾದಲ್ಲಿ ಬೆಂಗಳೂರಿನ ಸಂತೋಷ್
Team Udayavani, Jan 8, 2021, 9:02 AM IST
ರಿಯಾಧ್: ಭಾರತದ ಪ್ರಖ್ಯಾತ ಬೈಕ್ ರೇಸರ್, ಬೆಂಗಳೂರಿನ ಸಿ.ಎಸ್.ಸಂತೋಷ್, ಡಕರ್ ರ್ಯಾಲಿಯಲ್ಲಿ ಬೈಕ್ ಓಡಿಸುವಾಗ ಗಂಭೀರ ಅಪಘಾತಕ್ಕೆ ತುತ್ತಾಗಿದ್ದಾರೆ. ಸದ್ಯ ಸೌದಿ ಅರೇಬಿಯದ ರಿಯಾಧ್ನಲ್ಲಿರುವ ಆಸ್ಪತ್ರೆಗೆ ರ್ಯಾಲಿ ಸಂಘಟಕರರು ಅವರನ್ನು ದಾಖಲಿಸಿದ್ದು, ಕೋಮಾಕ್ಕೆ ಜಾರಿದ್ದಾರೆ. 2021ರ ಡಕರ್ ರ್ಯಾಲಿ ಜ.2ರಿಂದ 16ರವರೆಗೆ ಸೌದಿ ಅರೇಬಿಯದಲ್ಲಿ ನಡೆಯುತ್ತಿದೆ.
ಸಂತೋಷ್ ಹೀರೊ ಮೋಟೊಸ್ಪೋರ್ಟ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಪ್ರಸ್ತುತ 4ನೇ ಹಂತ ಚಾಲ್ತಿಯಲ್ಲಿದ್ದು, 43ನೇ ಸ್ಥಾನಿಯಾಗಿ ಸಂತೋಷ್ ಸ್ಪರ್ಧೆ ಆರಂಭಿಸಿದ್ದರು. ಡಕರ್ ರ್ಯಾಲಿ ರಸ್ತೆಯ ಬದಲಾಗಿ ಬೆಟ್ಟಗುಡ್ಡ, ಮರಳುಗಾಡಿನಂತಹ ಪ್ರದೇಶಗಳಲ್ಲಿ ನಡೆಯುವ, ವಿಶ್ವದ ಅತ್ಯಂತ ಕಠಿಣ ಬೈಕ್ ಸ್ಪರ್ಧೆ. ಈ ಬಾರಿ ಒಟ್ಟು 12 ಸುತ್ತುಗಳಲ್ಲಿ 7646 ಕಿ.ಮೀ. ದೂರ ಸಂಚರಿಸಬೇಕಾಗಿದೆ. ಇದರಲ್ಲಿ ಭಾಗವಹಿಸಿದ ದೇಶದ ಮೊದಲ ಸ್ಪರ್ಧಿ ಸಂತೋಷ್.
2015ರಲ್ಲಿ ಅವರು ಮೊದಲ ಬಾರಿಗೆ ಸ್ಪರ್ಧಿಸಿದ್ದರು. 2013ರಲ್ಲಿ ನಡೆದ ಅಬುಧಾಬಿ ಸ್ಪರ್ಧೆಯಲ್ಲಿ ಅವರು ಓಡಿಸಿದ್ದ ಬೈಕ್ಗೆ ಬೆಂಕಿ ತಗುಲಿ, ಕುತ್ತಿಗೆ ಸುಟ್ಟುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ: ಪಂತ್ ಬದಲು ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್; ರಿಷಭ್ ಪಂತ್ ಗೆ ಏನಾಗಿದೆ?
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
MUST WATCH
ಹೊಸ ಸೇರ್ಪಡೆ
Belagavi: ಸುವರ್ಣ ವಿಧಾನಸೌಧಕ್ಕೆ ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಭೇಟಿ
Bengaluru: ರಾಜಧಾನಿಯ ಬೀದಿ ನಾಯಿಗಳಿಗೆ ಅಕ್ಕರೆಯ ತುತ್ತು
Video: ನಿಮಗೆ ಮತ ಹಾಕಿದ್ದೇನೆ, ನನಗೊಂದು ಮದುವೆ ಮಾಡಿಸಿ.. ಶಾಸಕರ ಬಳಿ ಮನವಿ ಮಾಡಿದ ವ್ಯಕ್ತಿ
Bengaluru: ಎಎಸ್ಐ ಶಿವಶಂಕರಾಚಾರಿ ಹೃದಯಾಘಾತದಿಂದ ಸಾವು
Mangaluru: ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದ ಸಂಚಾರ: ಅಪಘಾತಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.