ರೈತರ ಮೇಲೆ ಅಶ್ರುವಾಯು ಪ್ರಯೋಗ: ರೈತರೊಂದಿಗೆ ಹರ್ಯಾಣ ಸಿಎಂ ಖಟ್ಟರ್ ಮಾತುಕತೆ ರದ್ದು
Team Udayavani, Jan 10, 2021, 4:32 PM IST
ಚಂಡೀಗಢ: ಪ್ರತಿಭಟನಾ ನಿರತ ರೈತರೊಂದಿಗೆ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ನಡೆಸಬೇಕಿದ್ದ ಮಾತುಕತೆ ರದ್ದಾಗಿದೆ.
ಹರ್ಯಾಣದ ಕೆಮಲಾ ಹಳ್ಳಿಗೆ ಬರಲು ಯತ್ನಿಸುತ್ತಿದ್ದ ರೈತರ ಮೇಲೆ ಪೊಲೀಸರು ಜಲ ಫಿರಂಗಿ, ಅಶ್ರುವಾಯು ಪ್ರಯೋಗ ಮಾಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳ ಪ್ರಯೋಜನಗಳ ಬಗ್ಗೆ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ರೈತರೊಂದಿಗೆ ಸಮಾಲೋಚಿಸುವ ಕಾರ್ಯಕ್ರಮ ಕೆಮಲಾ ಹಳ್ಳಿಯಲ್ಲಿ ನಿಗದಿಯಾಗಿತ್ತು. ಈ ಸ್ಥಳಕ್ಕೆ ಆಗಮಿಸಲು ಯತ್ನಿಸಿದ ಪ್ರತಿಭಟನಾ ನಿರತ ರೈತರ ವಿರುದ್ಧ ಪೊಲೀಸರು ಅಶ್ರುವಾಯು, ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಹೀಗಾಗಿ ಸಿಎಂ ಖಟ್ಟರ್ ಕಾರ್ಯಕ್ರಮ ರದ್ದಾಗಿದೆ.
ಘಟನೆಯ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇತ್ತ ಕೆಲವೊಂದು ಪ್ರತಿಭಟನಾಕಾರರು ಸಿಎಂ ಅವರು ಆಗಮಿಸಬೇಕಿದ್ದ ಹೆಲಿಪ್ಯಾಡ್ ಹಾನಿಗೊಳಿಸಲು ಯತ್ನಿಸಿದರು. ಈವೇಳೆ ಕಾರ್ಯಕ್ರಮ ಪರ ಹಾಗೂ ವಿರೋಧ ಇದ್ದ ರೈತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಸ್ಥಳದಲ್ಲಿ ಭಾರೀ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
आंसू गैस के गोले और वाटर कैनन को पार कर करनाल के कैमला गांव के किसानों ने मुख्यमंत्री @mlkhattar को खदेड़ा। हरियाणा में एक भी जनसभा नहीं कर पा रहे हैं @BJP4Haryana और @JJPofficial के नेता pic.twitter.com/DJsClp0syr
— अनूप सिंह चानौत (@AnoopChanot) January 10, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.