ಟ್ರಂಪ್‌ಗೆ ವಾಗ್ಧಂಡನೆ?
Team Udayavani, Jan 10, 2021, 7:30 AM IST
ವಾಷಿಂಗ್ಟನ್: “ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡಲೇ ರಾಜೀನಾಮೆ ನೀಡಿ ಹೊರನಡೆಯದೇ ಇದ್ದರೆ, ಅವರನ್ನು ವಾಗ್ಧಂಡನೆಗೆ ಗುರಿಪಡಿ ಸಲಾಗುತ್ತದೆ.’
ಅಮೆರಿಕದ ಸಂಸತ್ ಭವನ (ಕ್ಯಾಪಿಟಲ್ ಹಿಲ್)ಮೇಲೆ ಟ್ರಂಪ್ ಬೆಂಬಲಿಗರು ಮುತ್ತಿಗೆ ಹಾಕಿ, ಹೈಡ್ರಾಮಾ ನಡೆಸಿದ ಬೆನ್ನಲ್ಲೇ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇಂಥದ್ದೊಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
“ಟ್ರಂಪ್ ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಹೌಸ್‌ನ ಎಲ್ಲ ಸದಸ್ಯರೂ ಬಯಸುತ್ತಿದ್ದಾರೆ. ಒಂದು ವೇಳೆ ಅವರು ರಾಜೀನಾಮೆಗೆ ಹಿಂದೇಟು ಹಾಕಿದರೆ, ಮಹಾಭಿಯೋಗ(ವಾಗ್ಧಂಡನೆ)ದ ಪ್ರಕ್ರಿಯೆ ಆರಂಭಿಸುವಂತೆ ನಾನು ರೂಲ್ಸ್ ಕಮಿಟಿಗೆ ಸೂಚಿಸಿದ್ದೇನೆ. ಎಲ್ಲ ಆಯ್ಕೆಗಳನ್ನೂ ಹೌಸ್ ಸಿದ್ಧವಾಗಿರಿಸಿಕೊಂಡಿದೆ’ ಎಂದು ಪೆಲೋಸಿ ಖಡಕ್ಕಾಗಿ ಹೇಳಿದ್ದಾರೆ.
ಇದೇ ವೇಳೆ, ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯೆ ಪ್ರಮೀಳಾ ಜಯಪಾಲ್ ಅವರೂ “ಈಗಲೇ ಟ್ರಂಪ್ ವಿರುದ್ಧ ವಾಗ್ಧಂಡನೆ ಶುರು ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ. ಶ್ವೇತಭವನದಲ್ಲಿ ಟ್ರಂಪ್ ಇರುವ ಪ್ರತಿಯೊಂದು ಹೆಚ್ಚುವರಿ ದಿನವೂ ಅಮೆರಿಕ ಅಸುರಕ್ಷಿತವಾಗಿದೆ ಎಂಬುದರ ಪ್ರತೀಕವಾಗುತ್ತದೆ ಎಂದು ಮತ್ತೂಬ್ಬ ಸಂಸದ ಕೈಯಾಲಿ ಕಹೀಲೆ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಅಮೆರಿಕ ಕಾಂಗ್ರೆಸ್‌ನ ಬಹುತೇಕ ಸದಸ್ಯರು ಟ್ರಂಪ್ ವಾಗ್ಧಂಡನೆಗೆ ಆಗ್ರಹಿಸಿದ್ದಾರೆ. ಈ ನಡುವೆ, ಭಾರತೀಯ ಅಮೆರಿಕನ್ ಸಬ್ರಿàನಾ ಸಿಂಗ್ ಅವರು ಶ್ವೇತಭವನದಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಉಪ ಮಾಧ್ಯಮ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ವಲಸೆ ಮಸೂದೆಯ ಬಗ್ಗೆ ಪುನರುಚ್ಚಾರ: ತಾವು ಅಧಿಕಾರ ಸ್ವೀಕರಿಸಿದ ಕೂಡಲೇ ಟ್ರಂಪ್ ಆಡಳಿತದ ನಿಯಮಗಳಿಗೆ ವಿರುದ್ಧವಾದ ವಲಸೆ ನಿಯಮಗಳನ್ನು ಜಾರಿಗೆ ತರುವುದಾಗಿ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಶನಿವಾರ ಪುನರುಚ್ಚರಿಸಿದ್ದಾರೆ. ಜ.20ರಂದು ಬೈಡೆನ್ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕರಿಸಿದ ಕೂಡಲೇ ನೀವು ಮಾಡುವ ಕೆಲಸವೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, “ಟ್ರಂಪ್ ಆಡಳಿತದ ಕ್ರೂರ ವಲಸೆ ನೀತಿಗಳನ್ನು ರದ್ದು ಮಾಡುವುದು’ ಎಂದು ಹೇಳಿದ್ದಾರೆ.
ವಿನ್ಸೆಂಟ್ ವಿರುದ್ಧ ದೂರು: ಅಮೆರಿಕದ ಕ್ಯಾಪಿಟಲ್ ಹಿಲ್ ಹಿಂಸಾಚಾರದ ವೇಳೆ ಟ್ರಂಪ್ ಬೆಂಬಲಿಗರೊಂದಿಗೆ ಭಾರತದ ತ್ರಿವರ್ಣ ಧ್ವಜ ಹಿಡಿದುಕೊಂಡಿದ್ದ ಕೇರಳ ಮೂಲದ ವಿನ್ಸೆಂಟ್ ಕ್ಸೇವಿಯರ್ ವಿರುದ್ಧ ದಿಲ್ಲಿಯ ಕಲ್ಕಾಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ವಂತ ಪ್ಲಾಟ್ಫಾರಂ ರಚನೆಗೆ ಟ್ರಂಪ್ ಚಿಂತನೆ :
ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಹಿನ್ನೆಲೆಯಲ್ಲಿ ತಮ್ಮ ಟ್ವಿಟರ್ ಖಾತೆಯನ್ನೇ ತೆಗೆದುಹಾಕಿದ್ದ ಸಂಸ್ಥೆಯ ವಿರುದ್ಧ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ. ತಮ್ಮ ವೈಯಕ್ತಿಕ ಖಾತೆ ರದ್ದಾದ ಕಾರಣ ಪೋಟಸ್ ಖಾತೆ ಮೂಲಕ ಟ್ವೀಟ್ ಮಾಡಿದ ಅವರು, “ನಮ್ಮನ್ನು ಮೌನವಾಗಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದಿದ್ದಾರಲ್ಲದೇ, ಟ್ವಿಟರ್‌ಗೆ ಪರ್ಯಾಯವಾಗಿ ತಮ್ಮದೇ ಸ್ವಂತ ಪ್ಲಾಟ್‌ಫಾರಂವೊಂದನ್ನು ರಚಿಸಲು ಚಿಂತನೆ ನಡೆಸಿರುವುದಾಗಿ ಹೇಳಿದ್ದಾರೆ.
ಟ್ರಂಪ್ ಖಾತೆ ರದ್ದತಿಗೆ ಸಂಸದ ತೇಜಸ್ವಿ ಸೂರ್ಯ ಆಕ್ರೋಶ :
ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ರದ್ದು ಮಾಡಿರುವುದರ ಬಗ್ಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಿಯಂತ್ರಣವಿಲ್ಲದ ದೊಡ್ಡ ಟೆಕ್ ಕಂಪೆನಿಗಳಿಂದ ನಮ್ಮ ಪ್ರಜಾಪ್ರಭುತ್ವಕ್ಕೆ ಆಗುತ್ತಿರುವ ಅಪಾಯವನ್ನು ಅವಗಣಿಸಿರುವ ಎಲ್ಲರಿಗೂ ಇದೊಂದು ಎಚ್ಚರಿಕೆಯ ಕರೆಗಂಟೆ. ಟ್ರಂಪ್ ಅವರ ಖಾತೆಯನ್ನೇ ಅವರು ರದ್ದು ಮಾಡುತ್ತಾರೆಂದರೆ, ಮುಂದೆ ಯಾರ ಖಾತೆ ಯನ್ನಾದರೂ ಅವರು ತೆಗೆದುಹಾಕಬಹುದು. ನಮ್ಮ ಪ್ರಜಾ ಸತ್ತೆಯನ್ನು ಉಳಿಸಬೇಕೆಂದರೆ, ಭಾರತವೂ ನಿಯಂತ್ರಣ ಕ್ರಮ ಗಳನ್ನು ಪುನರ್‌ಪರಿಶೀಲಿಸುವುದು ಒಳ್ಳೆಯದು’ ಎಂದು ತೇಜಸ್ವಿ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.