ರಾಕಿಬಾಯ್ ಕೆಜಿಎಫ್ 2 ಸಿನಿಮಾ ಟೀಸರ್ ನೋಡಿ ಫಿದಾ ಆದ ಹೃತಿಕ್
Team Udayavani, Jan 8, 2021, 10:30 PM IST
ನವದೆಹಲಿ: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ 2 ನ ಟೀಸರ್ ಬಿಡುಗಡೆಗೊಂಡಿದ್ದು ಹಲವು ದಾಖಲೆಗಳೊಂದಿಗೆ ವಿಶ್ವ ದಾಖಲೆಯ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈ ಟೀಸರ್ ಬಿಡುಗಡೆ ನಂತರ ಹಲವು ಭಾಷೆಯ ತಾರೆಯರು ಟೀಸರ್ ಅನ್ನು ಹೊಗಳಿ ಕೊಂಡಾಡಿದ್ದು, ಈ ಸಾಲಿನಲ್ಲಿ ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಕೂಡಾ ಫಿದಾ ಆಗಿದ್ದಾರೆ.
ಕೆ.ಜಿ.ಎಫ್ 2 ನ ಟೀಸರ್ ವೀಕ್ಷಿಸಿದ ಬಳಿಕ ಟ್ಟೀಟ್ ಮಾಡಿರುವ ನಟ ಹೃತಿಕ್ ವಾಟ್ ಎ ಗ್ರೆಟರ್ ಟ್ರೈಲರ್ ಎಂಬುದಾಗಿ ಬರೆದುಕೊಂಡಿದ್ದು, ಸಿನಿಮಾತಂಡಕ್ಕೆ ತನ್ನ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮತ್ತು ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮ ದಿನಾಚರಣೆಗೆ ತಮ್ಮ ಶುಭಾಶಯಗಳನ್ನು ತಿಳಿಸಿರುವ ಇವರು ಇಂತಹ ಅದ್ಭುತ ಸಿನಿಮಾದಲ್ಲಿ ನಾಯಕನಾಗಿರುವ ಯಶ್ ಅವರಿಗೆ ಅಭಿನಂದನೆಗಳು ಎಂದು ಹೊಗಳಿದ್ದಾರೆ.
ಇದನ್ನೂ ಓದಿ:ಬೀದರ್ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗೆ ಕೋವಿಡ್ ಸೋಂಕು ದೃಢ ; ಶಾಲೆಗೆ ರಜೆ
ಈ ನಡುವೆ ಬಿ ಟೌನ್ ನ ಖ್ಯಾತ ನಟರಾಗಿರುವ ಸಂಜಯ್ ದತ್ ಅವರು ನಟಿಸಿರುವ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿ ಈ ಟೀಸರ್ ಅನ್ನು ಹೆಚ್ಚು ಆಸಕ್ತಿಯಿಂದ ನೋಡುತ್ತಿದ್ದಾರಾ? ಅಥವಾ ಪ್ರಶಾಂತ್ ನೀಲ್ ಅವರ ಮೇಕಿಂಗ್ ಎಲ್ಲರನ್ನೂ ಸೆಳೆಯುತ್ತಿದೆಯಾ? ಎಂಬಿತ್ಯಾದಿ ಸುದ್ದಿಗಳ ನಡುವೆ ಮುಂದೆ ಚಿತ್ರತಂಡ ಕೆ.ಜಿ.ಎಫ್ 3 ಸಿನಿಮಾ ಮಾಡಿದರೆ ಅದರಲ್ಲಿ ಹೃತಿಕ್ ಅವರು ಕಾಣಿಸಿಕೊಳ್ಳಲಿದ್ದಾರಂತೆ ಎಂಬ ಗುಸು ಗುಸು ಸುದ್ದಿಗಳು ಸಾಮಾಜಿಕ ಜಾಳತಾಣಗಳಲ್ಲಿ ಹರಿದಾಡುತ್ತಿದೆ.
ಬಿಡುಗಡೆಗೆ ನಿಗದಿಯಾದ ಸಮಯಕ್ಕಿಂತ ಮೊದಲೇ ಸಿನಿಮಾದ ಟೀಸರ್ ಲೀಕ್ ಆದ ಹಿನ್ನಲೆಯಲ್ಲಿ ಗುರುವಾರ(ಜ.7) ರ ರಾತ್ರಿಯೇ ಟೀಸರ್ ಬಿಡುಗಡೆಗೊಂಡಿದ್ದು, ಬಿಡುಗಡೆಯಾದ ಕೇವಲ 10 ಗಂಟೆ 30 ನಿಮಿಷದಲ್ಲಿ ಎರಡು ಮಿಲಿಯನ್ ಯೂಟ್ಯೂಬ್ ಲೈಕ್ಸ್ ಪಡೆಯುವ ಮೂಲಕ ಅತೀ ವೇಗವಾಗಿ ಯೂಟ್ಯೂಬ್ ನಲ್ಲಿ ಎರಡು ಮಿಲಿಯನ್ ಲೈಕ್ ಪಡೆದ ಭಾರತದ ಮೊದಲ ಟೀಸರ್ ಎಂಬ ದಾಖಲೆಗೆ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಪಾತ್ರವಾಗಿದ್ದು, ಬಿಡುಗಡೆಯಾದ 24 ಗಂಟೆಗಳಲ್ಲಿ 7 ಕೋಟಿ ವ್ಯೂಸ್ ಗಳನ್ನು ಪಡೆದುಕೊಂಡಿದೆ.
.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.