ಕಿಸಾನ್‌ ಸಮ್ಮಾನ್‌ ಯೋಜನೆ 20.48 ಲಕ್ಷ ಫ‌ಲಾನುಭವಿಗಳು ಅನರ್ಹರು!


Team Udayavani, Jan 11, 2021, 7:40 AM IST

ಕಿಸಾನ್‌ ಸಮ್ಮಾನ್‌ ಯೋಜನೆ 20.48 ಲಕ್ಷ ಫ‌ಲಾನುಭವಿಗಳು ಅನರ್ಹರು!

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೂ. 20.48 ಲಕ್ಷ ಅನರ್ಹ ಫ‌ಲಾನುಭವಿಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ. ಮಾಹಿತಿ ಹಕ್ಕು ಕಾಯಿದೆ(ಆರ್‌ಟಿಐ) ಅಡಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ  ಸರಕಾರ ನೀಡಿರುವ ಉತ್ತರದಲ್ಲಿ ಇದು ಬಹಿರಂಗವಾಗಿದೆ. ಯಾವ್ಯಾವ ರಾಜ್ಯಗಳಲ್ಲಿ ಅನರ್ಹ ಫ‌ಲಾನುಭವಿಗಳಿಗೆ ಎಷ್ಟು ಹಣ ವರ್ಗಾವಣೆಯಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಅನರ್ಹರು ಎಂದರೆ ಯಾರು? :

ಸರಕಾರ ಈ ಯೋಜನೆಯನ್ನು ಆರಂಭಿಸುವಾಗ ಕೆಲವು ಮಾನದಂಡಗಳನ್ನು ಉಲ್ಲೇಖೀಸಿತ್ತು. ಅವುಗಳಲ್ಲಿ ಪ್ರಮುಖವಾಗಿ ಕೃಷಿ ಭೂಮಿಯ ಗಾತ್ರ ಮತ್ತು ತೆರಿಗೆ ಪಾವತಿಯ ಮಿತಿಯನ್ನು ನೀಡಲಾಗಿತ್ತು. ಈ ಅರ್ಹತೆಗಳ ಸಹಿತ ಇನ್ನಿತರ ಕೆಲವು ಮಾನದಂಡಗಳನ್ನು ಪೂರೈಸದ ರೈತರು ಈ ಯೋಜನೆಗೆ ಅರ್ಜಿ ಸಲ್ಲಿಸಿ ಸವಲತ್ತುಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಅಂಥ ರೈತರನ್ನು ಅನರ್ಹ ಫ‌ಲಾನುಭವಿಗಳೆಂದು ಪರಿಗಣಿಸಲಾಗಿದೆ.

1,364 ಕೋ. ರೂ. ಜಮೆ :

2019ರಲ್ಲಿ ಪ್ರಾರಂಭವಾದ ಪಿಎಂ-ಕಿಸಾನ್‌ ಯೋಜನೆ ಅಡಿಯಲ್ಲಿ 20.48 ಲಕ್ಷ ಅನರ್ಹ ಫ‌ಲಾನುಭವಿಗಳಿಗೆ ಜುಲೈ 2020ರ ವೇಳೆಗೆ 1,364 ಕೋಟಿ ರೂ. ಗಳನ್ನು ಬ್ಯಾಂಕ್‌ಗೆ ಜಮೆ ಮಾಡಲಾಗಿದೆ. ಇದು ಒಂದರ್ಥದಲ್ಲಿ ಯೋಜನೆ ಅನುಷ್ಠಾನದಲ್ಲಿನ ವೈಫ‌ಲ್ಯವಾಗಿದ್ದು, ಸಮರ್ಪಕವಾಗಿ ಮಾಹಿತಿಗಳನ್ನು ಸಂಗ್ರಹಿಸದೇ ರೈತರ ಪಟ್ಟಿಯನ್ನು ಸರಕಾರಕ್ಕೆ ಕಳುಹಿಸಿರುವುದು ಇದಕ್ಕೆ ಮೂಲ ಕಾರಣ.

ಹಣವನ್ನು ಹಿಂಪಡೆಯಲಾಗುವುದು? :

ಆರ್‌ಟಿಐ ಅರ್ಜಿದಾರ ವೆಂಕಟೇಶ್‌ ನಾಯಕ್‌ ಅವರು ಈ ಅಂಕಿಅಂಶಗಳನ್ನು ಸರಕಾರದಿಂದ ಪಡೆದಿ¨ªಾರೆ. ಸರಕಾರ ನೀಡಿರುವ ಉತ್ತರದ ಪ್ರಕಾರ ಅನರ್ಹ ಫ‌ಲಾನುಭವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ ಶೇ. 55.58ರಷ್ಟು ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಉಳಿದ ಶೇ. 44.41ರಷ್ಟು ಜನರು ಯೋಜನೆಗೆ ಬೇಕಾದ ಅರ್ಹತೆಯನ್ನು ಹೊಂದಿಲ್ಲದವರಾಗಿದ್ದಾರೆ. ಅನರ್ಹ ಫ‌ಲಾನುಭವಿಗಳಿಗೆ ಪಾವತಿಸಿದ ಮೊತ್ತವನ್ನು ವಸೂಲಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದೂ ಸರಕಾರ ತನ್ನ ಉತ್ತರದಲ್ಲಿ  ತಿಳಿಸಿದೆ ಎಂದು ನಾಯಕ್‌ ಹೇಳಿದ್ದಾರೆ.

ಎಲ್ಲೆಲ್ಲಿನ ರೈತರು? :

ಪಂಜಾಬ್‌, ಅಸ್ಸಾಂ, ಮಹಾರಾಷ್ಟ್ರ, ಗುಜರಾತ್‌ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಅನರ್ಹ ಫ‌ಲಾನುಭವಿಗಳ ಪಟ್ಟಿಯಲ್ಲಿದ್ದಾರೆ. ಒಟ್ಟು ಅನರ್ಹ ಫ‌ಲಾನುಭವಿಗಳಲ್ಲಿ ಶೇ. 23.6ರಷ್ಟು (ಅಂದರೆ 4.74 ಲಕ್ಷ)ಮಂದಿಯನ್ನು ಹೊಂದಿರುವ ಪಂಜಾಬ್‌ ಅಗ್ರಸ್ಥಾನದಲ್ಲಿದೆ. ಇದರ ಬಳಿಕ ಅಸ್ಸಾಂ ಶೇ. 16.8ರಷ್ಟು (3.45 ಲಕ್ಷ ಫ‌ಲಾನುಭವಿಗಳು) ಅನರ್ಹ ಫ‌ಲಾನುಭವಿಗಳನ್ನು ಹೊಂದಿದೆ. ಅನರ್ಹ ಫ‌ಲಾನುಭವಿಗಳ ಪೈಕಿ ಶೇ. 13.99ರಷ್ಟು (2.86 ಲಕ್ಷ ಫ‌ಲಾನುಭವಿಗಳು)ಮಂದಿ ಮಹಾರಾಷ್ಟ್ರದವರಾಗಿ¨ªಾರೆ. ಹೀಗಾಗಿ ಅನರ್ಹ ಫ‌ಲಾನುಭವಿಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ. 54.03)ಮಂದಿ ಈ ಮೂರು ರಾಜ್ಯಗಳಿಗೆ ಸೇರಿದವರಾಗಿ¨ªಾರೆ.

ಸಿಕ್ಕಿಂನಲ್ಲಿ ಅತೀ ಕಡಿಮೆ :

ಪಂಜಾಬ್‌, ಅಸ್ಸಾಂ ಮತ್ತು ಮಹಾರಾಷ್ಟ್ರದ ಬಳಿಕ ಗುಜರಾತ್‌ ಹಾಗೂ ಉತ್ತರ ಪ್ರದೇಶ ರಾಜ್ಯಗಳಿವೆ. ಗುಜರಾತ್‌ ಶೇ. 8.05 (1.64 ಲಕ್ಷ ಫ‌ಲಾನುಭವಿಗಳು) ಮತ್ತು ಉತ್ತರ ಪ್ರದೇಶ ಶೇ. 8.01ರಷ್ಟು (1.64 ಲಕ್ಷ)ಮಂದಿ ಫ‌ಲಾನುಭವಿಗಳು ಅನರ್ಹರಾಗಿದ್ದಾರೆ. ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಮಾತ್ರ ಅತೀ ಕಡಿಮೆ ಪ್ರಮಾಣದಲ್ಲಿ ಅನರ್ಹ ಫ‌ಲಾನುಭವಿಗಳಿದ್ದಾರೆ.

ಏನಿದು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ?:

ಈ ಯೋಜನೆಯಡಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ವರ್ಷಕ್ಕೆ ಒಟ್ಟು 6,000 ರೂ. ಹಣವನ್ನು ಅವರ ಖಾತೆಗಳಿಗೆ ಜಮೆ ಮಾಡಲಾಗುತ್ತದೆ. ಈ ಹಣವನ್ನು ಮೂರು ಕಂತುಗಳಲ್ಲಿ ತಲಾ 2,000ರೂ.ಗಳಂತೆ ನೀಡಲಾಗುತ್ತದೆ. ಯೋಜನೆಯ ಅರ್ಹ ಫ‌ಲಾನುಭವಿಗಳು ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಮೂಲಕ ತಮ್ಮನ್ನು ನೋಂದಾಯಿಸಿಕೊಳ್ಳಬಹುದು. ಇನ್ನು ಸ್ಥಳೀಯ ಪತ್ವಾರಿ, ಕಂದಾಯ ಅಧಿಕಾರಿ ಮತ್ತು ನೋಡಲ್‌ ಅಧಿಕಾರಿಗಳನ್ನು ರಾಜ್ಯ ಸರಕಾರ ನಾಮನಿರ್ದೇಶನ ಮಾಡಿದೆ. ಈ ವರೆಗೆ ಸುಮಾರು 11 ಕೋಟಿ ರೈತರು ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಟಾಪ್ ನ್ಯೂಸ್

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ

Sambhal Case Follow Up:ಹೊರಗಿನವರಿಗೆ ಸಂಭಾಲ್‌ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ

Ramayana Skit: ಹಿಂದೂ ಧರ್ಮದ ಅವಹೇಳನ-ಬಾಂಬೆ ಐಐಟಿ ವಿದ್ಯಾರ್ಥಿಗಳಿಗೆ 1.2 ಲಕ್ಷ ದಂಡ

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Iran-israel war: ಮತ್ತೆ ಯುದ್ಧ ಬೇಡ-ಮೊದಲ ಬಾರಿ ನೇರ ಹಣಾಹಣಿ!

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

Baltimore:ಭಾರಿ ಗಾತ್ರದ ಹಡಗು ಡಿಕ್ಕಿ, ಕುಸಿದು ಬಿದ್ದ ಸೇತುವೆ:ಹಲವು ವಾಹನ, ಜನರು ಮುಳುಗಡೆ?

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

3 ಅಂತಸ್ತಿನ ಮನೆಯ ಮೇಲಿಂದ 4 ತಿಂಗಳ ಮಗುವನ್ನು ಎಸೆದ ಕಪಿಗಳು, ಪುಟ್ಟ ಹಸುಳೆ ಸಾವು!

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

ತರಕಾರಿ ಮಾರುವವರ ರೀತಿ…30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯಾಕೆ ಯೋಚಿಸಲ್ಲ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.