ಸಿಡ್ನಿಯಲ್ಲಿ ಸಮಬಲದ ಹೋರಾಟ: ಗಿಲ್ ಅರ್ಧಶತಕ, ರೋಹಿತ್ ನಿರಾಸೆ
Team Udayavani, Jan 8, 2021, 1:15 PM IST
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸುತ್ತಿದೆ. ಸದ್ಯ ದ್ವಿತೀಯ ದಿನದಾಟದ ಅಂತ್ಯಕ್ಕೆ ಭಾರತ ತಂಡ ಎರಡು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ.
ಹೊಸ ಆರಂಭಿಕ ಜೋಡಿಯೊಂದಿಗೆ ಕಣಕ್ಕಿಳಿದ ಭಾರತ ತಂಡಕ್ಕೆ ಉತ್ತಮ ಆರಂಭವೇ ಸಿಕ್ಕಿತು. ರೋಹಿತ್- ಗಿಲ್ ಮೊದಲ ವಿಕೆಟ್ ಗೆ 70 ರನ್ ಒಟ್ಟುಗೂಡಿಸಿದರು. ಯುವ ಆಟಗಾರ ಶುಭ್ಮನ್ ಗಿಲ್ ತಮ್ಮ ಮೊದಲ ಅರ್ಧಶತಕ ಬಾರಿಸಿದರು. ಆದರೆ ರೋಹಿತ್ ಶರ್ಮಾ 26 ರನ್ ಗಳಿಸಿ ಔಟಾಗಿ ನಿರಾಸೆ ಮೂಡಿಸಿದರು.
ಸದ್ಯ ಪೂಜಾರ (9 ರನ್) ಮತ್ತು ನಾಯಕ ರಹಾನೆ (5 ರನ್) ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದೆ. ಭಾರತ ಸದ್ಯ 242 ರನ್ ಹಿನ್ನಡೆಯಲ್ಲಿದೆ.
ಆಸೀಸ್ 338 ರನ್
ಈ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 105.4 ಓವರ್ ನಲ್ಲಿ 338 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಮಿತ್ 131 ರನ್ ಗಳಿಸಿದರೆ, ಮಾರ್ನಸ್ ಲಬುಶೇನ್ 91 ರನ್ ಗೆ ಔಟಾಗಿ ಶತಕ ವಂಚಿತರಾದರು.
ಇದನ್ನೂ ಓದಿ:ವಿಶ್ವದಾಖಲೆ ಬರೆದ ಯಶ್ ‘ಕೆಜಿಎಫ್ ಚಾಪ್ಟರ್-2’ ಟೀಸರ್
ಎರಡು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದ್ದಲ್ಲಿಂದ ಇಂದು ಬ್ಯಾಟಿಂಗ್ ಮುಂದುವರಿಸಿದ ಕಾಂಗರೂಗಳಿಗೆ ಸ್ಮಿತ್ ಮತ್ತು ಲಬುಶೇನ್ ಆಧಾರವಾದರು. ನಂತರ ಬಂದ ಮ್ಯಾಥ್ಯೂ ವೇಡ್ ಮತ್ತು ಕ್ಯಾಮರೂನ್ ಗ್ರೀನ್, ಟಿಮ್ ಪೇನ್, ಪ್ಯಾಟ್ ಕಮಿನ್ಸ್ ಬೇಗನೇ ವಿಕೆಟ್ ಒಪ್ಪಿಸಿದರು.
ಭಾರತದ ಪರ ರವೀಂದ್ರ ಜಡೇಜಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಬುಮ್ರಾ ಮತ್ತು ಸೈನಿ ತಲಾ ಎರಡು ವಿಕೆಟ್ ಪಡೆದರೆ, ಸಿರಾಜ್ ಒಂದು ವಿಕೆಟ್ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.