ಅಧ್ಯಕ್ಷ ಟ್ರಂಪ್ ವಿರುದ್ಧ “ವಾಗ್ಧಂಡನೆ’ ನಿರ್ಣಯ
Team Udayavani, Jan 12, 2021, 8:15 AM IST
ವಾಷಿಂಗ್ಟನ್: ಕ್ಯಾಪಿಟಲ್ ಹಿಲ್ ದಾಂದಲೆಗೆ ಛೂಬಿಟ್ಟ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ವಾಗ್ಧಂಡನೆ ನಿರ್ಣಯ ಕೈಗೊಳ್ಳಲು ಮುಂದಾಗಿದೆ.
ಯುಎಸ್ ಸಂವಿಧಾನದ 25ನೇ ತಿದ್ದುಪಡಿಯಲ್ಲಿ, ಅಪರಾಧ ಎಸಗಿದ ಅಧ್ಯಕ್ಷನನ್ನು ವಾಗ್ಧಂಡನೆಗೆ ಗುರಿಪಡಿಸಲು ಅವಕಾಶವಿದ್ದು, ಈ ಬಗ್ಗೆ ಸ್ಪೀಕರ್ ನ್ಯಾನ್ಸಿ ಪೆಲೊಸಿ ರವಿವಾರವೇ ಸಂಸದರಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದರು.
ಟ್ರಂಪ್‌ರನ್ನು ಇಳಿಸಲು ತುದಿಗಾಲಿನಲ್ಲಿ ನಿಂತಿರುವ ಡೆಮಾಕ್ರಾಟ್ ಸದಸ್ಯರು, 25ನೇ ತಿದ್ದುಪಡಿ ಬಳಸಿಕೊಳ್ಳಲು ಯೋಜನೆ ರೂಪಿಸಿದ್ದಾರೆ. “ಗಂಭೀರ ಅಪರಾಧ ಮತ್ತು ದುರ್ವರ್ತನೆ ಕಾರಣಕ್ಕಾಗಿ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ಧಂಡನೆ ನಿರ್ಣಯ ಕೈಗೊಳ್ಳುತ್ತೇವೆ’ ಎಂದು ಡೆಮಾಕ್ರಾಟ್ ಸಂಸದ ಬ್ರಾಡ್ ಸ್ಕಿಡರ್ ಹೇಳಿದ್ದಾರೆ.
ಪರಿಹಾರ ಏರಿಕೆ?: ಬೈಡೆನ್ ಅಮೆರಿಕನ್ನರಿಗೆ ಕೋವಿಡ್ ಆರ್ಥಿಕ ಪರಿಹಾರ ವನ್ನು 1.47 ಲಕ್ಷ ರೂ.ಗೆ ಹೆಚ್ಚಿಸುವ ಸುಳಿವು ನೀಡಿದ್ದಾರೆ. ಮಾಸಾಂತ್ಯದಲ್ಲಿ ಈ ಪರಿಹಾರ ಅಮೆರಿಕನ್ನರ ಕೈಗೆ ಸಿಗುವ ಸಾಧ್ಯತೆ ಇದೆ. “ಈಗ ನೀಡುತ್ತಿರುವ 44,099 ರೂ. ನಿಮಗೆ ಬಾಡಿಗೆ, ಟೇಬಲ್ಲಿನ ಆಹಾರಕ್ಕೂ ಸಾಲುವುದಿಲ್ಲ. ಹೀಗಾಗಿ ಇದನ್ನು 2 ಸಾವಿರ ಡಾಲರ್‌ಗೆ ಏರಿಸುತ್ತೇವೆ’ ಎಂದಿದ್ದಾರೆ.
ಟ್ರಂಪ್ ಖಾತೆ ರದ್ದತಿ ಹಿಂದೆ ವಿಜಯಾ! :
ಟ್ರಂಪ್‌ರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಕಿತ್ತೂಗೆದ ದಿಟ್ಟ ನಿರ್ಧಾರದ ಹಿಂದೆ ಇದ್ದಿದ್ದು ಭಾರತೀಯ ಮೂಲದ ಸಾಫ್ಟ್ವೇರ್ ಎಂಜಿನಿಯರ್! ಹೌದು, ವಕೀಲೆ ವಿಜಯಾ ಗದ್ದೆ ಅವರು ಟ್ವಿಟರ್‌ನ ಕಾನೂನು, ನೀತಿ, ವಿಶ್ವಾಸ ಮತ್ತು ಸುರಕ್ಷತೆ ವಿಭಾಗದ ಮುಖ್ಯಸ್ಥೆ. “ಹಿಂಸಾಚಾರ ಕಾರಣದಿಂದಾಗಿ ಅಧ್ಯಕ್ಷ ಟ್ರಂಪ್ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದ್ದೇವೆ. ನಮ್ಮ ನೀತಿ-ನಿಯಮಾವಳಿಗಳನ್ನೂ ಇಲ್ಲಿ ಪ್ರಕಟಿಸುತ್ತಿದ್ದೇವೆ’ ಎಂದು ಅವರು ಟ್ವಿಟರ್ ಪರವಾಗಿ ಮೊದಲ ಟ್ವೀಟ್ ಮಾಡಿದ್ದರು!
“ವೋಗ್’ ವಿವಾದ! :
ಭಾರತೀಯ ಮೂಲದ, ಅಮೆರಿಕದ ನಿಯೋಜಿತ ಉಪಾಧ್ಯಕ್ಷೆ ಕಮಲಾ ಹ್ಯಾರೀಸ್ ಚಿತ್ರವನ್ನು ಮುಖಪುಟದಲ್ಲಿ ಮುದ್ರಿಸಿದ “ವೋಗ್’ ಮ್ಯಾಗಜಿನ್‌ನ ಸಂಚಿಕೆ ಈಗ ವಿವಾದಕ್ಕೆ ಸಿಲುಕಿದೆ. “ಇಂಡೋ- ಆಫ್ರಿಕನ್’ ಎಂದೇ ಗುರುತಿಸಲ್ಪಡುವ ಕಮಲಾರ ಫೋಟೊದಲ್ಲಿ ಮುಖವನ್ನು ಫೋಟೊಶಾಪ್‌ನಿಂದ ಬಿಳಿಯಾಗಿಸಿರುವ ಸಂಗತಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣ ವಾಗಿದೆ. “ಮೇಡಂ ವೈಸ್ ಪ್ರಸಿಡೆಂಟ್!’ ಎಂದು ಅಭಿಮಾನದಿಂದಲೇ “ವೋಗ್’ ಇದನ್ನು ಮುದ್ರಿಸಿದ್ದರೂ, ಕಮಲಾ ಅವರ ನೈಜ ಬಣ್ಣವನ್ನು ತೋರಿ ಸದ ಕಾರಣಕ್ಕಾಗಿ ಮ್ಯಾಗಜಿನ್ ವಿವಾದಕ್ಕೆ ಗುರಿ ಯಾಗಿದೆ. ಕಮಲಾ ಸಮ್ಮತಿಯಿಲ್ಲದೆ, ಕ್ಯಾಂಪೇನ್ ವೇಳೆಯ ಫೋಟೊವನ್ನು ಬಳಸಿಕೊಳ್ಳಲಾಗಿದೆ ಎನ್ನುವ ಆರೋಪವೂ ಕೇಳಿಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.