ಉತ್ತರ ಧ್ರುವದಿಂದ ಬೆಂಗಳೂರು ಅಂಗಳಕ್ಕೆ ವಿಮಾನ ಆಗಮನ
Team Udayavani, Jan 9, 2021, 6:00 AM IST
ಹೊಸದಿಲ್ಲಿ: ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಸಂಚಾರ ನಡೆಸಲಿರುವ ಏರ್ ಇಂಡಿಯಾ ವಿಮಾನ ಉತ್ತರ ಧ್ರುವ ಮೂಲಕ ಹಾರಾಟ ನಡೆಸಲಿದೆ. ವಿಶ್ವದ ಅತ್ಯಂತ ಹೆಚ್ಚಿನ ದೂರ, 16 ಸಾವಿರ ಕಿಮೀ ಪ್ರಯಾಣ ಮಾಡುವ ಮೂಲಕ ಜ.9ರಂದು ಬೆಂಗಳೂರಿಗೆ ಆಗಮಿ ಸಲಿದೆ. ಅದರ ಮತ್ತೂಂದು ವಿಶೇಷತೆ ಏನೆಂದರೆ ಪೂರ್ಣ ಪ್ರಮಾಣದಲ್ಲಿ ಮಹಿಳಾ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅವರಿಗೆ ಕ್ಯಾ| ಝೋಯಾ ಅಗರ್ವಾಲ್ ನಾಯಕಿ. ಈ ಬಗ್ಗೆ ಹೇಳಿಕೆ ನೀಡಿರುವ ಏರ್ ಇಂಡಿಯಾ “ಉತ್ತರ ಧ್ರುವದ ಮೇಲೆ ಹಾರಾಟ ನಡೆಸುವುದು ವಿಮಾನದ ಸಿಬ್ಬಂದಿಯ ಅನುಭವ ಮತ್ತು ಪರಿಣತಿಯನ್ನು ಒರೆಗೆ ಹಚ್ಚುತ್ತದೆ’ ಎಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಯಾ| ಝೋಯಾ “ಇದು ನಿಜಕ್ಕೂ ಹೆಮ್ಮೆಯ ವಿಚಾರ. ನನ್ನ ಮೇಲೆ ನಂಬಿಕೆ ಇರಿಸಿ ನಾಗರಿಕ ವಿಮಾನಯಾನ ಸಚಿವಾಲಯ ನೀಡಿದ ಹೊಣೆಯನ್ನು ನಿಭಾಯಿಸಲಿದ್ದೇನೆ. ಸ್ಯಾನ್‌ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ಬೋಯಿಂಗ್ 777ನ ಆರಂಭಿಕ ವಿಮಾನವನ್ನು ದೂರದ ಸಂಚಾರ ದಾರಿಯ ಮೂಲಕ ಹಾರಿಸಿಕೊಂಡು ಬರುವುದು ಹೆಮ್ಮೆ’ ಎಂದಿದ್ದಾರೆ. 2013ರಲ್ಲಿ ಬೋಯಿಂಗ್ 777 ವಿಮಾನವನ್ನು ಹಾರಿಸಿದ ಹೆಗ್ಗಳಿಕೆಯೂ ಝೋಯಾಗೆ ಇದೆ. ಜತೆಗೆ ಉತ್ತರ ಧ್ರುವದ ಮೂಲಕ ವಿಮಾನ ಹಾರಿಸಿದ ಮೊದಲ ಮಹಿಳಾ ಕಮಾಂಡರ್ ಎನ್ನುವ ಹಿರಿಮೆಯೂ ಅವರದ್ದಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್; ತಪ್ಪಿದ ಅನಾಹುತ
Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ
Moodbidri: ಆಳ್ವಾಸ್‌ನಲ್ಲಿ ದೀಪಾವಳಿ ಸಂಭ್ರಮ; ಸಂಪ್ರದಾಯ , ಸಂಸ್ಕೃತಿಯ ಅನಾವರಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.