ಇಂದು ಅನಿವಾಸಿ ಭಾರತೀಯ ದಿನ
Team Udayavani, Jan 9, 2021, 8:00 AM IST
ಸಾಂದರ್ಭಿಕ ಚಿತ್ರ
ಇಂದು 18ನೇ ಪ್ರವಾಸಿ ಭಾರತೀಯ ದಿವಸ್ ಅಂದರೆ ಅನಿವಾಸಿ ಭಾರತೀಯರ(ಎನ್‌ಆರ್‌ಐ) ದಿನ ಎಂದೂ ಕರೆಯಲಾಗುತ್ತದೆ. ಈ ದಿನದಂದು ದೇಶದ ಅಭಿವೃದ್ಧಿಗೆ ಸಾಗರೋತ್ತರ ಭಾರತೀಯರು ನೀಡುತ್ತಿರುವ ಕೊಡುಗೆಯನ್ನು ಗುರುತಿಸಲಾಗುತ್ತದೆ.
ಯಾವತ್ತು ಆರಂಭ? :
ಮೊದಲ ಪ್ರವಾಸಿ ಭಾರತೀಯ ದಿವಸ್ ಅನ್ನು 2003ರಲ್ಲಿ ಆಚರಿಸಲಾಯಿತು. ದೇಶದ ಅಭಿವೃದ್ಧಿಗೆ ಸಹಕರಿಸುತ್ತಿರುವ ಸಾಗರೋತ್ತರ ಭಾರತೀಯರಿಗೆ “ಪ್ರವಾಸಿ ಭಾರತೀಯ ಸಮ್ಮಾನ್’ ಪ್ರಶಸ್ತಿಯನ್ನು ನೀಡಲಾಯಿತು. ಆರು ವರ್ಷಗಳ ಅನಂತರ ಸಾಗರೋತ್ತರ ಭಾರತೀಯ ನಾಗರಿಕ(ಒಸಿಐ)ರ ಪರಿಕಲ್ಪನೆಯನ್ನು ಪ್ರಾರಂಭಿಸಲಾಯಿತು. ಇದು ಭಾರತೀಯ ಮೂಲದ ಜನರು ಮತ್ತು ಅವರ ಸಂಗಾತಿಗಳು ಅನಿರ್ದಿಷ್ಟವಾಗಿ ದೇಶದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
ಈ ವರ್ಷದ ಧ್ಯೇಯವೇನು? :
ಈ ವರ್ಷ ಪ್ರವಾಸಿ ಭಾರತೀಯ ದಿವಸ್ ವರ್ಚುವಲ್ ರೂಪವನ್ನು ಪಡೆದುಕೊಂಡಿದೆ. ಈ ವರ್ಷ “ಆತ್ಮನಿರ್ಭರ ಭಾರತಕ್ಕೆ ಕೊಡುಗೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಪ್ರವಾಸಿ ಭಾರತೀಯ ದಿವಸ್ 2021 ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿ¨ªಾರೆ. ಕೊರೊನೋತ್ತರ ಸವಾಲುಗಳನ್ನು ಎದುರಿಸಲು ಇರುವ ಸಮಗ್ರ ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ಕುರಿತು ಚರ್ಚೆಗಳು ನಡೆಯಲಿವೆ.
ತಾಯ್ನಾಡಿಗೆ ವೀಸಾ ಬೇಕಾ? :
ಯಾವುದೇ ವ್ಯಕ್ತಿ ಭಾರತೀಯ ಮೂಲದವನಾಗಲು ಕನಿಷ್ಠ 240 ದಿನಗಳು ಭಾರತದಲ್ಲಿ ವಾಸಿಸಬೇಕು. ಇಲ್ಲವಾದಲ್ಲಿ ಅವರನ್ನು ಎನ್‌ಆರ್‌ಐ ಎಂದು ಪರಿಗಣಿಸಲಾಗುತ್ತದೆ. ಸರಕಾರ ಇವರ ಮೂಲ ಮತ್ತು ತಲೆಮಾರಿನವರ ಮೂಲವನ್ನು ಪರೀಕ್ಷಿಸಿ ಅವರಿಗೆ ಪಿಐಒ ಎಂಬ ಗುರುತಿನ ಚೀಟಿ ನೀಡುತ್ತದೆ. ಈ ಚೀಟಿ ಇದ್ದಲ್ಲಿ ವೀಸಾ ಇಲ್ಲದೆ ಭಾರತಕ್ಕೆ ಪ್ರವೇಶಿಸಬಹುದಾಗಿದೆ.
ಸದ್ಯದ ಅಂಕಿಅಂಶಗಳ ಪ್ರಕಾರ 110 ದೇಶಗಳಲ್ಲಿ 3.5 ಕೋಟಿ ಭಾರತೀಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಯಾಕೆ ಈ ದಿನ? :
ಎನ್‌ಆರ್‌ಐ ದಿವಸ್ ದೇಶದ ಅಭಿವೃದ್ಧಿಗೆ ಸಹಕರಿಸುತ್ತಿರು ವವರ ನ್ನು ಗೌರವಿಸುವ ದಿನವಾಗಿದೆ. ಅಂಥವರನ್ನು ಕೇಂದ್ರ ಸರಕಾರ ಗುರುತಿಸಿ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತದೆ. ಎನ್‌ಆರ್‌ಐ ಮತ್ತು ಭಾರತೀಯ ಮೂಲದ ವ್ಯಕ್ತಿ (ಪಿಐಒ)ಗಳ ಕೊಡುಗೆಗಳನ್ನು ಗುರುತಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ಕೈಗಾರಿಕಾಒಕ್ಕೂಟ (ಸಿಐಐ) ಪ್ರಾಯೋಜಿಸುತ್ತಿದೆ.
ಜನವರಿ 9 ಯಾಕೆ ? :
ಮಹಾತ್ಮಾ ಗಾಂಧೀಜಿ ಅವರು 1915ರ ಜ. 9ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ದಿನವಾಗಿದೆ. ಹೀಗಾಗಿ ಈ ದಿನವನ್ನು ನೆನಪಿಸಿಕೊಳ್ಳುವ ಸಲುವಾಗಿ ಅನಿವಾಸಿ ಭಾರತೀಯ ದಿನ ಆಚರಿಸಲಾಗುತ್ತದೆ. ಭಾರತಕ್ಕೆ ಮರಳಿದ ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು.
ಅನಿವಾಸಿ ಎಂದರೆ ಯಾರು? :
ಅನಿವಾಸಿ ಭಾರತೀಯ (ಎನ್‌ಆರ್‌ಐ) ಎಂದರೆ ವಿದೇಶದಲ್ಲಿ ಕೆಲಸ ಅಥವಾ ವಾಸ ಅಥವಾ ಇತರ ಯಾವುದೇ ಉದ್ದೇಶಕ್ಕಾಗಿ ತಾತ್ಕಾಲಿಕವಾಗಿ ನೆಲೆಸಿದ್ದರೆ ಅಥವಾ ವಲಸೆ ಹೋಗಿದ್ದರೆ ಅಂಥವರನ್ನು ಅನಿವಾಸಿಗಳು ಎಂದು ಕರೆಯುತ್ತಾರೆ. ಇಲ್ಲಿ ಆ ವ್ಯಕ್ತಿ ಅಥವಾ ಆತನ ಪೂರ್ವಿಕರು ಭಾರತದಲ್ಲಿ ಹುಟ್ಟಿ ಬೇರೆ ದೇಶದ ನಾಗರಿಕರಾಗಿದ್ದರೆ ಅವರನ್ನೂ ಅನಿವಾಸಿ ಭಾರತೀಯ ಎಂದೇ ಕರೆಯಲಾಗುತ್ತದೆ.
ಯಾರೆಲ್ಲ ಎನ್‌ಆರ್‌ಐ? :
ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗಿ ಅಲ್ಲಿನ ಸಂಪಾದನೆ ಹಾಗೂ ಐಷಾರಾಮಿ ಬದುಕಿಗೆ ಹೊಂದಿಕೊಂಡು ಅನೇಕ ಭಾರತೀಯರು ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಭಾರತೀಯರನ್ನು ವಿದೇಶಿ ವಧು/ವರ ಅಥವಾ ವಿದೇಶಿಗರನ್ನು ಭಾರತೀಯರು ವಿವಾಹವಾದರೂ ಅವರೂ ಸಹ ಅನಿವಾಸಿ ಭಾರತೀಯರಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ಬೆಳಕು ಮೂಡುತಿದೆ, ಬಂಗಾರದ ರಥವೇರುತ;ಆಶಾವಾದದ ಆಶಯದಿಂದ ಬರಮಾಡಿಕೊಳ್ಳೋಣ ನವ ಯುಗವನ್ನು
ಅಬುಧಾಬಿ ಹಿಂದೂ ಮಂದಿರದಲ್ಲಿ ಪ್ರಥಮ ದೀಪಾವಳಿ ಸಂಭ್ರಮ
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.