ಬಜಪೆ ಗ್ರಾ.ಪಂ. ಕಟ್ಟಡ : ಸಾಮಾನ್ಯ ಸೇವಾ ಕೇಂದ್ರ ಆರಂಭ
Team Udayavani, Jan 13, 2021, 3:20 AM IST
ಬಜಪೆ: ಬಜಪೆ ಪಟ್ಟಣ ಪಂಚಾಯತ್ ಘೋಷಣೆ ಪ್ರಕ್ರಿಯೆ ಜಾರಿಯಲ್ಲಿದ್ದು ಇದೀಗ ಪರಿಸರದ ಜನತೆಗೆ ಮತ್ತೂಂದು ಸುದ್ದಿ ಸಂತಸ ತಂದಿದೆ. ಬಹುಬೇಡಿಕೆಯ ಸಾಮಾನ್ಯ ಸೇವಾ ಕೇಂದ್ರವು ಬಜಪೆ ಗ್ರಾ.ಪಂ. ಕಟ್ಟಡದಲ್ಲಿ ಜ. 15ರಂದು ಶಾಸಕ ಉಮಾನಾಥ ಕೋಟ್ಯಾನ್ ಅವರಿಂದ ಉದ್ಘಾಟನೆಗೊಳ್ಳಲಿದೆ. ಇದರಿಂದ ಸ್ಥಳೀಯರಿಗೆ ಅಧಾರ್ ನೋಂದಣಿ ಮತ್ತು ತಿದ್ದುಪಡಿಗೆ ಅನುಕೂಲವಾಗಲಿದೆ. ನೋಂದಣಿಗಾಗಿ ಬೇರಡೆ ಅಲೆದಾಡಬೇಕಿದ್ದ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ಈ ಸಂದರ್ಭ ಪಂಚಾಯತ್ ಆಡಳಿತಾಧಿಕಾರಿ ನಾಗರಾಜ್ ಎನ್.ಬಿ ಹಾಗೂ ಪಿಡಿಒ ಸಾಯೀಶ್ ಚೌಟ ಉಪಸ್ಥಿತರಿರಲಿದ್ದಾರೆ. ಬ್ಯಾಂಕ್ ಮತ್ತು ಅಂಚೆ ಇಲಾಖೆಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಬಹಳ ಕಡಿಮೆ ಸಂಖ್ಯೆಯಲ್ಲಿ ನಡೆಯುವ ಕಾರಣ ರಾಜ್ಯದಲ್ಲಿ ಒಟ್ಟು 150 ಗ್ರಾ.ಪಂ.ಗಳಲ್ಲಿ ಪ್ರಾಯೋಗಿಕವಾಗಿ ಸಿಎಸ್ಸಿ ಸಹಯೋಗದೊಂದಿಗೆ ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ಆಯ್ಕೆ ಮಾಡಲಾಗಿತ್ತು. ಜಿಲ್ಲೆಗೆ ತಲಾ 5 ಗ್ರಾ.ಪಂ.ಗಳಲ್ಲಿ ಅನುಷ್ಠಾನಕ್ಕೆ ಇಲಾಖೆ ನಿರ್ಧರಿಸಿತ್ತು. ಅದರಂತೆ ದ.ಕ. ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನ ಬಜಪೆ, ಬಂಟ್ವಾಳ ತಾಲೂಕಿನ ಕೊಲಾ°ಡು, ಬೆಳ್ತಂಗಡಿ ತಾಲೂಕಿನ ಉಜಿರೆ, ಸುಳ್ಯ ತಾಲೂಕಿನ ಅಲೆಟ್ಟಿ , ಪುತ್ತೂರು ತಾಲೂಕಿನ ಒಳಮೊಗ್ರು ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲೆಯ ಎರಡನೇ ಪಂಚಾಯತ್ :
ಈಗಾಗಲೇ ಪುತ್ತೂರಿನ ಒಳಮೊಗ್ರು ಪಂಚಾಯತ್ನಲ್ಲಿ ಸಾಮಾನ್ಯ ಸೇವಾ ಕೇಂದ್ರ ಕಾರ್ಯಾರಂಭಿಸಿದ್ದು ಇದೀಗ ಬಜಪೆ ಗ್ರಾ.ಪಂ.ನಲ್ಲಿ ಶುಕ್ರವಾರ ಕಾರ್ಯಾರಂಭಗೊಳ್ಳಲಿದೆ. ಇದು ಜಿಲ್ಲೆಯ ಎರಡನೇ ಗ್ರಾ.ಪಂ. ಹಾಗೂ ತಾಲೂಕಿನ ಪ್ರಥಮ ಗ್ರಾಮ ಪಂಚಾಯತ್ ಇದಾಗಲಿದೆ.
ಬೆಳಗ್ಗೆ 10ರಿಂದ ಸಂಜೆ 5.30ರ ವರೆಗೆ ಈ ಸೇವೆ ಲಭ್ಯವಾಗಿದೆ. ಇಲ್ಲಿ ಹೊಸ ಆಧಾರ್ ಮತ್ತು ತಿದ್ದು ಪಡಿ, ಬಯೋಮಿಟ್ರಿಕ್ ಅಪ್ಡೆಟ್, ರೆಟಿನಾ, 5ರಿಂದ 15ವರ್ಷದವರ ತಿದ್ದು ಪಡಿ ಮಾಡಬಹುದಾಗಿದೆ. ಖಾಸಗಿ ಸೇವಾ ಕೇಂದ್ರದಲ್ಲಿ ವಿಳಾಸ, ಜನನ ದಿನಾಂಕ ತಿದ್ದುಪಡಿ ಮಾತ್ರ ಮಾಡಬಹುದಾಗಿತ್ತು.
ಪ್ರತಿ ಆಧಾರ್ ನೋಂದಣಿ ಮತ್ತು ಆಧಾರ್ ತಿದ್ದು ಪಡಿಗೆ ಸಂಗ್ರಹವಾಗುವ 100 ರೂ. ಗಳಲ್ಲಿ ಸಿಎಸ್ಸಿ/ಎಸ್ಪಿವಿ ಅವರಿಗೆ 85 ರೂ. ಗ್ರಾ.ಪಂ./ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆಗೆ 15 ರೂ. ನೀಡಬೇಕಾಗುತ್ತದೆ.
ಈಗಾಗಲೇ ಬಜಪೆ ಪಂಚಾಯತ್ ಕಟ್ಟಡದಲ್ಲಿ ಸೇವಾ ಕೇಂದ್ರಕ್ಕೆ ಅವಶ್ಯಕತೆ ಇರುವ ಕಟ್ಟಡ, ವಿದ್ಯುತ್ ಸಂಪರ್ಕ, ಇಂಟರ್ನೆಟ್, ಬಯೋಮೆಟ್ರಿಕ್, ರೆಟಿನಾ ಕೆಮರಾ ಮುಂತಾದ ಮೂಲಭೂತ ಸೌಕರ್ಯವನ್ನು ಅಳವಡಿಸಲಾಗಿದೆ. ಜತೆಗೆ ಅಂಗವಿಕಲರಿಗೆ ಆವಶ್ಯಕತೆ ಇರುವ ವೀಲ್ಚೇರ್, ವಯಸ್ಕರಿಗೆ ಬೇಕಾಗುವ ಹ್ಯಾಂಡ್ ವಾಕ್ ಸಲಕರಣೆಯನ್ನು ಕೂಡ ಪಂಚಾಯತ್ ವ್ಯವಸ್ಥೆ ಮಾಡಿದೆ. –ಸಾಯೀಶ್ ಚೌಟ, ಪಿಡಿಒ, ಬಜಪೆ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.