ನಷ್ಟಕ್ಕೊಳಗಾದ ಬೆಳೆಗೆ ಬರಲೇ ಇಲ್ಲ ಪರಿಹಾರ : ಮಧ್ಯಂತರ ಬೆಳೆ ಪರಿಹಾರ ಮರೀಚಿಕೆ
Team Udayavani, Jan 12, 2021, 3:06 PM IST
ಧಾರವಾಡ: ಮಳೆಗಾಲ ಹೋಗಿ ಚಳಿಗಾಲ ಬಂದರೂ ಬರಲಿಲ್ಲ ಹಾನಿಯಾದ ಬೆಳೆಗಳ ವಿಮೆ, ಮತ್ತೂಂದು ಮಾವಿನ ಸುಗ್ಗಿ ಬಂದಾಯಿತಾದರೂ ಇನ್ನೂ ಬರಲಿಲ್ಲ ಕಳೆದ ವರ್ಷದ ಮಾವು ವಿಮೆ ಹಣ. ಸರ್ಕಾರದ ಬೊಟ್ಟು ವಿಮಾ ಕಂಪನಿಗಳತ್ತ, ವಿಮಾ ಕಂಪನಿಗಳ ಬೊಟ್ಟು ಸರ್ಕಾರದತ್ತ. ಒಟ್ಟಿನಲ್ಲಿ ಅವರ ಬಿಟ್ಟು ಇವರ ಬಿಟ್ಟು ಇವರ್ಯಾರು ? ಹೌದು, ಸತತ ಅತಿವೃಷ್ಟಿ ಮತ್ತು
ಹಮಾಮಾನ ವೈಪರಿತ್ಯದಿಂದ ಉಂಟಾಗಿರುವ ಬೆಳೆಹಾನಿಗೆ ವಿಮಾ ಕಂಪನಿಗಳು ನೀಡಬೇಕಾದ ಪರಿಹಾರ ಹಣವನ್ನು ಇನ್ನೂ ಬಾಕಿ ಇಟ್ಟುಕೊಂಡು ರೈತರನ್ನು ಸತಾಯಿಸುತ್ತಿವೆ. ಅಷ್ಟೇಯಲ್ಲ, ಸರ್ಕಾರದ ಮಟ್ಟದಲ್ಲಿನ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳು, ಮಂತ್ರಿ ಮಹೋದಯರ ಶಿಫಾರಸುಗಳಿಗೂ ವಿಮಾ ಕಂಪನಿಗಳು ಕ್ಯಾರೇ ಎನ್ನುತ್ತಿಲ್ಲ.
ಜಿಲ್ಲೆಯಲ್ಲಿ 2019-20ರ ಮುಂಗಾರಿನ ಬೆಳೆವಿಮೆ ಇನ್ನೂ ರೈತರ ಕೈ ಸೇರಿಲ್ಲ. ಜಿಲ್ಲೆಯ 1.3 ಲಕ್ಷಕ್ಕೂ ಅಧಿಕ ರೈತರು ತಾವು ಮುಂಗಾರಿನಲ್ಲಿ ಬೆಳೆಯುವ ಬೆಳೆಗಳ ಮೇಲೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಹಣ ಕಟ್ಟಿದ್ದು,
ಈವರೆಗೂ ರೈತರಿಗೆ ಬಿಡಿಗಾಸು ಬಂದಿಲ್ಲ.
ಜಿಲ್ಲೆಯಲ್ಲಿನ ಒಟ್ಟು 144 ಗ್ರಾಪಂಗಳ ಪೈಕಿ ಕೇವಲ 14 ಗ್ರಾಪಂಗಳ ವ್ಯಾಪ್ತಿಯಲ್ಲಿ ಮಾತ್ರ ಪರಿಪೂರ್ಣ ಸಮೀಕ್ಷೆಯಾಗಿದ್ದು,
ಇಲ್ಲಿನ ಹಳ್ಳಿಗಳಿಗೆ ಮಾತ್ರವೇ ಸೂಕ್ತವಾದ ಬೆಳೆವಿಮೆ ಪರಿಹಾರ ಸಿಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಅಧಿಕಾರಿಗಳ ವಲಯದಲ್ಲಿ ಹರಿದಾಡುತ್ತಿದೆ. ಲಕ್ಷ ಲಕ್ಷ ಹಣ ತುಂಬಿ ಬೆಳೆವಿಮೆ ಮಾಡಿದ ರೈತರನ್ನು ನಿಜಕ್ಕೂ ಸಂಕಷ್ಟಕ್ಕೀಡು ಮಾಡಿದೆ.
ಇದನ್ನೂ ಓದಿ:ಕುರುಬರ ಎಸ್ ಟಿ ಮೀಸಲಾತಿ ಹೋರಾಟದಲ್ಲಿ ಆರ್ ಎಸ್ಎಸ್ ಕೈವಾಡ: ಸಿದ್ದರಾಮಯ್ಯ
ರೈತರಿಗೆ ಪುಡಿಗಾಸು ಪರಿಹಾರವೂ ಇಲ್ಲ
2019-20ನೇ ಸಾಲಿನಲ್ಲಿ ಸಂಭವಿಸಿದ ಅತಿವೃಷ್ಟಿಯಲ್ಲಿ ಜಿಲ್ಲೆಯಲ್ಲಿ ಭತ್ತ, ಹೆಸರು, ಶೇಂಗಾ, ಸೋಯಾ, ಗೋವಿನಜೋಳದ ಬೆಳೆ ತೀವ್ರ ಹಾನಿಗೆ ಒಳಗಾಗಿದ್ದವು. ವಿಮಾ ಕಂಪನಿಗಳ ನಿಯಮದ ಅನ್ವಯ ಯಾವುದೇ ಬೆಳೆ ಶೇ.50 ಹಾನಿಯಾದರೆ ತಕ್ಷಣವೇ ಶೇ.25 ಬೆಳೆಹಾನಿ ಪರಿಹಾರವನ್ನು ರೈತರಿಗೆ ಕೊಡಬೇಕು ಎಂಬ ನಿಯಮವಿದೆ. ಈ ಕುರಿತು ಜಿಲ್ಲಾಡಳಿತ ಅಂದು ಬೆಳೆಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಸರ್ಕಾರ ಈ ವಿಚಾರವನ್ನು ವಿಮಾ ಕಂಪನಿಗಳ ಗಮನಕ್ಕೆ ಕೂಡ ತಂದಿತ್ತು. ಆದರೆ ಈ
ವರೆಗೂ ವಿಮಾ ಕಂತು ತಂಬಿದ 1.3 ಲಕ್ಷ ರೈತರಿಗೆ ಕಂಪನಿಗಳು ಈ ಮಧ್ಯಂತರ ಬೆಳೆ ಪರಿಹಾರ ಕೊಟ್ಟಿಲ್ಲ. ಇನ್ನು ರಾಜ್ಯದಲ್ಲಿಯೇ ಅತೀ ಹೆಚ್ಚು 4652 ಹೆಕ್ಟೇರ್ ಪ್ರದೇಶದಲ್ಲಿ ಅಲ್ಫೋನ್ಸೋ ಮಾವು ಬೆಳೆಯುವ 5235 ರೈತರು ಕಟ್ಟಿದ 1.88 ಕೋಟಿ ರೂ. ಬೆಳೆವಿಮೆ ವಂತಿಗೆಗೆ ಇನ್ನೂ ಪುಡಿಗಾಸು ಮಾವುವಿಮೆ ಪರಿಹಾರ ಬಂದಿಲ್ಲ.
ಲಕ್ಷಕ್ಕೂ ಹೆಚ್ಚು ಅನ್ನದಾತರಿಂದ ವಿಮೆ
ಮುಂಗಾರು ಬೆಳೆಗಳಾದ ಭತ್ತ, ಹೆಸರು, ಶೇಂಗಾ, ಸೋಯಾ, ಗೋವಿನಜೋಳವನ್ನು ಅತೀ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಧಾರವಾಡ ಜಿಲ್ಲೆಯಲ್ಲಿ 2019-20ನೇ ಸಾಲಿನ ಅವಧಿಯಲ್ಲಿ ಬರೊಬ್ಬರಿ ಒಂದು ಲಕ್ಷಕ್ಕೂ ಅಧಿಕ ರೈತರು ಬೆಳೆವಿಮೆ ಇರಿಸಿದ್ದರು. ಆದರೆ ಇದೀಗ ಬೆಳೆವಿಮೆ ಕಂಪನಿಯೊಂದು ಜಿಲ್ಲೆಯ 4900 ರೈತರಿಗೆ ಮಾತ್ರ ಬೆಳೆವಿಮೆ ಹಣ ಬಿಡುಗಡೆ ಮಾಡಿದ್ದಾಗಿ
ಹೇಳಿಕೊಂಡಿದೆ. ಇದನ್ನು ಕಂಪನಿ ತನ್ನ ವೆಬ್‌ಪೋರ್ಟಲ್‌ನಲ್ಲಿ ಪ್ರಕಟಿಸಿದೆ.
ಕಡ್ಡಾಯ ಸರಿಯೇ?
ಬೆಳೆಸಾಲ ಪಡೆದವರಿಗೆ ಬೆಳೆವಿಮೆ ಕಡ್ಡಾಯ ಮಾಡಲಾಗಿದೆ. ಅಷ್ಟೇಯಲ್ಲ, ಸರ್ಕಾರಿ ಅಧಿಕಾರಿಗಳು, ಮಂತ್ರಿಗಳು ಸಹಿತ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಎಲ್ಲಾ ರೈತರು ಕಡ್ಡಾಯವಾಗಿ ಮಾಡಲೇಬೇಕು ಎಂದೆಲ್ಲ ಪ್ರಚಾರ ಮಾಡುತ್ತಾರೆ. ಆದರೆ, ರೈತರು ತುಂಬಿದ ಪ್ರೀಮಿಯಂ ಹಣ ಕಡ್ಡಾಯ ಮಾಡಿದಂತೆಯೇ ಕಂಪನಿಗಳು ರೈತರಿಗೆ ಕೊಡುವ ವಿಮೆ ಹಣವೇಕೆ ಕಡ್ಡಾಯವಾಗಿಲ್ಲ ಎನ್ನುವ ಪ್ರಶ್ನೆ ರೈತರದ್ದಾಗಿದೆ.
– ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.