ನಾಡದೋಣಿಗಳಿಗೆ ಸೀಮೆ ಎಣ್ಣೆಯ ಬದಲು ಗ್ಯಾಸ್!
ಮೀನುಗಾರಿಕೆ ಇಲಾಖೆಯ ಚಿಂತನೆ
Team Udayavani, Jan 10, 2021, 5:30 AM IST
ಮಹಾನಗರ, ಜ. 9: ಸೀಮೆಎಣ್ಣೆ ಬಳಸಿಕೊಂಡು ಮೀನುಗಾರಿಕೆಗೆ ತೆರಳು ತ್ತಿರುವ ಕರಾವಳಿಯ ನಾಡದೋಣಿಗಳು ಇನ್ನು ಮುಂದೆ ಗ್ಯಾಸ್ ರೂಪಕ್ಕೆ ಬದಲಾವಣೆ ಆಗಲು ಸಿದ್ಧತೆ ನಡೆಯುತ್ತಿದೆ.
ಪರಿಸರಕ್ಕೆ ಹಾನಿಯಾಗುವ ಸೀಮೆಎಣ್ಣೆ ಬಳಕೆ ಸಂಪೂರ್ಣ ಸ್ಥಗಿತಗೊಳಿಸುವ ಉದ್ದೇ ಶದಿಂದ ಎಲ್ಲ ನಾಡದೋಣಿಗಳು ಮುಂದಿನ ದಿನಗಳಲ್ಲಿ ಪರ್ಯಾಯ ಇಂಧನ ಬಳ ಕೆಗೆ ನಿರ್ಧರಿಸಿವೆ. ಹೀಗಾಗಿ ಸೀಮೆಎಣ್ಣೆಯ ಬದಲು ಗ್ಯಾಸ್ ಬಳಕೆ ಮಾಡುವುದೇ ಸೂಕ್ತ ಎಂಬ ಬಗ್ಗೆ ಮೀನುಗಾರಿಕೆ ಇಲಾಖೆ ಚಿಂತನೆ ನಡೆಸಿದ್ದು, ಶೀಘ್ರದಲ್ಲಿ ಈ ಬಗ್ಗೆ ಅಂತಿಮ ತೀರ್ಮಾನವಾಗಲಿದೆ.
ಸೀಮೆಎಣ್ಣೆಯ ಬದಲು ಡೀಸೆಲ್ ಬಳಕೆ ಅಥವಾ ರೀಚಾರ್ಜ್ ಮಾಡಲು ಶಕ್ತವಿರುವ ಎಂಜಿನ್ ಬಳಕೆ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಸದ್ಯ ಇವೆರಡಕ್ಕಿಂತ ಗ್ಯಾಸ್ ಬಳಕೆಯೇ ಉತ್ತಮ ಎಂಬ ಅಭಿಪ್ರಾಯವ್ಯಕ್ತವಾಗಿದೆ.
ರಾಜ್ಯದಲ್ಲಿ ಕಂಪೆನಿಯೊಂದು 5 ಎಚ್‌ಪಿ ಎಂಜಿನ್‌ನ ಗ್ಯಾಸ್ ಬಳಕೆಯ ನಾಡದೋಣಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ, ಕರಾವಳಿ ಭಾಗದಲ್ಲಿ 9.9 ಎಚ್.ಪಿ ಎಂಜಿನ್ ಸಾಮರ್ಥ್ಯದ ನಾಡದೋಣಿ ಇರುವುದರಿಂದ ಈ ಮಾದರಿಯ ನಾಡದೋಣಿ ಅನುಷ್ಠಾನಿಸಬೇಕಿದೆ ಎಂದು ಬೆಂಗಳೂರಿನಲ್ಲಿ ನಡೆದ ಮೀನುಗಾರ ಪ್ರಮುಖರ ಸಭೆಯಲ್ಲಿ ಚರ್ಚೆ ನಡೆದಿದೆ.
ಸೀಮೆಎಣ್ಣೆ ಬಳಕೆ ಮಾಡುವ ನಾಡದೋಣಿಗಳಿಗೆ ಸಾಮಾನ್ಯವಾಗಿ 95 ಸಾವಿರ ರೂ. ಇದ್ದರೆ ಗ್ಯಾಸ್ ಬಳಕೆ ಮಾಡುವ ನಾಡದೋಣಿಗೆ 1.10 ಲಕ್ಷ ರೂ. ಇದೆ ಎನ್ನಲಾಗಿದೆ. ಇದು ಪೂರ್ಣಮಟ್ಟದಲ್ಲಿ ಅನುಷ್ಠಾನ ವಾದರೆ ಮಂಗಳೂರಿನಲ್ಲಿ ಗ್ಯಾಸ್ ಫಿಲ್ಲಿಂಗ್ ಸ್ಟೇಷನ್‌ಗಳು ಕಾರ್ಯ ನಿರ್ವಹಿಸಲಿವೆ.
ಹಿಂದೆ ತೀರ್ಮಾನವಾಗಿತ್ತು! :
ನಾಡದೋಣಿಗಳಿಗೆ ಗ್ಯಾಸ್ ಸಂಪರ್ಕದ ಬಗ್ಗೆ ಈ ಹಿಂದಿನ ಸರಕಾರದಲ್ಲಿ ತೀರ್ಮಾನವಾಗಿತ್ತು. ಆದರೆ, ತಾಂತ್ರಿಕವಾಗಿ ಇದು ಕಾರ್ಯಸಾಧುವಾಗಿಲ್ಲ ಎಂಬ ಕಾರಣದಿಂದ ಪೂರ್ಣಮಟ್ಟದಲ್ಲಿ ಜಾರಿ ಯಾಗಿರಲಿಲ್ಲ. ಜತೆಗೆ, ಗ್ಯಾಸ್ ದರ ಏರಿಕೆ, ಮೈಲೇಜ್ ಕಡಿಮೆ ಸಿಗಬಹುದು ಎಂಬ ಆತಂಕವಿತ್ತು. ಜತೆಗೆ ಸುರಕ್ಷಿತ ಅಲ್ಲ ಎಂಬ ಬಗ್ಗೆಯೂ ಮಾತು ಕೇಳಿಬಂದಿತ್ತು. ಹೀಗಾಗಿ ಗ್ಯಾಸ್ ಅಳವಡಿಕೆ ಕಾರ್ಯ ಪೂರ್ಣಮಟ್ಟದಲ್ಲಿ ಜಾರಿಯಾಗಿರಲಿಲ್ಲ.
ನಾಡದೋಣಿ ಮೀನುಗಾರರಿಗೆ ಸಮರ್ಪಕವಾಗಿ ಸೀಮೆಎಣ್ಣೆ ಸರಿಯಾಗಿ ದೊರೆಯುತ್ತಿಲ್ಲ ಎಂಬ ಆರೋಪವಿದೆ. ಹೀಗಾಗಿ ಗ್ಯಾಸ್ ಪರಿಕಲ್ಪನೆಯಲ್ಲಿಯೂ ಅಂತಹ ಪರಿಸ್ಥಿತಿ ಎದುರಾಗಬಾರದು. ಬದಲಾಗಿ ಗ್ಯಾಸ್ ಸಬ್ಸಿಡಿ ಪ್ರಮಾಣದಲ್ಲಿ ಏರಿಕೆ ಆಗಬೇಕು ಎಂಬುದು ನಾಡದೋಣಿ ಮೀನುಗಾರರ ಆಗ್ರಹ.
ಸೂಕ್ತ ತೀರ್ಮಾನ ಅಗತ್ಯ :
ಮೂಲ ಮೀನುಗಾರ ಸಂಘದ ಗೌರವಾಧ್ಯಕ್ಷ ಸುಭಾಷ್ ಬೋಳೂರು ಅವರು “ಉದಯವಾಣಿ’ ಜತೆಗೆ ಮಾತ ನಾಡಿ “ನಾಡದೋಣಿ ನಡೆಸುವವರಿಗೆ ಸುರಕ್ಷಿತ ಹಾಗೂ ಕಡಿಮೆ ದರದಲ್ಲಿ ಗ್ಯಾಸ್ ಸಂಪರ್ಕ ದೊರೆಯುವುದಾದರೆ ಅದನ್ನು ಸ್ವಾಗತಿಸುತ್ತೇವೆ. ಈ ಬಗ್ಗೆ ಸರಕಾರ ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿ’ ಎಂದರು.
4,000ಕ್ಕೂ ಅಧಿಕ ನಾಡದೋಣಿಗಳು :
1 ನಾಡದೋಣಿಗೆ ತಿಂಗಳಿಗೆ 210 ಲೀ. ಸೀಮೆಎಣ್ಣೆ ಸರಕಾರದಿಂದ ದೊರೆಯುತ್ತಿದೆ. ಸಮುದ್ರದಲ್ಲಿ 5 ನಾಟಿಕಲ್ ಮೈಲ್ ದೂರದವರೆಗೆ ತೆರಳಿ ಮೀನುಗಾರಿಕೆ ನಡೆಸಲು ಅವಕಾಶವಿದೆ. ದ.ಕ. ಜಿಲ್ಲೆಯಲ್ಲಿ ಸುಮಾರು 1,500 ಕ್ಕೂ ಅಧಿಕ ಹಾಗೂ ಉಡುಪಿ ಜಿಲ್ಲೆಯಲ್ಲಿ 2,500ಕ್ಕೂ ಅಧಿಕ ನಾಡದೋಣಿಗಳು ಮೀನುಗಾರಿಕೆ ನಡೆಸುತ್ತಿವೆ.
ಸದ್ಯ ನಾಡದೋಣಿ ಮೀನುಗಾರರು ಸೀಮೆಎಣ್ಣೆ ಬಳಕೆ ಮಾಡುತ್ತಿದ್ದಾರೆ. ಅದನ್ನು ಗ್ಯಾಸ್‌ಗೆ ಹೇಗೆ ಪರಿವರ್ತನೆ ಮಾಡುವುದು ಎಂಬ ಬಗ್ಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಇದರ ಬಗ್ಗೆ ಪರಾಮರ್ಶೆ ನಡೆಸಿ ಗ್ಯಾಸ್ ಅಳವಡಿಕೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. –ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.