ಲಾವಾದಿಂದ ಜಗತ್ತಿನ ಮೊಟ್ಟ ಮೊದಲ ಕಸ್ಟಮೈಸೇಬಲ್ ಸ್ಮಾರ್ಟ್ ಪೋನ್ ಬಿಡುಗಡೆ
ಬಳಕೆದಾರರು ತಮ್ಮ ಇಚ್ಛೆಗೆ ಅನುಗುಣವಾಗಿ ಮೊಬೈಲ್ ಪೋನಿನ ಬಿಡಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದದ ಸೌಲಭ್ಯವನ್ನು ನೀಡಿದೆ.
Team Udayavani, Jan 9, 2021, 8:00 PM IST
ನವದೆಹಲಿ: ದೇಶದ ಜನರು ಮೇಡ್ ಇನ್ ಇಂಡಿಯಾ , ಆತ್ಮ ನಿರ್ಭರ ಭಾರತ ಕಲ್ಪನೆಗಳ ಪಣತೊಟ್ಟಿರುವ ಬೆನ್ನಲ್ಲೆ ದೇಶಿ ನಿರ್ಮಿತ ಹಲವು ಕಂಪನಿ ಗಳು ಕಾರ್ಯಪ್ರವೃತ್ತವಾಗಿದೆ ಆ ನಿಟ್ಟಿನಲ್ಲಿ ಕೆಲ ದಿನಗಳ ಹಿಂದೆಯಷ್ಟೆ ದೇಶಿಯ ಕಂಪನಿ ಮೈಕ್ರೋಸಾಫ್ಟ್ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಮರುಸ್ಥಾಪಿಸಿಕೊಂಡಿತ್ತು. ಇದೀಗ ಅದೇ ಹಾದಿಯಲ್ಲಿ ಇನ್ನೊಂದು ದೇಶೀಯ ಸ್ಮಾರ್ಟ್ ಪೋನ್ ಕಂಪನಿಯಾದ ಲಾವಾ ಕೂಡಾ ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.
ದೇಶದ ಜನರಿಗಾಗಿ ಲಾವಾ ಕಸ್ಟಮೈಸೇಬಲ್ ಸ್ಮಾರ್ಟ್ ಪೋನ್ ಅನ್ನು ಬಿಡುಗಡೆಗೊಳಿಸಿದೆ. ಆ ಮೂಲಕ ಬಳಕೆದಾರರು ತಮ್ಮ ಇಚ್ಛೆಗೆ ಅನುಗುಣವಾಗಿ ಮೊಬೈಲ್ ಪೋನಿನ ಬಿಡಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದಾದ ಸೌಲಭ್ಯವನ್ನು ನೀಡಿದೆ.
ಈ ವಿಧವಾದ ಸೌಲಭ್ಯವನ್ನು ಈ ವರೆಗೂ ಯಾವುದೇ ಮೊಬೈಲ್ ಪೋನ್ ಕಂಪೆನಿಗಳು ನೀಡಿಲ್ಲವಾದ್ದರಿಂದ ಈ ವಿಧದ ಕಸ್ಟಮೈಸೇಬಲ್ ಸ್ಮಾರ್ಟ್ ಪೋನ್ ಅನ್ನು ಪರಿಚಯಿಸುತ್ತಿರುವ ಜಗತ್ತಿನ ಮೊದಲ ಮೊಬೈಲ್ ಪೋನ್ ಕಂಪನಿ ಎಂಬ ಹೆಗ್ಗಳಿಕೆಗೆ ಲಾವಾ ಪಾತ್ರವಾಗಲಿದೆ.
ಈ ಸೌಲಭ್ಯದ ಮೂಲಕ ಬಳಕೆದಾರರು ಕ್ಯಾಮರಾ, ಸ್ಟೋರೇಜ್ ,RAM ,ಬಣ್ಣಗಳನ್ನು ಒಳಗೊಂಡಂತೆ ಒಟ್ಟು 66 ಆಯ್ಕೆ ಅವಕಾಶ ಮಾಡಿಕೊಟ್ಟಿದೆ ಎನ್ನಲಾಗಿದೆ.
ಇದನ್ನೂ ಓದಿ:ಸಿದ್ದರಾಮಯ್ಯ ಸುಳ್ಳು ಭವಿಷ್ಯಗಾರ : ಡಿಸಿಎಂ ಗೋವಿಂದ ಕಾರಜೋಳ ಆರೋಪ
ಈ ಕುರಿತು ಲಾವಾ ಇಂಟರ್ ನ್ಯಾಷನಲ್ ಪ್ರೆಸಿಡೆಂಟ್ ಮತ್ತು ಬಿಸಿನೆಸ್ ಹೆಡ್ ಆಗಿರುವ ಸುನಿಲ್ ರೈನಾ ಅವರು ಮಾಹಿತಿ ನೀಡಿದ್ದು, ಈ ಸ್ಮಾರ್ಟ್ ಪೋನ್ ಅನ್ನು ಭಾರತೀಯ ಪ್ರತಿಭೆಗಳಿಂದ ವಿನ್ಯಾಸ ಗೊಳಿಸಲಾಗಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಬಳಕೆದಾರರು ತಮ್ಮ ಪೋನ್ ಅನ್ನು ಅಪ್ ಗ್ರೇಡ್ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ. ಸ್ಟೋರೇಜ್ ,RAM , ಬಣ್ಣಗಳನ್ನು ಒಳಗೊಂಡಂತೆ ಹಲವಾರು ಕಾಂಪೋನೆಂಟ್ ಗಳನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಈ ಕಸ್ಟಮೈಸ್ಡ್ ಸ್ಮಾರ್ಟ್ ಪೋನ್ ಗಳ ಜೊತೆಯಲ್ಲಿಯೇ ಲಾವಾ ಕಂಪನಿ ತನ್ನ ಲಾವಾ ಜೆಡ್ ಸೀರಿಸ್ ನಲ್ಲಿ ಬಜೆಟ್ ಸ್ಮಾರ್ಟ್ ಪೋನ್ ಗಳನ್ನು ಕೂಡಾ ಬಿಡುಗಡೆ ಮಾಡಿದ್ದು ಇವು ಹತ್ತು ಸಾವಿರ ರೂ.ಗಳ ಒಳಗೆ ಗ್ರಾಹಕರ ಬಳಕೆಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.