ಎಸ್‌ಬಿಎಂ ರಸ್ತೆ ಅಗಲೀಕರಣ, ಡಾಂಬರೀಕರಣಕ್ಕೆ ಗ್ರಹಣ
ರಾಷ್ಟ್ರೀಯ ಹೆದ್ದಾರಿ ಶ್ರೇಣಿಯಲ್ಲಿರುವ ರಸ್ತೆ
Team Udayavani, Jan 10, 2021, 6:15 PM IST
ಬಾಗೇಪಲ್ಲಿ: ರಾಷ್ಟ್ರೀಯ ಹೆದ್ದಾರಿ ಶ್ರೇಣಿ ಪಟ್ಟಿಯಲ್ಲಿ ರುವ ಬಾಗೇಪಲ್ಲಿ ಪಟ್ಟಣದ ಎಸ್‌ಬಿಎಂ ರಸ್ತೆಯ ಅಗಲೀಕರಣ ಮತ್ತು ರಸ್ತೆ ಡಾಂಬರೀಕರಣ ಕಾಮ ಗಾರಿಗೆ ಹಲವು ದಶಕಗಳಿಂದ ಗ್ರಹಣ ಹಿಡಿದಿದೆ. ಗುಂಡಿಗಳಿಂದ ಕೂಡಿರುವ ಎಸ್‌ಬಿಎಂ ರಸ್ತೆ ಮಳೆ ಗಾಲದಲ್ಲಿ ಕೆಸರು ಗದ್ದೆಯಾದರೆ, ಬೇಸಿಗೆಯಲ್ಲಿ ದೂಳಿನ ಅಬ್ಬರಕ್ಕೆ ವಾಹನ ಸವಾರರು ಹಾಗೂ ಪಾದಚಾರಿಗಳು ಹೈರಾಣಗುತ್ತಿದ್ದಾರೆ.
ಪಟ್ಟಣದ ಡಿಜಿ ಮುಖ್ಯರಸ್ತೆಯಲ್ಲಿರುವ ಸಾರ್ವಜನಿಕ ಆಸ್ಪತ್ರೆ ವೃತ್ತದಿಂದ ರಾ.ಹೆದ್ದಾರಿ 7 ವರೆಗಿನ ತೀಮಾಕಲಹಳ್ಳಿ ಮಾರ್ಗದ ಎಸ್‌ಬಿಎಂ ರಸ್ತೆಯ ಅಗಲೀಕರಣ ಮತ್ತು ಮರು ಡಾಂಬರೀಕರಣ ಕಾಮ ಗಾರಿಗಾಗಿ ಹೆದ್ದಾರಿ ಉಪಭಾಗದ ವತಿಯಿಂದ 4 ಕೋಟಿ ರೂ. ಅನುದಾನದಲ್ಲಿ ಒಂದು ವರ್ಷದ ಹಿಂದೆಯಷ್ಟೇ ಕಾಮಗಾರಿ ಪ್ರಾರಂಭಗೊಂಡಿದ್ದು, ಕಾರಣಾಂತರಗಳಿಂದ ರಸ್ತೆ ಕಾಮಗಾರಿ ಕೈಬಿಟ್ಟಿದರಿಂದ ಅರ್ಧಕ್ಕೆ ನಿಂತಿದೆ.
ಆರಂಭವಾಗದ ಕಾಮಗಾರಿ: ಎಸ್‌ಬಿಎಂ ರಸ್ತೆ ಸಂಪೂರ್ಣ ಕಿತ್ತುಹೋಗಿದ್ದು, ಗುಂಡಿಗಳ ಮತ್ತು ಜಲ್ಲಿ ಕಲ್ಲಿನ ಮಯವಾಗಿ ದೂಳು ಮತ್ತು ಕೆಸರಿ ನಿಂದ ಕೂಡಿದೆ. ಈ ರಸ್ತೆಯಲ್ಲಿ ವಾಣಿಜ್ಯ ಸಂಕೀರ್ಣಗಳು, ಖಾಸಗಿ ಆಸ್ಪತ್ರೆ, ಶಾಲಾ ಕಾಲೇಜುಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಪ್ರತಿನಿತ್ಯ ದಟ್ಟ ವಾಹನ ಸಂಚಾರವಿದೆ. 100 ಅಡಿ ಅಗಲದ ರಸ್ತೆ ಕಾಮಗಾರಿಗೆ ವರ್ಷಗಳ ಹಿಂದೆಯಷ್ಟೇ ಚಾಲನೆ ದೊರೆ ತಿದ್ದರೂ ಇದುವರೆಗೂ ಅಗಲೀಕರಣಕ್ಕೆ ಪುರಸಭೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗುತ್ತಿಲ್ಲ.
ಇದನ್ನೂ ಓದಿ:ಎರಡೇ ವರ್ಷದಲ್ಲಿ ಕಿತ್ತು ಹೋದ ಬೊಮ್ಮನಹಳ್ಳಿ ಮಾರ್ಗ ರಸ್ತೆ
ನಿತ್ಯ ನರಕ: ಕಿರಿದಾದ ರಸ್ತೆಯಲ್ಲೇ ಸರಕು ಸಾಗಾಣಿಕೆ ವಾಹನಗಳ ಮಾಲೀಕರು ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿಕೊಂಡು ಸರಕು ಇಳಿಸಿಕೊಳ್ಳುತ್ತಾರೆ. ಇದರಿಂದ ಬೈಕ್‌ಗಳು ಸಂಚರಿಸಲು ಸಹ ಸಾಧ್ಯವಾಗದೆ ಪ್ರತಿನಿತ್ಯ ಟ್ರಾμಕ್ ಸಮಸ್ಯೆ ಎದುರಿಸಬೇಕಾಗಿದೆ. ಎಸ್‌ಬಿಎಂ ರಸ್ತೆ ಸವಾರರ ಮತ್ತು ಪಾದಚಾರಿಗಳ ಪಾಲಿಗೆ ನಿತ್ಯ ನರಕವಾಗಿದೆ.
ಸಮಸ್ಯೆ ಇತ್ಯರ್ಥಕ್ಕೆ ಒತ್ತಾಯ: ದಟ್ಟ ವಾಹನ ಸಂಚಾರದ ಕಾರಣದಿಂದ ನಿತ್ಯ ಟ್ರ್ಯಾಕ್ ಸಮಸ್ಯೆ ಎದುರಿಸುತ್ತಿದ್ದೇವೆ. ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕಾಗಿದೆ ಎಂದು ಎಸ್‌ಬಿಎಂ ರಸ್ತೆ ನಿವಾಸಿ ಕಿಶೋರ್ ಕುಮಾರ್ ಒತ್ತಾಯಿಸಿದ್ದಾರೆ.
ಪಿ.ಮಂಜುನಾಥರೆಡ್ಡಿ, ಬಾಗೇಪಲ್ಲಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.